ಪಣಂಬೂರು: ಸಮುದ್ರ ಪಾಲಾಗಿದ್ದ ಇಬ್ಬರ ಮೃತದೇಹ ಪತ್ತೆ; ಇನ್ನೋರ್ವನಿಗಾಗಿ ಶೋಧ – Vishwanews24

Featured, ದಕ್ಷಿಣ ಕನ್ನಡ

ಪಣಂಬೂರು: ಸಮುದ್ರ ಪಾಲಾಗಿದ್ದ ಇಬ್ಬರ ಮೃತದೇಹ ಪತ್ತೆ- ಇನ್ನೋರ್ವನಿಗಾಗಿ ಶೋಧ

ಪಣಂಬೂರು: ಪಣಂಬೂರು ಬೀಚ್ ನಲ್ಲಿ ರವಿವಾರ ಸಮುದ್ರ ಪಾಲಾಗಿದ್ದ ಮೂವರು ಯುವಕರ ಪೈಕಿ ಇಬ್ಬರ ಮೃತದೇಹಗಳು ಪತ್ತೆಯಾಗಿವೆ.

ಬಜಪೆ ಸಮೀಪದ ಪೊರ್ಕೋಡಿ ನಿವಾಸಿ ಖಾಸಗಿ ಕಂಪೆನಿಯ ಡೆಲಿವರಿ ಬಾಯ್‌ ಮಿಲನ್‌ (20) ಮತ್ತು ಬೈಕಂಪಾಡಿ ಕೈಗಾರಿಕಾ ಪ್ರದೇಶದ ಖಾಸಗಿ ಘಟಕದ ಸೂಪರ್‌ ವೈಸರ್‌ ನಾಗರಾಜ್‌ (26) ಅವರ ಶವಗಳು ಬೀಚಿನ ಬ್ರೇಕ್‌ ವಾಟರ್‌ ಬಳಿ ಸಿಕ್ಕಿವೆ. ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದ ಖಾಸಗಿ ಕಾಲೇಜಿನ ವಿದ್ಯಾರ್ಥಿ ಲಿಖಿತ್‌ (18) ಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಉಡುಪಿ: ನಾಸಿರ್ ಹುಸೇನ್ ದೇಶಕ್ಕೆ ಆಪತ್ತು ತರುವ ವ್ಯಕ್ತಿ,  ರಾಜ್ಯಸಭೆ ಪ್ರವೇಶಿಸಿದ ನಂತರ ಗಂಡಾಂತರ ತರುವ ಸಾಧ್ಯತೆ ಇದೆ :  ಶಾಸಕ ಯಶ್ ಪಾಲ್ ಸುವರ್ಣ – Vishwanews24

ರವಿವಾರ ಸಮುದ್ರಕ್ಕಿಳಿದ ಸಂದರ್ಭ ಅಪಾಯಕ್ಕೆ ಸಿಲುಕಿದ್ದ ಇನ್ನೋರ್ವ ಯುವಕ ಪೊರ್ಕೋಡಿ ನಿವಾಸಿ ಮನೋಜ್‌ ಎಂಬವರನ್ನು ಜೀವ ರಕ್ಷಕ ಸಿಬಂದಿ ರಕ್ಷಿಸಿದ್ದರು. ಇದೀಗ ಪಣಂಬೂರು ಬೀಚ್‌ ಬಳಿ ಸಮುದ್ರಕ್ಕೆ ಇಳಿಯ ಬಾರದು ಎಂಬ ಬ್ಯಾನರನ್ನು ಪೊಲೀಸರು ಅಳವಡಿಸಿದ್ದಾರೆ.

Leave a Reply