ಪಡುಬಿದ್ರಿ : ಟಯರ್ ಬ್ಲಾಸ್ಟ್ ಆಗಿ ಗೂಡ್ಸ್ ವಾಹನ ಪಲ್ಟಿ – ತಪ್ಪಿದ ಭಾರೀ ದುರಂತ  – vishwanews24

Featured, ಉಡುಪಿ

ಪಡುಬಿದ್ರಿ : ಟಯರ್ ಬ್ಲಾಸ್ಟ್ ಆಗಿ ಗೂಡ್ಸ್ ವಾಹನ ಪಲ್ಟಿ – ತಪ್ಪಿದ ಭಾರೀ ದುರಂತ 

ಪಡುಬಿದ್ರಿ: ಗೂಡ್ಸ್ ವಾಹನವೊಂದು ಟಯರ್ ಬ್ಲಾಸ್ಟ್ ಆದ ಪರಿಣಾಮ ಪಲ್ಟಿಯಾಗಿದ್ದು, ಅದರಲ್ಲಿದ್ದ ಮೂರು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿ, ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತ ಆದ ಘಟನೆ ಸಂಭವಿಸಿದೆ.

ಕಾವೂರಿನಿಂದ ಕಟಪಾಡಿಗೆ ಸೆಂಟ್ರಿಗ್ ಪರಿಕರಗಳನ್ನು ಸಾಗಿಸುತ್ತಿದ್ದ ಗೂಡ್ಸ್ ವಾಹನದ ಹಳೆ ಟಯರ್ ಬ್ಲಾಸ್ಟ್ ಆಗಿ ಎರ್ಮಾಳು  ಪೆಟ್ರೋಲ್ ಬಂಕ್ ಬಳಿ ಹೆದ್ದಾರಿಗೆ ಉರುಳಿ ಬಿದ್ದಿದೆ. ಆ ಸಂದರ್ಭ ಹೆದ್ದಾರಿಯಲ್ಲಿ ಯಾವುದೇ ವಾಹನ ಸಂಚಾರ ಇಲ್ಲದ ಕಾರಣ ನಡೆಯಲಿದ್ದ ಭಾರೀ ದುರಂತ ತಪ್ಪಿದಂತಾಗಿದೆ. ಘಟನೆಯಿಂದ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು ಸಂಚಾರಿ ಪೊಲೀಸರು ಸುಗಮಗೊಳಿಸಿದರು.

ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಹೈಕೋರ್ಟ್ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ – vishwanews24

Leave a Reply