ನ. 23 ರಂದು ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಲಕ್ಷ ದೀಪೋತ್ಸವ ,ರಾಜ್ಯಾದ್ಯಂತ ಭಕ್ತರಿಗೆ ಕುಣಿತ ಭಜನೆ ಸೇವೆಗೆ ಅವಕಾಶ – Vishwanews24

Featured, ದಕ್ಷಿಣ ಕನ್ನಡ

ನ. 23 ರಂದು ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಲಕ್ಷ ದೀಪೋತ್ಸವ ,ರಾಜ್ಯಾದ್ಯಂತ ಭಕ್ತರಿಗೆ ಕುಣಿತ ಭಜನೆ ಸೇವೆಗೆ ಅವಕಾಶ

ಪುತ್ತೂರು : ರಾಜ್ಯದ ಖ್ಯಾತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಲ್ಲಿ ಚಂಪಾಷಷ್ಠಿ ಮಹೋತ್ಸವ ಪ್ರಯುಕ್ತ ನವೆಂಬರ್ 23ರಂದು ಲಕ್ಷ ದೀಪೋತ್ಸವ ನಡೆಯಲಿದೆ. ಈ ಬಾರಿ ಈ ವೇಳೆ ಕುಣಿತ ಭಜನೆಯನ್ನು ಏರ್ಪಡಿಸಲಾಗಿದೆ.

ನವೆಂಬರ್ 21 ರ ಕಾರ್ತಿಕ ದ್ವಾದಶಿಯಂದು ಚಂಪಾಷಷ್ಠಿ ಮಹೋತ್ಸವಕ್ಕೆ ಕೊಪ್ಪರಿಗೆ ಏರುವ ಮೂಲಕ ಚಾಲನೆ ಲಭಿಸಲಿದೆ. ಡಿ.5 ಮಾರ್ಗಶಿರ ಶುದ್ಧ ದ್ವಾದಶಿಯಂದು ಬೆಳಿಗ್ಗೆ ಕೊಪ್ಪರಿಗೆ ಇಳಿದು, ರಾತ್ರಿ ನೀರು ಬಂಡಿ ಉತ್ಸವ, ದೈವಗಳ ನಡಾವಳಿ ನಡೆಯುವುದರೊಂದಿಗೆ ಸಂಪನ್ನಗೊಳ್ಳಲಿದೆ’ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ ರಾಂ ಸುಳ್ಳಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕುಕ್ಕೆ ಸುಬ್ರಹ್ಮಣ್ಯ: ಭಕ್ತಿ ಸಡಗರದ ಲಕ್ಷದೀಪೋತ್ಸವ | Prajavani

ಮುಂದಿನ ವಿಧಾನಸಭೆ ಚುನಾವಣೆಗೆ ನಾನು ಸೇರಿದಂತೆ 25 ಪ್ರಖರ ಹಿಂದುತ್ವವಾದಿಗಳು ಪಕ್ಷೇತರ ಅಭ್ಯರ್ಥಿಗಳಾಗಿ ಸ್ಪರ್ಧೆ: ಮುತಾಲಿಕ್ – Vishwanews24

ಲಕ್ಷ ದೀಪೋತ್ಸವದ ದಿನ ಸಂಜೆ 7ರಿಂದ ದೇವಳದ ರಾಜಗೋಪುರದ ಬಳಿಯಿಂದ ರಥಬೀದಿ, ಅಡ್ಡಬೀದಿ, ಕಾಶಿಕಟ್ಟೆಯಾಗಿ ಕುಮಾರಧಾರಾದವರೆಗೆ ಕುಣಿತ ಭಜನೆ ಆಯೋಜಿಸಲಾಗಿದೆ. ಕುಣಿತ ಭಜನೆಯಲ್ಲಿ 1 ಸಾವಿರ ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ. ಭಾಗವಹಿಸುವ ತಂಡಗಳು ನ. 20 ಒಳಗಾಗಿ ದೇವಳದ ಕಚೇರಿಯಲ್ಲಿ ಹೆಸರು ನೊಂದಾಯಿಸಿಕೊಳ್ಳಬೇಕು. ಮಾಹಿತಿಗೆ: 9482646275, ಸಂಪರ್ಕಿಸಬಹುದು ಅಥವಾ ಕ್ಯೂಆರ್‌ ಕೋಡ್‌ ಸ್ಕ್ಯಾನ್ ಮಾಡಿ ನೊಂದಾಯಿಸಿಕೊಳ್ಳಬಹುದು’ ಎಂದರು.

ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ : ಎಲ್ಲದರಲ್ಲೂ ರಾಜಕೀಯ ಮಾಡೋದು ಬಹಳ ಕೆಳ ಮಟ್ಟದ್ದು. ಕೇಸರಿ ಕಂಡರೆ ಏಕೆ ಕಾಂಗ್ರೆಸಿಗರಿಗೆ ಸಿಟ್ಟು’ – ಸಿಎಂ ಬೊಮ್ಮಾಯಿ – Vishwanews24

ಕುಕ್ಕೆಯಲ್ಲಿ ಭಕ್ತಿ ಸಡಗರದ ಲಕ್ಷದೀಪೋತ್ಸವ ಉತ್ಸವ...

Leave a Reply