ಪಾದೂರು ISPRL ಯೋಜನೆಯ ಎರಡನೇ ಹಂತದ ವಿಸ್ತರಣೆಗೆ‌ ಸರಕಾರ ಭೂಸ್ವಾಧಿನದ ನೋಟಿಫಿಕೆಶನ್ -ಮುಂದಿನ ಹೋರಾಟದ ಬಗ್ಗೆ ಗ್ರಾಮಸ್ಥರ ಸಭೆ -Vishwanews24

Featured, ಉಡುಪಿ

ಪಾದೂರು ISPRL ಯೋಜನೆಯ ಎರಡನೇ ಹಂತದ ವಿಸ್ತರಣೆಗೆ‌ ಸರಕಾರ ಭೂಸ್ವಾಧಿನದ ನೋಟಿಫಿಕೆಶನ್ -ಮುಂದಿನ ಹೋರಾಟದ ಬಗ್ಗೆ ಗ್ರಾಮಸ್ಥರ ಸಭೆ -Vishwanews24

ಕಾಪು: ಪಾದೂರು ISPRL ಯೋಜನೆಯ ಎರಡನೇ ಹಂತದ ವಿಸ್ತರಣೆಗೆ‌ ಸರಕಾರ 210 ಎಕರೆ ಭೂಮಿಯನ್ನು ಭೂಸ್ವಾಧಿನದ ನೋಟಿಫಿಕೆಶನ್ ಹೊರಡಿಸಿದ್ದು ಈ ಬಗ್ಗೆ ಕಳತ್ತೂರು ಜನಜಾಗೃತಿ ಸಮಿತಿ ಮುಂದಿನ‌ ಹೋರಾಟದ ಕುರಿತಾದ ಗ್ರಾಮಸ್ಥರ ಸಭೆ ಇಂದು ಶಾಂತಿಗುಡ್ಡೆಯಲ್ಲಿ ನಡೆಯಿತು.
ಸಂದೀಪ್ ಕುಮಾರ್ ಮಾತಾಡಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜತೆಗೆ ವಿವಿಧ ಇಲಾಖೆ ಅಧಿಕಾರಿಗಳ ಸಭೆಗೆ ಆಗ್ರಹ ಮಾಡಬೇಕೆಂದು ಅಭಿಪ್ರಾಯ ಪಟ್ಟರು.

ತಾನು ಭಾರತೀಯನೆಂಬುದು ನನ್ನ ಅದೃಷ್ಟ , ತನಗಾಗಿ ಭಾರತ ರತ್ನ ಪ್ರಶಸ್ತಿಗೆ ಬೇಡಿಕೆ ಇಡುವುದನ್ನು ದಯವಿಟ್ಟು ನಿಲ್ಲಿಸಿ : ರತನ್‌ ಟಾಟಾ -Vishwanews24

ಗ್ರಾಮಸ್ಥ ಸುರೇಂದ್ರ ಮಾತಾಡಿ ನಾಲವತ್ತು ಮನೆ ಮೊದಲ ಹಂತದಲ್ಲಿ ಕಳೆದುಕೊಳ್ಳುವ ಸಾದ್ಯತೆ ಇದೆ ಜನವರಿ12 ತಾರೀಖಿನಿಂದ ನೋಟಿಫಿಕೆಶನ್ ಆಗುತ್ತೆ ಆದರೇ 24 ದಿನಗಳ ನಂತರ ಪ್ರಕಟನೆ ಮಾಡಿದ್ದಾರೆ ಇದೊಂದು ಕತ್ತಲೆಯಲ್ಲಿ ಇಡುವ ಪ್ರಯತ್ನ ಕಂಪೆನಿ ಮಾಡುತ್ತಿದ್ದಾರೆ.ಮತ್ತು ಭೂಮಿ ಕಳೆದು ಕೊಳ್ಳುವ ಜನರಿಗೆ ಭೂಪರಿಹಾರ ಅತ್ಯಂತ ಕಡಿಮೆಯಾಗಿದೆ ಹಾಗೂ ಸಮರ್ಪಕವಾದ ಮಾಹಿತಿ ನೀಡದೆಹೋದರೆ ಯಾವುದೇ ಕಾರಣಕ್ಕೂ ಭೂಸ್ವಾಧಿನಕ್ಕೆ ಅವಕಾಶ ನೀಡಬಾರದೆಂದರು.

ಮಂಗಳೂರು : ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಮೊದಲ ಬಾರಿಗೆ ಮಂಗಳಮುಖಿ ಆಯ್ಕೆ -Vishwanews24

ಗ್ರಾಮಸ್ಥೆಯಾದ ಜನವಸತಿ ಉಳಿಸಿಕೊಳ್ಳಲು ಮನವಿ ನೀಡಿದರೂ ಸ್ಪಂದಿಸದ ಅಧಿಕಾರಿಗಳು ಹೇಗೆ ನಂಬೊದು ಕೃಷಿ ಭೂಮಿ‌ ಕಳೆದುಕೊಂಡು ನಮಗೆ ಬದುಕಲು ಸಾದ್ಯವಿಲ್ಲ ಎಂದರು.

ಈ‌ ಸಂಧರ್ಭದಲ್ಲಿ ಜನಪ್ರತಿನಿಧಿಗಳು,ಸಾಮಾಜಿಕ ಕಾರ್ಯಕರ್ತರು,ರಾಜಕೀಯ ಮುಖಂಡರು,ಗ್ರಾಮಸ್ಥರು ಉಪಸ್ಥಿತರಿದ್ದರು.

ಇತಿಹಾಸ ಪ್ರಸಿದ್ಧ ಐಕಳಬಾವ ‘ಕಾಂತಾಬಾರೆ-ಬೂದಾಬಾರೆ’ ಕಂಬಳಕ್ಕೆ ಚಾಲನೆ -Vishwanews24