ಪಡುಬಿದ್ರಿ : ಅದಾನಿ ಪವರ್ನಲ್ಲಿ ತಾಂತ್ರಿಕ ದೋಷ; ಭಾರೀ ಸದ್ದಿನೊಂದಿಗೆ ಘಟಕ ಸ್ತಬ್ಧ – vishwanews24
ಪಡುಬಿದ್ರಿ : ಅದಾನಿ ಪವರ್ನಲ್ಲಿ ತಾಂತ್ರಿಕ ದೋಷ; ಪರಿಸರ ವ್ಯಾಪ್ತಿಯಲ್ಲಿ ಎಂದೂ ಕೇಳಿರದ ಭಾರೀ ಸದ್ದು..
: ಅದಾನಿ ಪವರ್ ಲಿಮಿಟೆಡ್ನಿಂದ ಶಾಂತಿಗ್ರಾಮಕ್ಕೆ ಹೋಗುವ 400 ಕೆವಿಎ ವಿತರಣ ಲೈನ್ ರಾತ್ರಿಯ ವೇಳೆ ಸುರಿದ ಮಳೆ, ಸಿಡಿಲಿನಿಂದಾಗಿ ಕೆಟ್ಟುಹೋದ ಪರಿಣಾಮ 1,400 ಮೆ.ವಾ.ನ ಎರಡೂ ವಿದ್ಯುತ್ ಉತ್ಪಾದನ ಘಟಕಗಳು “ಬ್ಲ್ಯಾಕ್ ಔಟ್’ ಆಗಿವೆ. ಈ ಸಂದರ್ಭದಲ್ಲಿ ಎಂದೂ ಕೇಳಿರದ ಭಾರೀ ಸದ್ದು ಪರಿಸರದ ಕೆಲವು ಕಿ.ಮೀ. ವ್ಯಾಪ್ತಿಯಲ್ಲಿ ಕೇಳಿಸಿದೆ.
220 ಕೆವಿಎ ಕೇಮಾರ್ಲೈನಲ್ಲಿ ಕೂಡ ಸದ್ಯ ವಿದ್ಯುತ್ ವಿತರಣೆ ನಿಂತು ಹೋಗಿದೆ. ತಾಂತ್ರಿಕ ದೋಷಗಳನ್ನು ಸರಿಪಡಿಸಿದ ಬಳಿಕಷ್ಟೇ ವಿದ್ಯುತ್ ಉತ್ಪಾದನೆ ಪುನರಾರಂಭವಾಗಬೇಕಿದೆ ಎಂದು ಕಂಪೆನಿ ಮೂಲಗಳು ತಿಳಿಸಿವೆ.
