ಪಾಕ್​ ಪ್ರಜೆಗಳು ಭಾರತ ತೊರೆಯಲು 48 ಗಂಟೆ ಗಡುವು ನೀಡಿದ ರಾಜಸ್ಥಾನ – Vishwanews24

Featured, ದೇಶ

ರಾಜಸ್ಥಾನ : ಜಮ್ಮುಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ಅತ್ಮಾಹುತಿ ದಾಳಿಗೆ ಸೇನೆಯ 44 ಯೋಧರು ಹುತಾತ್ಮರಾಗಿದ್ದು, ಇಡೀ ದೇಶಾದ್ಯಂತ ಪಾಕ್ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

ಈ ಹಿನ್ನೆಲೆಯಲ್ಲಿ ರಾಜಸ್ಥಾನದ ಬಿಕನೇರ್ ನಲ್ಲಿ ವಾಸವಿರುವ ಪಾಕಿಸ್ತಾನದ ಪ್ರಜೆಗಳು 48 ಗಂಟೆಗಳ ಒಳಗಾಗಿ ಭಾರತ ತೊರೆಯುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶಿಸಿದ್ದಾರೆ.

ತಕ್ಷಣದಿಂದಲೇ ಈ ಆದೇಶ ಹೊರಡಿಸಲಾಗಿದ್ದು, ಬಿಕನೇರ್ ಪ್ರಾಂತ್ಯದಲ್ಲಿ ಹೋಟೆಲ್ ಅಥವಾ ಲಾಡ್ಜ್ ಗಳಲ್ಲಿ ಪಾಕ್ ಪ್ರಜೆಗಳಿಗೆ ಕೊಠಡಿಗಳನ್ನು ನೀಡದಂತೆ ಆದೇಶಿಸಲಾಗಿದೆ.

ಈ ಅದೇಶವು ಎರಡು ತಿಂಗಳವರೆಗೆ ಇರಲಿದ್ದು, ವಿದೇಶಿ ನೋಂದಣಿ ಮಾಡಿಸಿಕೊಂಡ ಪಾಕ್ ಪ್ರಜೆಗಳಿಗೂ ಇದು ಅನ್ವಯವಾಗುವುದಿಲ್ಲ.