ಪಾವಂಜೆ: ಮೀನು ಹಿಡಿಯಲು ಹೋದ ವ್ಯಕ್ತಿ ಕಾಲು ಜಾರಿ ನದಿಯಲ್ಲಿ ಮುಳುಗಿ ಸಾವು
ಮೂಲ್ಕಿ : ಪಾವಂಜೆಯ ಸೇತುವೆಯ ಕೆಳಗೆ ಗಾಳ ಹಾಕಿ ಮೀನು ಹಿಡಿಯಲೆಂದು ತೆರಳಿದ್ದ ವೃದ್ಧರೋರ್ವರು ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದು ಸಾವನ್ನಪ್ಪಿದ ಘಟನೆ ಸೆ. 20 ರಂದು ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತಪಟ್ಟವರನ್ನು ಮೂಲ್ಕಿ ಕೆ.ಎಸ್.ರಾವ್ ನಗರದ ನಿವಾಸಿ ಈಶ್ವರ (63) ಎಂದು ಗುರುತಿಸಲಾಗಿದೆ. ಈಶ್ವರ ಅವರಿಗೆ ಗಾಳ ಹಾಕಿ ಮೀನು ಹಿಡಿಯುವ ಹವ್ಯಾಸ ಇದ್ದು, ಸಂಜೆ ಮನೆಯಿಂದ ಪಾವಂಜೆಯ ಸೇತುವೆಯ ಕೆಳಗೆ ಗಾಳ ಹಾಕುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.
ಮೂಲ್ಕಿ ಪೊಲೀಸರು, ಸ್ಥಳೀಯರ ಸಹಕಾರದಿಂದ ಮೃತದೇಹವನ್ನು ಮೇಲೆತ್ತಿದ್ದು, ಮೂಲ್ಕಿ ಕಾರ್ನಾಡು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆಯನ್ನು ನಡೆಸಿದ್ದಾರೆ. ಘಟನೆ ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ.
ಅ.1 ರಿಂದ ಜನನ ಮತ್ತು ಮರಣ ನೋಂದಣಿ ವಿಳಂಬಕ್ಕೆ ಹೊಸ ನಿಯಮ ಜಾರಿಗೆ ನವದೆಹಲಿ: ಜನನ ಮತ್ತು ಮರಣ ನೋಂದಣಿಯನ್ನು ವಿಳಂಬವಾಗಿ…
ರಾಜ್ಯ ಸರ್ಕಾರ ಪಡಿತರ ಕಾರ್ಡ್ದಾರರಿಗೆ ಬಿಗ್ ಗುಡ್ ನ್ಯೂಸ್ ಇ-ಕೆವೈಸಿಗೆ ಅಕ್ಟೋಬರ್ 20ರವರೆಗೆ ಗಡುವು ವಿಸ್ತರಣೆ ನ್ಯಾಯಬೆಲೆ ಅಂಗಡಿಗಳ ವೇಳಾಪಟ್ಟಿ…
ಇನ್ಸ್‌ಪೆಕ್ಟರ್ ಧನಂಜಯ್ ಯಾವುದೇ ತಪ್ಪು ಮಾಡಿಲ್ಲ; ಅವರು ಬುದ್ಧಿವಾದ ಹೇಳಿದ್ದಾರೆ ತಪ್ಪೇ ಮಾಡದ ಇನ್ಸ್‌ಪೆಕ್ಟರ್ ಮೇಲೆ ಕ್ರಮ ಯಾಕೆ ತೆಗೆದುಕೊಳ್ಳಬೇಕು..…
ಕುಂದಾಪುರ : ಬೇಳೂರು ಗ್ರಾ.ಪಂ.ಗೆ ಲೋಕಾಯುಕ್ತ ದಾಳಿ ; ಕಡತಗಳ ಪರಿಶೀಲನೆ ಉಡುಪಿ: ಕಟ್ಟಡ ಪರವಾನಗಿ ನೀಡುವಲ್ಲಿ ವಿಳಂಬ ಸೇರಿದಂತೆ…
'ದಾದಾಸಾಹೇಬ್ ಫಾಲ್ಕೆ' ಪ್ರಶಸ್ತಿಯನ್ನು ಕರ್ನಾಟಕದ ಜನತೆಗೆ ಅರ್ಪಿಸಿದ ಹಿರಿಯ ನಟ ಅನಂತ್ ನಾಗ್ ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ನೀಡಿದ ಅಪಾರ…
ಕೊಣಾಜೆ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ; ಅದೃಷ್ಟವಶಾತ್ ತಪ್ಪಿದ ಭಾರಿ ದುರಂತ ಕೊಣಾಜೆ : ಚಾಲಕನ ನಿಯಂತ್ರಣ…