ಬೆಂಗಳೂರು : ಪಕ್ಷ ಕಟ್ಟೋ ಶಕ್ತಿ ವಿಜಯೇಂದ್ರಗೆ ಮಾತ್ರ ಇದೆ ಅನ್ನೋದು ನಿಜ. ವಿಜಯೇಂದ್ರರನ್ನ ಟೀಕೆ ಮಾಡೋದು ಮೋದಿ, ಅಮಿತ್ ಶಾ ನಡ್ಡಾರನ್ನ ಟೀಕೆ ಮಾಡಿದಂತೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಮ್ಮ ಒಳಜಗಳದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಈಗ ವಿಜಯೇಂದ್ರರನ್ನು ಕೆಳಗಿಳಿಸಿದರೆ ಬಿಜೆಪಿಗೆ ಹತ್ತು ಸೀಟೂ ಬರಲ್ಲ. ಹೈಕಮಾಂಡ್ ವಿಜಯೇಂದ್ರರನ್ನ ಕೆಳಗಿಳಿಸಲ್ಲ, ಅವರೇ ಮುಂದುವರೀತಾರೆ ಅನ್ನೋ ವಿಶ್ವಾಸ ಇದೆ. ಇದೇ ಗುಡ್ ನ್ಯೂಸ್ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಕ್ಷದಲ್ಲಿನ ಬೆಳವಣಿಗೆ ನೋಡಿ ಜನ ಉಗೀತಿದ್ದಾರೆ. ಕಾರ್ಯಕರ್ತರಿಗೆ ನೋವಾಗಿದೆ. ನಾವು ಸೈಲೆಂಟ್ ಇದ್ವಿ, ಯಡಿಯೂರಪ್ಪ, ವಿಜಯೇಂದ್ರ ಮಾತಾಡಬೇಡಿ ಅಂದಿದ್ರು. ಆದ್ರೆ ನಮಗೆ ನೋವಾಗಿದೆ. ಹೀಗಾಗಿ ಇಂದು ತುರ್ತು ಸಭೆ ನಡೆಸಬೇಕಾಯಿತು ಎಂದು ಹೇಳಿದ್ದಾರೆ.
ಕಳೆದ 3-4 ತಿಂಗಳಿಂದ ಜೆ.ಪಿ ನಡ್ಡಾ, ಅಮಿತ್ ಶಾ ಭೇಟಿ ಮಾಡಲಾಗ್ತಿಲ್ಲ, ಯತ್ನಾಳ್ ತಂಡ ಭೇಟಿ ಮಾಡಿದ್ದೀವಿ ಅಂತ ಸುಳ್ಳು ಹೇಳಿಕೊಂಡು ಸ್ಟೋರಿಗಳನ್ನು ಪ್ಲಾಂಟ್ ಮಾಡಿಸ್ತಿದ್ದಾರೆ. ಭೇಟಿಯಾದ ಫೋಟೋ ಕೊಡಿ ಅಂದ್ರೆ ಇಲ್ಲ ತೆಗೀಬೇಡಿ ಅಂದಿದ್ದಾರೆ ಅಂತ ಹೇಳ್ತೀರಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ವಿಜಯೇಂದ್ರರನ್ನ ನೀವು ಕುಗ್ಗಿಸಲು ಆಗಲ್ಲ. ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿ ಪಕ್ಷ ಕಟ್ಟಿದ್ರು. ಅದೇ ರೀತಿ ವಿಜಯೇಂದ್ರ ನಾಡಿನ ಯುವಕರ ಕಣ್ಮಣಿ ಆಗಿದ್ದಾರೆ. ಅಂಥವರ ಬಗ್ಗೆ ಮಾತಾಡ್ತೀರ? ಮುಂದಿನ ವಾರ ನಾವು ಮತ್ತೆ ಸಭೆ ಮಾಡ್ತೀವಿ. 100ಕ್ಕೂ ಹೆಚ್ಚು ಜನ ಸೇರಿ ದೊಡ್ಡ ಸಭೆ ಮಾಡ್ತೀವಿ ಎಂದರು.
ಉಡುಪಿ : ಯುವತಿ ನಾಪತ್ತೆ ಉಡುಪಿ: ನಗರದ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರತೀಕ್ಷಾ (18) ಎನ್ನುವ ಯುವತಿಯು ಆಗಸ್ಟ್…
ಕಾರ್ಕಳ: ಅಪಘಾತದಲ್ಲಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ರಮಾನಾಥ್ ರೈ ಡಿಸ್ಚಾರ್ಜ್ ; 15 ದಿನ ವಿಶ್ರಾಂತಿಗೆ ವೈದ್ಯರ ಸಲಹೆ ಮಂಗಳೂರು…
ಕುಂದಾಪುರ: ಕೋಟೇಶ್ವರದ ಕೋಟಿತೀರ್ಥ ಪುಷ್ಕರಣಿಗೆ ಹಾರಿ ಯುವಕ ಆತ್ಮಹತ್ಯೆ ಕುಂದಾಪುರ: ತಾಲೂಕಿನ ಕೋಟೇಶ್ವರದ ಕೋಟಿತೀರ್ಥ ಪುಷ್ಕರಣಿಗೆ ಹಾರಿ ಯುವಕನೋರ್ವ ಆತ್ಮಹತ್ಯೆ…
ನಂದಿನಿ ಹಾಲಿನ ದರ ಪ್ರತಿ ಲೀಟರ್ ಗೆ ರೂ.8 ಹೆಚ್ಚಳ ಮಾಡಿ : ಮುಖ್ಯಮಂತ್ರಿಗೆ ಹಾಲು ಉತ್ಪಾದಕರ ಒಕ್ಕೂಟಗಳ ಮನವಿ…
ಮೋದಿಯನ್ನು ಭೇಟಿ ಮಾಡಿದ ಪೇಜಾವರ ಶ್ರೀ: ವಿಶ್ವೇಶತೀರ್ಥರ ಜನ್ಮ ಶತಾಬ್ದಿ ಲಾಂಛನ ಬಿಡುಗಡೆ ನವದೆಹಲಿ/ಉಡುಪಿ: ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ…
ಉಳ್ಳಾಲ: ವಿವಾಹಿತ ನೇಣು ಬಿಗಿದುಕೊಂಡು ಆತ್ಮಹತ್ಯೆ ಉಳ್ಳಾಲ: ವಿವಾಹಿತನೋರ್ವ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಳ್ಳಾಲ ಪೊಲೀಸ್ ಠಾಣಾ…