ಪಾದೂರು ISPRL ನಲ್ಲಿ ಅನಿಲ ಸೋರಿಕೆ ಶಂಕೆ ಗ್ರಾಮಸ್ಥರಲ್ಲಿ ಆತಂಕ.vishwanews24

Featured, ಉಡುಪಿ

ಪಾದೂರು ISPRL ನಲ್ಲಿ ಅನಿಲ ಸೋರಿಕೆ ಶಂಕೆ ಗ್ರಾಮಸ್ಥರಲ್ಲಿ ಆತಂಕ.

ಕಾಪು: ಕಾಪು ತಾಲೂಕಿನ ಪಾದೂರು ISPRL ನಲ್ಲಿ ನಿರ್ಮಾಣವಾಗಿರುವ ಕಚ್ಚಾತೈಲ ಸಂಗ್ರಹಗಾರದಲ್ಲಿ ಅನಿಲ ಸೋರಿಕೆಯ ಭೀತಿ ಎದುರಾಗಿದ್ದು ಸ್ಥಳಿಯರು ಆತಂಕಿತರಾಗಿದ್ದಾರೆ.

ಸೋಮವಾರ ಮಧ್ಯಾಹ್ನದಿಂದ ಅನಿಲ‌ವಾಸನೆ ಬರುತ್ತಿದ್ದು ಕೂರಾಲು ಪರಿಸರದಲ್ಲಿ ಮಕ್ಜಳು ಸೇರಿ ಹಿರಿಯರು ವಾಂತಿ ಮಾಡಿದ್ದು ಮೂರ್ಛೆ ತಪ್ಪಿದ ಅನುಭವಕ್ಕೆ ಒಳಗಾಗಿದ್ದಾರೆ
ಈ ಬಗ್ಗೆ ಸ್ಥಳಿಯರು ಮಜೂರು ಗ್ರಾಮ ಪಂಚಾಯತ್ ಗೆ ಮಾಹಿತಿ ನೀಡಿದ್ದು ಪಂಚಾಯತ್ ಆಡಳಿತವು ಈ‌ ಬಗ್ಗೆ ಗಮನಹರಿಸುವಂತೆ ಕಂಪೆನಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು ಸಂಜೆಯವರೆಗೂ ಅನಿಲ‌ವಾಸನೆ ಮುಂದುವರಿದ ಹಿನ್ನಲೆಯಲ್ಲಿ ಸ್ಥಳಿಯ ಜನಜಾಗೃತಿ ಸಮಿತಿಯೊಂದಿಗೆ ಜನಪ್ರತಿನಿಧಿಗಳು ಮತ್ತು ಸ್ಥಳಿಯರು ಅನಿಲವಾಸನೆಯ ಜಾಡು ಹುಡುಕಲಾರಂಭಿಸಿದರು.ಈ‌ಬಗ್ಗೆ ತಹಶಿಲ್ದಾರ್ ಪೋಲಿಸ್ ಇಲಾಖೆ ಮತ್ತು ಮಾಲಿನ್ಯ ನಿಯಂತ್ರಣ ಇಲಾಖೆಗೂ ಮಾಹಿತಿ ನೀಡಿದ್ದು ಇವರೆಲ್ಲರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.

ಕಾಪು ತಹಶಿಲ್ದಾರ್ ಮಹಮ್ಮದ್ ಇಸಾಕ್,ಪೋಲಿಸ್ ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್,ಮಾಲಿನ್ಯ ನಿಯಂತ್ರಣ ಅಧಿಕಾರಿ ವಿಜಯ ಹೆಗ್ಡೆ, ಜಿ.ಪಂ‌ ಸದಸ್ಯೆ ಶಿಲ್ಪಾ ಜಿ ಸುವರ್ಣ, ತಾ.ಪಂ‌ ಸದಸ್ಯೆ ಶಶಿಪ್ರಭಾ ಶೆಟ್ಟಿ, ಮಜೂರು ಗ್ರಾ.ಪಂ ಅಧ್ಯಕ್ಷ ಸಂದೀಪ್ ರಾವ್,ಉಪಾಧ್ಯಕ್ಷೆ ಸಹಾನ‌ ತಂತ್ರಿ,ಜನಜಾಗೃತಿ ಸಮಿತಿ ಸಂಚಾಲಕ ಅರುಣ್ ಶೆಟ್ಟಿ ಪಾದೂರು,ಪೈಯ್ಯಾರು ಶಿವರಾಮ ಶೆಟ್ಟಿ,ಪ್ರವೀಣ್ ಕುಮಾರ್ ಗುರ್ಮೆ,ರಂಗನಾಥ್ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.