ಪಡುಬಿದ್ರಿ: ಟೆಂಪೊ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿನಿ ಸಾವು – vishwanews24
ಪಡುಬಿದ್ರಿ: ಟೆಂಪೊ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿನಿ ಸಾವು
ಪಡುಬಿದ್ರಿ: ಟೆಂಪೊ ಡಿಕ್ಕಿಯಾಗಿ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿನಿಯೊಬ್ಬರು ಮೃತಪಟ್ಟ ಘಟನೆ ಸಂಭವಿಸಿದೆ.
ಪಡುಬಿದ್ರಿ ನಡ್ಡಾಲು ಬಿಲ್ಲಿತೋಟ ನಿವಾಸಿ ಪ್ರೇಕ್ಷಾ (22) ಮೃತಪಟ್ಟವರು. ಮಂಗಳೂರು ಕಡೆ ಹೋಗುವ ಸರ್ವಿಸ್ ರಸ್ತೆ ದಾಟುವಾಗ ಉಡುಪಿ ಕಡೆಯಿಂದ ಬಂದ ಗೂಡ್ಸ್ ಟೆಂಪೊ ಡಿಕ್ಕಿಯಾಗಿ ರಸ್ತೆಗೆ ಬಿದ್ದು ಅವರ ತಲೆಗೆ ಗಂಭೀರ ಗಾಯವಾಗಿತ್ತು. ಸಾರ್ವಜನಿಕರು ಅವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸಿದ್ದರು.
ವಾಮಂಜೂರಿನ ಕರಾವಳಿ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ, ಪ್ರೇಕ್ಷಾ ಪರೀಕ್ಷೆ ಮುಗಿಸಿ ಮನೆಯತ್ತ ಹೊರಟಿದ್ದರು. ತೀರಾ ಬಡ ಕುಟುಂಬದ ಆಕೆ ತಂದೆಯನ್ನು ಕಳೆದುಕೊಂಡಿದ್ದರು. ಅವರಿಗೆ ತಾಯಿ, ಸಹೋದರ ಇದ್ದಾರೆ.ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
