ಪಡುಬಿದ್ರಿ | ಪಾದೆಬೆಟ್ಟು : ನೇಣು ಬಿಗಿದು ಯುವಕ ಆತ್ಮಹತ್ಯೆ – vishwanews24

Featured, ಉಡುಪಿ

ಪಡುಬಿದ್ರಿ |ಪಾದೆಬೆಟ್ಟು : ನೇಣು ಬಿಗಿದು ಯುವಕ ಆತ್ಮಹತ್ಯೆ

ಪಡುಬಿದ್ರಿ : ಪಾದೆಬೆಟ್ಟುವಿನ ಯುವಕನೋರ್ವ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಕೊರಳೊಡ್ಡಿದ ಘಟನೆ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಯುವಕ ಪಾದೆಬೆಟ್ಟು ನಿವಾಸಿ ರಿತೇಶ್(33), ಈತ ತನ್ನ ಚಿಕ್ಕಮ್ಮನೊಂದಿಗೆ ವಾಸವಾಗಿದ್ದು, ಲೈನ್ ಸೇಲ್ ವೃತ್ತಿ ನಡೆಸುತ್ತಿದ್ದ, ಚಿಕ್ಕಮ್ಮ ಹಾಗೂ ಅವರ ಮಕ್ಕಳು ಹೊರ ಹೋಗಿದ್ದ ಸಂದರ್ಭದಲ್ಲಿ ಮನೆಯಲ್ಲೇ ಈತ ಈ ಕೃತ್ಯ ನಡೆಸಿದ್ದಾನೆ ಎನ್ನಲಾಗಿದೆ.

ತಕ್ಷಣ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಯತ್ನ ವಿಫಲವಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ, ಸತ್ಯ ವಿಚಾರ ಪೊಲೀಸ್ ತನಿಖೆಯಿಂದಷ್ಟೇ ತಿಳಿಯ ಬೇಕಾಗಿದೆ.

Leave a Reply