ಪಡುಬಿದ್ರಿ: ಐದು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿ ಬಳಿಕ ಪತ್ನಿಯ ಹೆಸರಿನಲ್ಲಿ ಸಾಲ ಮಾಡಿ ತೀರಿಸದೆ ಅದರಿಂದ ಪಾರಾಗಲು ಹೆಂಡತಿಯೊಂದಿಗೆ ಆತ್ಮಹತ್ಯೆ ನಾಟಕವಾಡಿ ಕೊಲೆ ಮಾಡಿರುವುದಾಗಿ ಪತಿ ಹಾಗೂ ಆತನ ಮನೆಯವರ ವಿರುದ್ಧ ಮೃತ ಮಹಿಳೆಯ ಅಕ್ಕ ಪಡುಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪೈಯಾರ್ ರಸ್ತೆ ನಿವಾಸಿ ವಿದ್ಯಾ(29) ಮೃತರು ಎಂದು ಗುರುತಿಸಲಾಗಿದೆ. ವಿದ್ಯಾ ಅವರು ಬಡಾ ಗ್ರಾಮದ ಮುಳ್ಳುಗುಡ್ಡೆ ನಿವಾಸಿ ಯತಿನ್ ರಾಜ್ ಎಂಬಾತನನ್ನು ಪ್ರೀತಿಸಿ 2017 ರ ಫೆ .28 ರಂದು ವಿವಾಹವಾಗಿದ್ದರು.
ಗಂಡನ ಮನೆಯಲ್ಲಿ ಯತಿನ್ ರಾಜ್, ಮಾವ ರಾಘು, ಅತ್ತೆ ಗೀತಾ ಮತ್ತು ಮೈದುನ ಯಕ್ಷಿತ್ ಎಂಬವರು ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರು ಹಾಗೂ ಯತಿನ್ ರಾಜ್ ನು ಸರಿಯಾಗಿ ಕೆಲಸ ಮಾಡದೇ ವಿದ್ಯಾಳಿಂದ ಹಲವು ಬ್ಯಾಂಕ್, ಸೊಸೈಟಿ ಸಂಘ, ಸಂಸ್ಥೆಗಳಿಂದ ಸಾಲ ತೆಗೆಸಿ ಅದನ್ನು ಖರ್ಚು ಮಾಡುತ್ತಿದ್ದ ಎಂದು ದೂರಲಾಗಿದೆ.
ಇದಲ್ಲದೇ ವಿದ್ಯಾ ಅವರ ತಂದೆ ಕೊಟ್ಟ ಹಣವನ್ನೂ ಖರ್ಚು ಮಾಡಿ, ಚಿನ್ನವನ್ನು ಮಾರಾಟ ಮಾಡಿ ಖರ್ಚು ಮಾಡಿದ್ದಾನೆ. ಇದರ ಜೊತೆಗೆ ಇನ್ನೂ ಹೆಚ್ಚಿನ ಸಾಲ ತೆಗೆದುಕೊಡುವಂತೆ ಒತ್ತಾಯಿಸಿ ಕಿರುಕುಳ ನೀಡುತ್ತಾ ವರದಕ್ಷಿಣೆಗಾಗಿ ದೈಹಿಕ ಹಿಂಸೆ ನೀಡುತ್ತಿದ್ದನು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಗಂಡನ ಮನೆಯವರ ಕಿರುಕುಳವು ಹೆಚ್ಚಾಗಿ ಅದನ್ನು ತಡೆಯಲಾರದೆ ಯತಿನ್‌ರಾಜ್ ಜತೆ ಮನೆಯಿಂದ ಹೊರಬಂದು ಕಳೆದೆರಡು ತಿಂಗಳ ಹಿಂದೆ ಉಚ್ಚಿಲದಲ್ಲಿ ಹಾಗೂ ಕಳೆದೊಂದು ತಿಂಗಳುಗಳಿಂದ ಕಾಪು ಲೈಟ್‌ಹೌಸ್ ಬಳಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಅಲ್ಲೂ ಆರೋಪಿ ಗಂಡನ ಕಿರುಕುಳ ತಪ್ಪಿರಲಿಲ್ಲ. ಇನ್ನು ಮುಂದಕ್ಕೆ ಸಾಲ ಮಾಡಿಕೊಡುವುದಿಲ್ಲ ಎಂದು ವಿದ್ಯಾ ಹೇಳಿದ್ದರಿಂದ ವಿದ್ಯಾರನ್ನು ಕೊಂದರೆ ಅವರಿಂದ ಮಾಡಿಸಿದ ಸಾಲ ತೀರುತ್ತದೆ ಎಂಬ ಕಾರಣಕ್ಕೆ ಯತಿನನು ಯೋಜನೆ ರೂಪಿಸಿ ಇಬ್ಬರೂ ವಿಷ ಸೇವಿಸಿ ಸಾಯೋಣವೆಂದು ಪತ್ನಿಯನ್ನು ನಂಬಿಸಿ, ಅವಳಿಗೆ ಹೆಚ್ಚಿನ ಪ್ರಮಾಣದಲ್ಲಿ ವಿಷ ಕುಡಿಸಿ, ಬಳಿಕ ತನ್ನ ಮೇಲೆ ಅನುಮಾನ ಬರಬಾರದೆಂದು ತಾನೂ ಸ್ವಲ್ಪ ಪ್ರಮಾಣದಲ್ಲಿ ವಿಷ ಸೇವಿಸಿ ನಾಟಕ ಮಾಡುತ್ತಿರುವುದಾಗಿ ಪಡುಬಿದ್ರಿ ಪೊಲೀಸರಿಗೆ ಈ ಕುರಿತಾಗಿ ದೂರನ್ನಿತ್ತಿರುವ ವಿದ್ಯಾಳ ಅಕ್ಕ ಲೀಲಾವತಿ ತಿಳಿಸಿದ್ದಾರೆ.
ನೊಯ್ಡಾ ವಿಮಾನ ನಿಲ್ದಾಣಕ್ಕೆ ನರೇಂದ್ರ ಮೋದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಮರುನಾಮಕರಣ ನವದೆಹಲಿ: ಉತ್ತರ ಪ್ರದೇಶದ ಜೆವಾರ್‌ನಲ್ಲಿರುವ ನೋಯ್ಡಾ…
ಮಂಗಳೂರು: MRPL ಅಪಘಾತದಲ್ಲಿ ಮೃತಪಟ್ಟ ಮನೀಶ್ ಕರ್ಕಡ ಕುಟುಂಬಕ್ಕೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸಿದ EPFO ಮಂಗಳೂರು: ರಿಫೈನರಿ &…
ಗೃಹಲಕ್ಷ್ಮಿ ಯೋಜನೆ ಮರುಪರಿಶೀಲನೆ : ಹೊಸ ಅರ್ಜಿ, ಹೊಸ ಷರತ್ತುಗಳು ; ಈ ದಾಖಲೆಗಳು ಕಡ್ಡಾಯ ಬೆಂಗಳೂರು: ಕರ್ನಾಟಕ ಸರ್ಕಾರದ…
ಉಡುಪಿ: ಉದ್ಯೋಗಕ್ಕಾಗಿ ಅಲೆದಾಡುವ ಯುವಜನರ ಬಳಿಗೇ ಉದ್ಯೋಗಾವಕಾಶ : ಡಾ. ಕೆ. ಪ್ರಕಾಶ್ ಶೆಟ್ಟಿ ಉಡುಪಿ: ಯುವಜನರು ನಿರಂತರ ಪ್ರಯತ್ನದ…
ಕೋರಿಯರ್ ಮೂಲಕ ವಾಟರ್ ಪ್ಯೂರಿಫೈಯರ್‌ನಲ್ಲಿ ಎಂಡಿಎಂಎ ಸಾಗಾಟ.. ಮಂಗಳೂರು ಸಿಸಿಬಿ ಬಲೆಗೆ ಮೂವರು ಆರೋಪಿಗಳು; ₹1.58 ಕೋಟಿ ಮೌಲ್ಯದ ಸೊತ್ತು…
ಮಂಗಳೂರು: ಅನುಮಾನಾಸ್ಪದ ಸಾವು ಪ್ರಕರಣ ; ಎರಡು ತಿಂಗಳ ಬಳಿಕ ಸಮಾಧಿಯಿಂದ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ ಮಂಗಳೂರು: ಅನುಮಾನಾಸ್ಪದ…