ಪಡುಬಿದ್ರಿ ಕೊರೋನಾ ವಾರಿಯರ್ಸ್ಗೆ ಮೇ 8 ರಂದು ಪಡುಬಿದ್ರಿ ಬಂಟರ ಸಂಘದ ವತಿಯಿಂದ ಅಭಿನಂದನಾ ಕಾರ್ಯಕ್ರಮ: ಡಾ.ದೇವಿಪ್ರಸಾದ್ ಶೆಟ್ಟಿ
ಪಡುಬಿದ್ರಿ ಕೊರೋನಾ ವಾರಿಯರ್ಸ್ಗೆ ಮೇ 8 ರಂದು ಪಡುಬಿದ್ರಿ ಬಂಟರ ಸಂಘದ ವತಿಯಿಂದ ಅಭಿನಂದನಾ ಕಾರ್ಯಕ್ರಮ: ಡಾ.ದೇವಿಪ್ರಸಾದ್ ಶೆಟ್ಟಿ
ಪಡುಬಿದ್ರಿ:ಕೊರೋನಾ ವಾರಿಯರ್ಸ್ ಆಗಿ ಜನಪರ ಕಾಳಜಿಯೊಂದಿಗೆ ಸೇವಾ ಬದ್ಧತೆಯಿಂದ ಪ್ರಾಮಾಣಿಕತೆಯಿಂದ ದುಡಿದ ಪಡುಬಿದ್ರಿ ಬಂಟರ ಸಂಘದ ವ್ಯಾಪ್ತಿಯ ಆಶಾ ಕಾರ್ಯಕರ್ತರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮತ್ತು ಸಿಬ್ಬಂದಿ ವರ್ಗ ಪಡುಬಿದ್ರಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ, ಜನರಿಗೆ ಕೊರೋನಾ ಕಾಳಜಿಯ ಬಗ್ಗೆ ಪ್ರಚಾರ ಸುದ್ದಿ ನೀಡಿದ ಪತ್ರಿಕಾ ಮಾಧ್ಯಮದವರಿಗೆ, ಸ್ವಚ್ಛತೆಗೆ ಆದ್ಯತೆ ನೀಡಿದ ಗ್ರಾಮಪಂಚಾಯತಿಯ ಸಿಬ್ಬಂದಿಗಳಿಗೆ ವಿಶೇಷ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮ 8-ಮೇ-2020 ನೇ ಶುಕ್ರವಾರ ಬೆಳಿಗ್ಗೆ 10ಗಂಟೆಗೆ ಪಡುಬಿದ್ರಿ ಬಂಟರ ಸಂಘದ ಬಂಟರ ಚಾವಡಿಯಲ್ಲಿ ನಡೆಯಲಿದೆ ಎಂದು ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ಐಕಳಬಾವ ಡಾ: ದೇವಿಪ್ರಸಾದ್ ಶೆಟ್ಟಿ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.

