ಪಡುಬಿದ್ರಿ: ಆಟೋ ರಿಕ್ಷಾಕ್ಕೆ ಬಸ್ ಡಿಕ್ಕಿ : ಆಟೋ ಚಾಲಕ ಸಾವು – vishwanews24
ಪಡುಬಿದ್ರಿ: ಬಸ್ ಢಿಕ್ಕಿಯಾಗಿ ರಿಕ್ಷಾ ಚಾಲಕ ಸಾವು
ಪಡುಬಿದ್ರಿ: ಉಡುಪಿಯಿಂದ ಬೆಂಗಳೂರಿಗೆ ರವಿವಾರ ರಾತ್ರಿ ತೆರಳುತ್ತಿದ್ದ ಖಾಸಗಿ ಬಸ್ ಪಡುಬಿದ್ರಿ – ಕಾರ್ಕಳ ಜಂಕ್ಷನ್ನಲ್ಲಿ ರಿಕ್ಷಾಕ್ಕೆ ಢಿಕ್ಕಿಯಾಗಿ ಚಾಲಕ ಪಾದೆಬೆಟ್ಟು ನಿವಾಸಿ ಮನೋಹರ ಕೋಟ್ಯಾನ್ (49) ಮೃತಪಟ್ಟಿದ್ದಾರೆ.
ರಿಕ್ಷಾದಲ್ಲಿದ್ದ ಗ್ರಾ.ಪಂ. ಮಾಜಿ ಸದಸ್ಯ ಜಯ ಸಾಲ್ಯಾನ್ ಅವರಿಗೆ ಗಂಭೀರ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ.
ಮನೋಹರ ಅವರು ಪಾದೆಬೆಟ್ಟು ನಿವಾಸಿಯಾಗಿದ್ದು 25 ವರ್ಷಗಳಿಂದ ರಿಕ್ಷಾ ಚಲಾಯಿಸುತ್ತಿದ್ದರು. ದ್ವಿಚಕ್ರ, ತ್ರಿಚಕ್ರ ವಾಹನಗಳ ಮೆಕ್ಯಾನಿಕ್ ಆಗಿಯೂ ಹೆಸರು ಗಳಿಸಿದ್ದರು. ಅವರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.
ಮಂಗಳೂರು: ಜು.21ರಿಂದ 24ರವರೆಗೆ ಕೂಳೂರು ಸೇತುವೆಯಲ್ಲಿ ಸಂಚಾರ ಸ್ಥಗಿತ – vishwanews24
