ಕಾಪು: ಪಾಂಗಾಳ ಆರ್ಯಾಡಿ ನಿವಾಸಿಗಳಾದ ಗಂಗೆ ಪೂಜಾರ್ತಿ ಮತ್ತು ಗಿರಿಜಾ ಪೂಜಾರ್ತಿ ಮನೆ ತೀವ್ರ ದುಸ್ಥಿತಿಯಲ್ಲಿದೆ. ಕಳೆದ ಸೆಪ್ಟೆಂಬರ್ ನಲ್ಲಿ ಮಳೆಗೆ ಬಿದ್ದ ಈ ಮನೆಗೆ ಯಾವುದೇ ರೀತಿಯ ಸೌಲಭ್ಯ ದೊರಕಲಿಲ್ಲ ಎಂಬ ಊಹಾಪೋಹದ ಸುದ್ದಿಗೆ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ವಾರ್ ನಡೆಸಿದ ವ್ಯಕ್ತಿಗಳಿಗೆ ಸಮಾಜಸೇವಕ ಪಾಂಗಾಳ ಗೋವಿಂದ ಶೆಟ್ಟಿ ಆ ಕುಟುಂಬದ ವಿಚಾರವಾಗಿ ತುರ್ತಾಗಿ ಸ್ಪಂದಿಸುವ ಮೂಲಕ ಎಲ್ಲಾ ಜಾತಿ ರಾಜಕೀಯ ದೊಂಬರಾಟಕ್ಕೆ ತೆರೆಎಳೆದಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಗೋವಿಂದ ಶೆಟ್ಟರು ” ಪಾಂಗಾಳ ಆರ್ಯಾಡಿ ಈ ಭಾಗದಲ್ಲಿ ಜಾತಿ ಜಾತಿ ನಡುವಿನ ಕಚ್ಚಾಟವಿಲ್ಲ ಎಲ್ಲಾರೂ ಒಗ್ಗಟಾಗಿ ಒಂದೇ ತಾಯಿಯ ಮಕ್ಕಳಂತೆ ಜೀವಿಸುತ್ತಿದ್ದೇವೆ ಪ್ರಸ್ತುತ ಈ ಮೇಲೆ ಉಲ್ಲೇಖ ಮಾಡಿರುವ ಕುಟುಂಬದ ಆಂತರಿಕ ಸಮಸ್ಯೆಯಾಗಿದ್ದು ಅದನ್ನು ನಮ್ಮೂರಿನ ಯುವಕರೆ ಸ್ಪಂದಿಸುವ ಮುಖಾಂತರ ಮತ್ತು ಖುದ್ದಾಗಿ ಸ್ವತಃ ಖರ್ಚಿನಿಂದ ಆ ಮನೆಗೆ ವಿದ್ಯುತ್ ದೀಪ ಹಾಗೂ ಇತರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಕುರಿತಾಗಿ ಆ ಕುಟುಂಬದ ಸದಸ್ಯರ ಜತೆ ಆರ್ಯಾಡಿ ಧೂಮವತಿ ದೇವಸ್ಥಾನದಲ್ಲಿ ಶುಕ್ರವಾರ ಆ ಕುಟುಂಬದ ಸದಸ್ಯರನ್ನು ಕರೆದು ಮಾತಾಡಿಸಲಾಗಿದೆ ಈ ಬಗ್ಗೆ ಸಕಲ ವ್ಯವಸ್ಥೆಯನ್ನು ಕಲ್ಪಿಸುವುದಾಗಿ ಹೇಳಿದರು, ಈ ನಡುವೆ ಹೊರಗಿನ ಊರಿನ ಸಮಾಜಸೇವೆ ಅನ್ನುವ ಹೆಸರಿನಲ್ಲಿ ಪಾಂಗಾಳ ಆರ್ಯಾಡಿಗೆ ಬಂದು ಜಾತಿರಾಜಕೀಯ ಹಾಗೂ ವ್ಯಕ್ತಿ ನಿಂದನೆ ಮಾಡಿದ್ದಲ್ಲಿ ಸಹಿಸುವುದಿಲ್ಲ ಮತ್ತು ಈ ಬಗ್ಗೆ ಕಾನೂನಿನ ಪ್ರಕ್ರಿಯೆಗೆ ಮುಂದಾಗುತ್ತೇವೆ ಎಂದರು.”
