ಪಕ್ಷ ಸಂಘಟನೆ ಜತೆ ಕ್ಷೇತ್ರಾಭಿವೃದ್ಧಿಗೆ ಮೊದಲ ಆದ್ಯತೆ : ಶಾಸಕ ವಿನಯ್‌ ಕುಮಾರ್‌ ಸೊರಕೆ

Featured, ಉಡುಪಿ

ಕಾಪು: ಚುನಾವಣೆಗೆ ದಿನ ಸಮೀಪಿಸುತ್ತಿರುವಂತೆಯೇ, ಕಾಪುವಿನಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳ ವಿವಿಧ ಮುಖಂಡರು ಕಾಂಗ್ರೆಸ್‌ಗೆ ವಲಸೆ ಹೋಗಿದ್ದಾರೆ.

ಬಿಜೆಪಿ ಮುಖಂಡರಾದ ದುಮಣಿ ಭಟ್‌, ನಾರಾಯಣ ಬೆಳ್ಚಡ, ಜೆಡಿಎಸ್‌ ಮುಖಂಡರಾದ ಅಬ್ದುಲ್‌ ಅತೀಫ್‌ ದಾವೂದ್‌, ಶಾಬಾನ್‌ ಉಚ್ಚಿಲ, ಗುರುಪ್ರಸಾದ್‌ ಭಟ್‌ ಉಚ್ಚಿಲ, ಅಬ್ದುಲ್‌ ಹಮೀದ್‌ ಸಹಿತ ಅನೇಕರು ಸೇರ್ಪಡೆಯಾದರು.

ಈ ವೇಳೆ ಮಾತನಾಡಿದ ಶಾಸಕ ವಿನಯ್‌ ಕುಮಾರ್‌ ಸೊರಕೆ, ಜಾತ್ಯತೀತ ಮನೋಭಾವದ ಎಲ್ಲರನ್ನೂ ಸೇರಿಸಿಕೊಂಡು ಪಕ್ಷ ಸಂಘಟನೆ ಜತೆಗೆ ಅಭಿವೃದ್ಧಿ ಕಾರ್ಯಗಳನ್ನು ನಡೆಸಿಕೊಂಡು ಬರಲಾಗಿದೆ. ಮುಂದೆಯೂ ಸರ್ವರ ಸಹಕಾರ ಅಗತ್ಯ ಪಕ್ಷಕ್ಕೆ ಸೇರ್ಪಡೆಗೊಂಡವರಿಗೆ ಮುಂದಿನ ದಿನ ಸೂಕ್ತ ಸ್ಥಾನಮಾನ ಕಲ್ಪಿಸಲಾಗುವುದು. ಎಲ್ಲರನ್ನೂ ಪಕ್ಷದ ಸಂಘಟನೆಯಲ್ಲಿ ಬಳಸಿ ಕೊಳ್ಳಲಾಗುವುದು ಎಂದರು.

ಕೆಪಿಸಿಸಿ ಕಾರ್ಯದರ್ಶಿ ಡಾ| ದೇವಿಪ್ರಸಾದ್‌ ಶೆಟ್ಟಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನವೀನ್‌ ಚಂದ್ರ ಶೆಟ್ಟಿ, ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ದಿನೇಶ್‌ ಕೋಟ್ಯಾನ್‌, ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ವಿಶ್ವಾಸ್‌ ಅಮೀನ್‌, ಕಾಂಗ್ರೆಸ್‌ ಮುಖಂಡರಾದ ಇಮ್ರಾನ್‌, ಲೋಕೇಶ್‌ ಅಂಚನ್‌, ರಫೀಕ್‌, ಸಿರಾಜ್‌ ಉಪಸ್ಥಿತರಿದ್ದರು.