ಪಾಕಿಸ್ತಾನ ನಿಮ್ಮಿಂದ ಬೆಂಬಲ ಪಡೆಯುತ್ತಿರುವುದು ಇದೇ ಮೊದಲಲ್ಲ : ರಾಹುಲ್ ಗಾಂಧಿಗೆ ಸ್ಮೃತಿ ಇರಾನಿ -Vishwanews24
ನವದೆಹಲಿ: ರಾಹುಲ್ ಗಾಂಧಿ ಅವರ ಹೇಳಿಕೆಯಿಂದ ಪಾಕಿಸ್ತಾನಕ್ಕೆ ಅನುಕೂಲವಾಗುತ್ತಿದೆ ಎಂದು ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಪಾಕಿಸ್ತಾನ ನಿಮ್ಮಿಂದ ಬೆಂಬಲ ಪಡೆಯುತ್ತಿರುವುದು ಇದೇ ಮೊದಲಲ್ಲ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಯಡವಟ್ಟಿನಿಂದ ಲಾಭ ಆಗಿದ್ದು ಪಾಕಿಸ್ತಾನಕ್ಕೆ ಕೇಂದ್ರ ಗೃಹ ಸಚಿವರು ದೇಶಕ್ಕೊಂದೇ ಧ್ವಜ ಎಂದು ಮಾತನಾಡುವಾಗ ಇಡೀ ದೇಶಕ್ಕೆ ಒಂದು ಸಂವಿಧಾನ, ಎಂದು ಹೇಳುವಾಗ ರಾಹುಲ್ ಗಾಂಧಿಯವರ ಹೇಳಿಕೆ ದೇಶವನ್ನು ವಿಭಜಿಸುವತ್ತ ಒಲವು ತೋರುತ್ತಿದೆ ಎನ್ನುವುದು ಎದ್ದು ಕಾಣುತ್ತದೆ.
ಪಾಕಿಸ್ತಾನವು ರಾಹುಲ್ ಗಾಂಧಿಯವರ ಬೆಂಬಲವನ್ನು ಪಡೆಯುತ್ತಿರುವುದು ಇದೇ ಮೊದಲಲ್ಲ. ನಿಮಗೆ ನೆನಪಿರುವಂತೆ ಈ ಮೊದಲು ಕೂಡ ಅವರ ಅಭಿಪ್ರಾಯ, ಹೇಳಿಕೆಯನ್ನು ಪಾಕಿಸ್ತಾನ ಇಷ್ಟಪಟ್ಟಿತ್ತು. ತ್ರಿವರ್ಣ ಧ್ವಜ ದುರ್ಬಲಗೊಳಿಸುವ ಕೆಲಸ ತ್ರಿವರ್ಣದ ಬಗ್ಗೆ ಹೆಚ್ಚು ಯೋಚಿಸದ, ತ್ರಿವರ್ಣ ಧ್ವಜವನ್ನು ದುರ್ಬಲಗೊಳಿಸುವ ಮತ್ತು ಶತ್ರು ದೇಶ ಪ್ರೀತಿ ಮಾಡುವ ಒಬ್ಬ ನಾಯಕ ಇಂದು ದೇಶದಲ್ಲಿರುವುದು ನಿಜಕ್ಕೂ ದುರದೃಷ್ಟಕರ ಎಂದು ಹೇಳಿದರು.
ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ದೇಶದ ಅವಿಭಾಜ್ಯ ಅಂಗಗಳಾಗಿವೆ ಎಂದು ನಾನು ಕಾಂಗ್ರೆಸ್‌ಗೆ ಮನವಿ ಮಾಡುತ್ತೇನೆ. ಅಲ್ಲಿ ವಾಸಿಸುವವರು ಪಿಎಂ ಮೋದಿಯವರ ನಾಯಕತ್ವದಲ್ಲಿ ಅಭಿವೃದ್ಧಿಯನ್ನು ನೋಡಲು ಬಯಸುತ್ತಾರೆ, ” ಎಂದು ಅವರು ಹೇಳಿದರು.
ಅಮೇಥಿಯ ಹಿಂದಿನ ಸಂಸತ್ ಸದಸ್ಯ ಬಡವರ ಬಗ್ಗೆ ಮಾತನಾಡುತ್ತಿದ್ದರು ಆದರೆ ಪ್ರಸ್ತುತ ಸಂಸತ್ತಿನ ಸದಸ್ಯರು ಅವರಿಗಾಗಿ ಕೆಲಸ ಮಾಡುತ್ತಾರೆ ಎಂದು ಮೌರ್ಯ ಹೇಳಿದ್ದಾರೆ.