ಮಾತ್ರವಲ್ಲದೆ ಈ ಮೇಲಿನ ಕುಟುಂಬದ ಮನೆ ರಿಪೇರಿಯ ಸರ್ಕಾರದಿಂದ ಸಿಗುವ ಎಲ್ಲಾ ಸವಲತ್ತುಗಳಿಗೆ ನಾವು ಸ್ಪಂದಿಸಿದ್ದು ತಾಂತ್ರಿಕ ಕಾರಣಗಳಿಂದ ತಡೆಯಾಗಿದೆ ಹಾಗಾಗಿ ಈ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಅಲ್ಲಸಲ್ಲದ ಆರೋಪ ಹಾಗೂ ವ್ಯಕ್ತಿ ನಿಂದನೆ,ಜಾತಿ ನಿಂದನೆ ಮಾಡಬಾರದು ಇಲ್ಲಿ ನಾವೆಲ್ಲರೂ ಒಂದಾಗಿದ್ದೇವೆ ಎಂದು ಅವರು ತಿಳಿಸಿದರು.
ಬ್ಯೂರೋ ರಿಪೋರ್ಟ್: vishwanews24
ಉಡುಪಿ: ಆಸ್ತಿಯನ್ನು ಬಲವಂತವಾಗಿ ತನ್ನ ಹೆಸರಿಗೆ ವರ್ಗಾಯಿಸಿಕೊಂಡು ವೃದ್ಧ ಪೋಷಕರನ್ನು ಮನೆಯಿಂದ ಹೊರಹಾಕಿದ ಮಗ ಉಡುಪಿ: ತಾಯಿಯ ಹೆಸರಿನಲ್ಲಿದ್ದ ಆಸ್ತಿಯನ್ನು…
ವಿಟ್ಲ : ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ ಹಾಗೂ ವಿದ್ಯುತ್ ಕಂಬ: ದಂಪತಿ ಅಪಾಯದಿಂದ ಪಾರು ವಿಟ್ಲ: ಮರ ಹಾಗೂ…
ಮಂಗಳೂರು: ಉದ್ಯಮಿಯ ಕಾರು ಅಡ್ಡಗಟ್ಟಿ ಕಾರು ಸಹಿತ ಚಿನ್ನಾಭರಣ ದರೋಡೆ ಮಂಗಳೂರು: ಕೇರಳ ಮೂಲದ ಉದ್ಯಮಿಯೊಬ್ಬರ ಕಾರನ್ನು ಅಡ್ಡಗಟ್ಟಿ ಕಾರು…
ವಯೋವಂದನ ಯೋಜನೆ : ವೇದಿಕೆಯ ನೇತೃತ್ವಕ್ಕೆ ಸಮಾಜದ ಸಹಭಾಗಿತ್ವ ಅಗತ್ಯ : ಸಿ ಎಂ ಗುಜ್ಜಾಡಿ ಪ್ರಭಾಕರ್ ನಾಯಕ್ ಜಿ…
ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ‘ನುವಾ’ ವಜ್ರಾಭರಣ ಅನಾವರಣ ಉಡುಪಿ: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಮೈನ್ ಬ್ರಾಂಡಿನ…
ಧರ್ಮಸ್ಥಳ ಪ್ರಕರಣ : ವಿಠಲ್ ಗೌಡ ವಿರುದ್ಧ ಅರೆಸ್ಟ್ ವಾರಂಟ್: ಪೊಲೀಸರಿಂದ ಹುಡುಕಾಟ ಬೆಳ್ತಂಗಡಿ: ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ…