ಪಾಕಿಸ್ತಾನದ ಬಳಿ ಇರುವ ಒಂದೇ ಒಂದು ಅಣುಬಾಂಬ್ ಮೂಲಕ ಭಾರತವನ್ನು ಸ್ವಚ್ಛ ಮಾಡಿಬಿಡುತ್ತೇವೆ : ಪಾಕ್ ಮಾಜಿ ಕ್ರಿಕೆಟಿಗ ಜಾವೆದ್ ಮಿಯಾಂದಾದ್ -Vishwanews24
ಇಸ್ಲಾಮಾಬಾದ್: ಪಾಕಿಸ್ತಾನದ ಬಳಿ ಇರುವ ಅಣುಬಾಂಬ್ ಗಳ ಮೂಲಕ ಭಾರತವನ್ನು ಸ್ವಚ್ಛ ಮಾಡಿ ಬಿಡುತ್ತೇವೆ ಎಂದು ಮಾಜಿ ಕ್ರಿಕೆಟಿಗ ಜಾವೆದ್ ಮಿಯಾಂದಾದ್ ನೇರವಾಗಿಯೇ ಅಣ್ವಸ್ತ್ರ ಬೆದರಿಕೆ ಹಾಕಿದ್ದಾರೆ.
ಖಾಸಗಿ ವಾಹಿನಿಯೊಂದಿಗೆ ಮಾತನಾಡಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಜಾವೆದ್ ಮಿಯಾಂದಾದ್, ಪಾಕಿಸ್ತಾನ ಪರವಾನಗಿ ಇರುವ ಶಸ್ತ್ರಾಸ್ತ್ರಗಳನ್ನು ಹೊಂದಿದೆ. ಹೀಗಿರುವಾಗ ನೀವು ಮೊದಲು ದಾಳಿ ಮಾಡಬೇಕು. ನಿನ್ನನ್ನು ನೀನು ರಕ್ಷಣೆ ಮಾಡಿಕೊಳ್ಳಲು ಯಾರನ್ನು ಬೇಕಾದರೂ ಕೊಲ್ಲಬಹುದು ಎಂಬ ನಿಯಮ ವಿಶ್ವಾದ್ಯಂತ ಇದೆ. ಹೀಗಾಗಿ ಮೊದಲು ಪಾಕಿಸ್ತಾನವೇ ದಾಳಿ ಮಾಡಬೇಕು. ಆಗ ಭಾರತಕ್ಕೆ ತನ್ನ ತಪ್ಪಿನ ಅರಿವು ಮತ್ತು ನೋವಾಗುತ್ತದೆ ಎಂದು ಹೇಳಿದ್ದಾರೆ.

ಜಾಹಿರಾತು
ಭಾರತ ಕುತಂತ್ರಿ ದೇಶ. ನಾವು ಅಣುಬಾಂಬ್ ಗಳನ್ನು ಕೇವಲ ಪ್ರದರ್ಶನಕ್ಕೆ ಮಾತ್ರ ಇಡಬಾರದು. ಅವಗಳ ಬಳಕೆ ಕೂಡ ಮಾಡಬೇಕು. ಒಂದೇ ಒಂದು ಅಣುಬಾಂಬ್ ಮೂಲಕ ಭಾರತವನ್ನು ಸ್ವಚ್ಛ ಮಾಡಿಬಿಡುತ್ತೇವೆ ಎಂದು ಮಿಯಾಂದಾದ್ ಹೇಳಿದ್ದಾರೆ.
