ಪಡುಬಿದ್ರಿ ಬಂಟರ ಸಂಘದ ವತಿಯಿಂದ ಕೊರೋನಾ ವಾರಿಯರ್ಸ್‌ ಗೆ ಅಭಿನಂದನೆ.

Featured, ಉಡುಪಿ

ಪಡುಬಿದ್ರಿ ಬಂಟರ ಸಂಘದ ವತಿಯಿಂದ ಕೊರೋನಾ ವಾರಿಯರ್ಸ್‌ ಗೆ ಅಭಿನಂದನೆ.

ಪಡುಬಿದ್ರಿ: ಪಡುಬಿದ್ರಿ ಬಂಟರ ಸಂಘದ ವತಿಯಿಂದ ಕೊರೋನಾ ವಾರಿಯರ್ಸ್‌ ಆಶಾ ಕಾರ್ಯಕರ್ತೆಯರು,ನರ್ಸ್,ಪೋಲಿಸ್ ಸಿಬ್ಬಂದಿ, ಮಾಧ್ಯಮ ಪತ್ರಕರ್ತರಿಗೆ ಅಭಿನಂದನ ಕಾರ್ಯಕ್ರಮ ಶುಕ್ರವಾರ ಪಡುಬಿದ್ರಿ ಬಂಟರ ಭವನದ ಬಂಟರ ಚಾವಡಿಯಲ್ಲಿ ನಡೆಯಿತು.


ಪ್ರಾಸ್ತಾವಿಕ ಮಾತಾಗಳನ್ನಾಡಿದ ಅಧ್ಯಕ್ಷ ಡಾ ದೇವಿಪ್ರಸಾದ್ ಶೆಟ್ಟಿ” ಕೊರೋನಾ ವಾರಿಯರ್ಸ್‌ ಕುಟುಂಬದ ಚಿಂತನೆ ಮಾಡದೆ ಇಡೀ ಸಮಾಜವೆ ನಮ್ಮ ಕುಟುಂಬ ಎಂದು ಭಾವಿಸಿ ರಾತ್ರಿ ಹಗಲು ಎನ್ನದೆ ಜನರ ಒಳಿತಿಗಾಗಿ ಕಾರ್ಯನಿರ್ವಹಿಸಿದವರನ್ನು ಗೌರವಿಸುವುದು ಜವಾಬ್ದಾರಿ ,ಜನತೆ ಇವರನ್ನು ಗೌರವಿಸಬೇಕೆ ಹೊರತು ಯಾವುದೇ ರೀತಿಯಲ್ಲಿ ಅಗೌರವ ತೋರಬಾರದು ಎಂದರು.

ಪಡುಬಿದ್ರಿ ಎಸ್ ಐ ಸುಬ್ಬಣ್ಣ ಮಾತಾಡಿ” ಸಾರ್ವಜನಿಕರ ಸಹಕಾರವೇ ನಮಗೆ ಸನ್ಮಾನ ಇದುವರೆಗೆ ಯಾವುದೇ ರೀತಿಯ ಕೊರೋನಾ ವಿಚಾರವಾಗಿ ಪಡುಬಿದ್ರಿ ಠಾಣ ವ್ಯಾಪ್ತಿಯಲ್ಲಿ ಯಾವುದೇ ಅಹಿತರ ಘಟನೆ ನಡೆದಿಲ್ಲ ಇದು ಅತ್ಯಂತ ತೃಪ್ತಿ ಮುಂದಿನ ದಿನವೂ ಸಾರ್ವಜನಿಕ ಸಹಕಾರ ಅಗತ್ಯ ಎಂದರು.”


ವೈದ್ಯಧಿಕಾರಿ ಡಾ. ಬಿ ಬಿ ರಾವ್ ಮಾತಾಡಿ ” ಮುಂದಿನ ಚಾಲೆಂಜಿಗ್ ದಿನಗಳು,ವಿದೇಶದಿಂದ ಹೊರ ರಾಜ್ಯದಿಂದ ಬರುವ ನಮ್ಮೂರಿನ‌ ಜನತೆಯ ರಕ್ಷಣೆ ಅಗತ್ಯವಾಗಿದೆ ,ಊರಿನ ಜನತೆ ಯಾವುದೇ ಭಯ ಪಡುವ ಅಗತ್ಯ ಇಲ್ಲ ಹೊರಗಿನಿಂದ ಬರುವವರಿಗೆ ಕಡ್ಡಾಯ ಕ್ವಾರಂಟೇನ್ ಮಾಡಲಾಗುತ್ತೆ ಮತ್ತು ಎಲ್ಲರೂ ನಮ್ಮೊಂದಿಗೆ ಸಹಕರಿಸಿ‌ ಎಂದರು.

ಈ ಸಂಧರ್ಭದಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ತಾಲೂಕು ಪಂಚಾಯತ್ ಅಧ್ಯಕ್ಷೆ ನೀತಾ ಗುರುರಾಜ್, ಹಿರಿಯ ಪತ್ರಕರ್ತ ರಾಮಚಂದ್ರ ಆಚಾರ್ಯ, ಗ್ರಾಮ‌ಪಂಚಾಯತ್ ಅಧ್ಯಕ್ಷ ಶ್ರೀ ದಮಯಂತಿ ಅಮೀನ್, ವೈ ಸುಕುಮಾರ್, ಸಂಘದ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ,ಕೋಶಾಧಿಕಾರಿ ರವಿ ಶೆಟ್ಟಿ,ಕಾರ್ಯಕ್ರಮದ ಆಯೋಜಕ ಪ್ರಕಾಶ್ ಶೆಟ್ಟಿ ಸೇರಿದಂತೆ ಪಡುಬಿದ್ರಿ ಬಂಟರ ಸಂಘದ ಮುಖಂಡರು ಉಪಸ್ಥಿತರಿದ್ದರು

ವರದಿ: ಪುರುಷೋತ್ತಮ ಸಾಲಿಯಾನ್, ವಿಶ್ವನ್ಯೂಸ್24 9343846360