ಪಡುಬಿದ್ರಿ ಬಂಟರ ಸಿರಿಮುಡಿ ಕ್ರೆಡಿಟ್ ಕೋ – ಆಪರೇಟಿವ್‌ ಸಂಘದ ಅಧ್ಯಕ್ಷರಾಗಿ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು ಆಯ್ಕೆ – vishwanews24

Featured, ಉಡುಪಿ

ಪಡುಬಿದ್ರಿ ಬಂಟರ ಸಿರಿಮುಡಿ ಕ್ರೆಡಿಟ್ ಕೋ – ಆಪರೇಟಿವ್‌ ಸಂಘದ ಅಧ್ಯಕ್ಷರಾಗಿ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು ಆಯ್ಕೆ 

ಪಡುಬಿದ್ರಿ ಬಂಟರ ಸಂಘದಲ್ಲಿ ನೂತನವಾಗಿ ಪ್ರಾರಂಭಗೊಂಡ ಸಿರಿಮುಡಿ ಕ್ರೆಡಿಟ್ ಕೋ-ಆಪರೇಟಿವ್ ಸಂಘ (ನಿ.) ಪಡುಬಿದ್ರಿ ಇದರ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಮುಂದಿನ 5 ವರ್ಷಗಳ ಅವಧಿಗೆ ಡಾ| ದೇವಿಪ್ರಸಾದ ಶೆಟ್ಟಿ ಬೆಳಪು ಅವಿರೋಧವಾಗಿ ಆಯ್ಕೆಗೊಂಡಿರುತ್ತಾರೆ.

ಉಪಾಧ್ಯಕ್ಷರಾಗಿ ಶ್ರೀನಾಥ ಹೆಗ್ಡೆ ನಡ್ಡಾಲುಗುತ್ತು ನಿರ್ದೇಶಕರುಗಳಾಗಿ ರವೀಂದ್ರನಾಥ ಜೆ. ಹೆಗ್ಡೆ, ಎರ್ಮಾಳ್ ಶಶಿಧರ ಶೆಟ್ಟಿ, ಸಾಂತೂರು ಭಾಸ್ಕರ ಶೆಟ್ಟಿ, ಗುಂಡ್ಲಾಡಿ ಸುರೇಶ ಶೆಟ್ಟಿ, ನವೀನಚಂದ್ರ ಜಿ. ಶೆಟ್ಟಿ, ಸಂತೋಷ ಶೆಟ್ಟಿ ಪಲ್ಲವಿ, ಮಾಧವ ಸಿ, ಶೆಟ್ಟಿ, ಪ್ರಕಾಶ್ ಶೆಟ್ಟಿ ಪಡುಹಿತ್ತು. ರವಿಶೆಟ್ಟಿ ಗುಂಡ್ಲಾಡಿ, ಸಂತೃಪ್ತಿ ಎಂ. ಶೆಟ್ಟಿ, ಶೋಭಾ ಜಿ. ಶೆಟ್ಟಿ ಆಯ್ಕೆಗೊಂಡಿರುತ್ತಾರೆ.

ನೂತನವಾಗಿ ಪ್ರಾರಂಭಗೊಂಡಿರುವ ಸಂಘಕ್ಕೆ ಪೂನಾದ ಉದ್ಯಮಿ ಸದಾನಂದ ಶೆಟ್ಟಿಯವರ ಕೊಡುಗೆ ಯಿಂದ ಕಟ್ಟಡ ನಿರ್ಮಾಣಗೊಳ್ಳುತ್ತಿದ್ದು, ಸಂಪದಲ್ಲಿ ಸೇಫ್ ಲಾಕರ್ ಸೌಲಭ್ಯದೊಂದಿಗೆ ಠೇವಣಾತಿಗೂ ಆಕರ್ಷಕ ಬಡ್ಡಿದರ ನೀಡಲಾಗುವುದು. ಎಲ್ಲಾ ರೀತಿಯ ಸಾಲದ ಸೌಲಭ್ಯಗಳನ್ನು ಸರಳ ರೀತಿಯಲ್ಲಿ ನೀಡುವುದಲ್ಲದೆ ಪಡುಬಿದ್ರಿ, ಪರಿಸರದಲ್ಲಿ ಮಾದರಿ ಬ್ಯಾಂಕಿಂಗ್‌ ವ್ಯವಸ್ಥೆಯ ಸಂಕಲ್ಪ ಹೊಂದಲಾಗಿದೆ. ಗ್ರಾಹಕರಿಗೆ ಉತ್ತಮ ಸೇವೆ ನೀಡಲಾಗುವುದು. ಸಂಘದ ಲಾಭಾಂಶದಲ್ಲಿ ಸಮಾಜ ಮುಖಿ ಕಾರ್ಯಕ್ರಮಗಳಿಗೂ ಸಹಕಾರ ನೀಡಲಾಗುವುದೆಂದು ಸಂಘದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Leave a Reply