ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಭಾಗವು ದೇಶದೊಂದಿಗೆ ಸೇರಿಸಬೇಕು : ಕೇಂದ್ರ ಸಚಿವ ಜೀತೇಂದ್ರ ಸಿಂಗ್ -Vishwanews24

Featured, ದೇಶ, ರಾಷ್ಟ್ರ ನ್ಯೂಸ್

ಜಮ್ಮು : ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ 370 ವಿಧಿ ರದ್ದು ಮಾಡುವ ಮೂಲಕ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಇನ್ನೇನಿದ್ದರೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಭಾಗವು ದೇಶದೊಂದಿಗೆ ಸೇರಿಸಬೇಕು ಎಂದು ಕೇಂದ್ರ ಸಚಿವ ಜೀತೇಂದ್ರ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಕಾಶ್ಮೀರ ಭಾರತದ ಜೊತೆಗೆ ಒಂದಾಗಬೇಕು ಎಂಬುದು ಮೂರು ತಲೆಮಾರಿನ ಕನಸು. ಆದರೆ, ಅದು ನಮ್ಮ ಜೀವಿತಾವಧಿಯಲ್ಲೇ ನಡೆದಿದೆ ಹೀಗಾಗಿ ನಾವು ಅದೃಷ್ಟವಂತರು. ಬಿಜೆಪಿ ಸರ್ಕಾರದ ಐತಿಹಾಸಿಕ ಹುದ್ದೆಗೆ ಸಂಸತ್ತಿನಲ್ಲಿ ಸರ್ವಾನುಮತದಿಂದ ಅಂಗೀಕರಿಸಲ್ಪಟ್ಟಿದೆ. ಹೀಗಾಗಿ ಪಾಕಿಸ್ತಾನದ ಆಕ್ರಮಿತ ಕಾಶ್ಮೀರದ ಭಾಗವನ್ನೂ ಮುಕ್ತಗೊಳಿಸಿ ಅದನ್ನು ದೇಶದ ಅವಿಭಾಜ್ಯ ಅಂಗವನ್ನಾಗಿ ಮಾಡುವ ಕುರಿತು ಸರ್ಕಾರ ಸಕಾರಾತ್ಮಕ ಚಿಂತನೆ ನಡೆಸಬೇಕಿದೆ ಎಂದರು.

ಇಲ್ಲಿನ ಜನರ ಸಹಕಾರವೂ ಬೇಕಿದೆ. ಪಿಓಕೆ ಏಕೀಕರಣ ಮಾಡಿ ಜನರು ಮುಕ್ತವಾಗಿ ಮುಜಫರಾಬಾದ್ ವರೆಗೆ ಓಡಾಡುವಂತಾಗಬೇಕು ಎಂದು ಅವರು ಕರೆ ನೀಡಿದ್ದಾರೆ.