Featured

ಪಡುಬಿದ್ರಿ : ಮುದರಂಗಡಿ ಪಿಡಿಒ ಕಾರ್ಯಕ್ಕೆ ಅಡ್ಡಿ ಆರೋಪ ; ಗ್ರಾ.ಪಂ. ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರ ವಿರುದ್ಧ ಪ್ರಕರಣ ದಾಖಲು – Vishwanews24

ಪಡುಬಿದ್ರಿ : ಮುದರಂಗಡಿ ಪಿಡಿಒ ಕಾರ್ಯಕ್ಕೆ ಅಡ್ಡಿ ಆರೋಪ ; ಗ್ರಾ.ಪಂ. ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರ ವಿರುದ್ಧ ಪ್ರಕರಣ ದಾಖಲು

ಪಡುಬಿದ್ರಿ: ನನ್ನ ವಿರುದ್ದ ಪದೇ ಪದೇ ಮೇಲಾಧಿಕಾರಿಗಳಿಗೆ ದೋಷಪೂರಿತ ಹೆಗೆತನ ಸಾಧಿಸುವ‌ ಮತ್ತು ವರ್ಗಾವಣೆ ಮಾಡವೇಕೆನ್ನುವ ಉದ್ದೇಶದಿಂದ ಸುಳ್ಳು ದೂರು‌ ನೀಡಿದ್ದಾರೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷ ವಿರುದ್ದ ಮುದರಂಗಡಿ ಗ್ರಾಮ ಪಂಚಾಯಿತಿ‌ ಪಿಡಿಒ ಸುರೇಶ್ ದೂರು ನೀಡಿದ್ದಾರೆ.

ನಾನು 2020ರ ಅಕ್ಟೋಬರ್ 5ರಿಂದ ಮುದರಂಗಡಿ ಗ್ರಾಮದ ಮುದರಂಗಡಿ ಗ್ರಾಮ ಪಂಚಾಯತಿ ಕಛೇರಿಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಕೆಲಸ ಮಾಡಿಕೊಂಡಿದ್ದೇನೆ. ಗ್ರಾಮ‌ ಪಂಚಾಯತ್ನ ಉಪಾಧ್ಯಕ್ಷ‌ ಶರತ್ ಶೆಟ್ಟಿ, ಅಧ್ಯಕ್ಷೆ ಯೋಗಿನಿ ಶೆಟ್ಟಿ ಮತ್ತು ಶಿವರಾಮ ಭಂಡಾರಿಯವರು ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಸಾಧಿಸುವ ನಿಟ್ಟಿನಲ್ಲಿ ನನ್ನ ಮೇಲೆ ಒತ್ತಡ ಹೇರಿ, ಕಾನೂನುಬಾಹಿರ ಕೃತ್ಯವೆಸಗಲು ಪ್ರೇರೇಪಿಸಿರುವುದನ್ನು ಒಪ್ಪದಿರುವಾಗ ಎರಡು ಬಾರಿ ಸುಳ್ಳುದೂರುಗಳನ್ನು ನೀಡಿ ಕಾರ್ಯ ಚಟುವಟಿಕೆಗಳ ಮೇಲೆ ಇಲಾಖಾಧಿಕಾರಿಗಳು ತನಿಖೆಜಿಲ್ಲಾಧಿಕಾರಿ ನಡೆಸುವಂತೆ ಮಾಡಿದ್ದಾರೆ.

ಪಡುಬಿದ್ರಿ : ಆ.29ರಂದು ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ನೂತನ ಶಾಖೆ ಪ್ರಾರಂಭ – Vishwanews24

ಈ ಬಗ್ಗೆ ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ, ಸಹಾಯಕ ಕಾರ್ಯದರ್ಶಿ, ಅಧೀಕ್ಷಕರು, ಅಭಿವೃದ್ಧಿ ಶಾಖೆ ರವರು ಮುದರಂಗಡಿ ಗ್ರಾಮ ಪಂಚಾಯತಿಗೆ ಆಗಮಿಸಿ ನಡೆಸಿದ ತನಿಖೆಯಲ್ಲಿ ಆರೋಪ ಸುಳ್ಳೆಂದು ಸಾಬೀತಾಗಿತ್ತು. ನಂತರದ ದಿನಗಳಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶರತ್ ಶೆಟ್ಟಿ, ಅಧ್ಯಕ್ಷೆ ಯೋಗಿನಿ ಶೆಟ್ಟಿ, ನಮ್ಮ ಮಾತಿಗೆ ಬೆಲೆ ಕೊಡದಿದ್ದರೆ, ಸಿಬ್ಬಂದಿಗಳ ವೇತನ, ಸಾದಿಲ್ವಾರು ಬಿಲ್ಲುಗಳಿಗೆ ಸಹಿ ಹಾಕಲು ಬಿಡುವುದಿಲ್ಲ. ಇಷ್ಟ ಇದ್ದರೆ ಕೆಲಸ ಮಾಡು, ಬೇರೆ ಅಧಿಕಾರಿಯ ವ್ಯವಸ್ಥೆ ಮಾಡಿಕೊಳ್ಳುತ್ತೇವೆ ಮತ್ತು ಗ್ರಾಮ ಪಂಚಾಯತಿಗೆ ನಾಳೆಯಿಂದ ಬೀಗಹಾಕುತ್ತೇವೆ ಎಂದು ಬೆದರಿಸಿದ್ದಾರೆ.

ಸರ್ಕಾರಿ ಪ್ರೌಢಶಾಲೆ ವಿದ್ಯಾನಗರದಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲೂ ತಾನೊಬ್ಬ ಅಧಿಕಾರಿಯಾಗಿದ್ದರೂ ಹೀಯಾಳಿಸಿ ಏಕವಚನದಲ್ಲಿ ನಿಂದಿಸಿದ್ದಾರೆ. ಎರಡೆರಡು ಬಾರಿ ವರ್ಗಾವಣೆ ಆದೇಶವನ್ನು ಮಾಡಿಸಿರುತ್ತಾರೆ. ಅಲ್ಲದೇ ಪಂಚಾಯತಿಯಲ್ಲಿ ಸೇವೆ ಮಾಡಲು ಬಿಡುವುದಿಲ್ಲ ಎನ್ನುವ ದುರುದ್ದೇಶದಿಂದ ಇತರೆ 7 ಜನ ಸದಸ್ಯರನ್ನು ಒಟ್ಟುಗೂಡಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಎದುರು ಪ್ರತಿಭಟನೆ ನಡೆಸಿ ಮೌಖಿಕ ದೂರು ನೀಡಿದ್ದಾರೆ.

ಇದರಿಂದ ನಾನು ಸಾಕಷ್ಟು ನೋವು ಅನುಭವಿಸಿದ್ದೇನೆ. ಮೇಲಾಧಿಕಾರಿಗಳಿಗೆ ದ್ವೇಷಪೂರಿತ ಹಗೆತನ ಸಾಧಿಸುವ ಮತ್ತು ವರ್ಗಾವಣೆ ಮಾಡಬೇಕೆನ್ನುವ ಉದ್ದೇಶದಿಂದ ಪದೇ ಪದೇ ಸುಳ್ಳು ದೂರುಗಳನ್ನು ನೀಡುತ್ತಾ ತೊಂದರೆ ನೀಡಿರುವುದಾಗಿ ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂದಾಪುರ : 100 ಕಾಲು ಸಂಕಗಳಿಗೆ 5ಕೋಟಿ ಅನುದಾನ ಬಿಡುಗಡೆಗೆ ಅನುಮೋದನೆ..

Vishwa News 24

Recent Posts

ಮಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಕ್ರಮ ಚಟುವಟಿಕೆ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಸೂಚನೆ – vishwanews24

ಮಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಕ್ರಮ ಚಟುವಟಿಕೆ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಸೂಚನೆ ಮಂಗಳೂರು: ರಾತ್ರಿ ವೇಳೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಂಗಳಮುಖಿಯರು ಅಕ್ರಮ…

14 hours ago

ಉಡುಪಿ ನಗರಸಭೆ ಬಾಕಿ ಕಾಮಗಾರಿ ಶೀಘ್ರ ಆರಂಭಕ್ಕೆ ಜಿಲ್ಲಾಧಿಕಾರಿಗೆ ಬಿಜೆಪಿ ಮನವಿ – vishwanews24

ಉಡುಪಿ ನಗರಸಭೆಯ ಕಾಮಗಾರಿಗಳಿಗೆ ಚುರುಕು ಮುಟ್ಟಿಸಲು ಜಿಲ್ಲಾಧಿಕಾರಿಗೆ ಬಿಜೆಪಿ ಮನವಿ ಉಡುಪಿ: ಉಡುಪಿ ನಗರಸಭೆಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ತಕ್ಷಣ…

14 hours ago

ಬಂಟ್ವಾಳ: ಮಾದಕ ದ್ರವ್ಯ ಮಾರಾಟ ಶಂಕೆ; ಓರ್ವನ ಬಂಧನ – vishwanews24

ಬಂಟ್ವಾಳ: ಮಾದಕ ದ್ರವ್ಯ ಮಾರಾಟ ಶಂಕೆ; ಓರ್ವನ ಬಂಧನ, 1.93 ಲಕ್ಷ ರೂ. ಮೌಲ್ಯದ ಸೊತ್ತು ವಶ ಬಂಟ್ವಾಳ: ಮಾದಕ…

14 hours ago

ಮಂಡ್ಯ : ಅನಾರೋಗ್ಯದಿಂದ ಎಎಸ್‌ಪಿ ಸಿ.ಇ. ತಿಮ್ಮಯ್ಯ ನಿಧನ – vishwanews24

ಮಂಡ್ಯ : ಅನಾರೋಗ್ಯದಿಂದ ಎಎಸ್‌ಪಿ ಸಿ.ಇ. ತಿಮ್ಮಯ್ಯ ನಿಧನ ಮಂಡ್ಯ: ಅನಾರೋಗ್ಯದಿಂದ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ (57)…

15 hours ago

ಕಾಪು : ಇಂದು ಸಂಜೆ ಉಚ್ಚಿಲ ದಸರಾದ ದೀಪಾಲಂಕಾರ ಉದ್ಘಾಟನೆ – vishwanews24

ಕಾಪು : ಇಂದು ಸಂಜೆ ಉಚ್ಚಿಲ ದಸರಾದ ದೀಪಾಲಂಕಾರ ಉದ್ಘಾಟನೆ ಕಾಪು: ದ.ಕ. ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟಿರುವ ಶ್ರೀ…

15 hours ago

ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ‘ನರೇಂದ್ರ ಮೋದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ಮರುನಾಮಕರಣ: ಯೋಗಿ ಆದಿತ್ಯನಾಥ್ ಘೋಷಣೆ – vishwanews24

ನೊಯ್ಡಾ ವಿಮಾನ ನಿಲ್ದಾಣಕ್ಕೆ ನರೇಂದ್ರ ಮೋದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಮರುನಾಮಕರಣ ನವದೆಹಲಿ: ಉತ್ತರ ಪ್ರದೇಶದ ಜೆವಾರ್‌ನಲ್ಲಿರುವ ನೋಯ್ಡಾ…

1 day ago