ಪುತ್ತಿಗೆ ಸುಗುಣೇಂದ್ರತೀರ್ಥರ ಚತುರ್ಥ ಪರ್ಯಾಯ ಪ್ರಮುಖ ಯೋಜನೆಗಳ ಕೇಂದ್ರ ಕಾರ್ಯಾಲಯ ಉದ್ಘಾಟನೆ -vishwanews24

Featured, ಉಡುಪಿ

ಉಡುಪಿ: 2024ರ ಜನವರಿ 18ರಂದು ನಾಲ್ಕನೇ ಬಾರಿಗೆ ಪರ್ಯಾಯ ಸ್ವೀಕರಿಸಲಿರುವ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥರು ಸಂಕಲ್ಪಿಸಿರುವ ಪ್ರಮುಖ ಯೋಜನೆಗಳ ಕಾರ್ಯಾಲಯ ‘ಅಂತರ್ಯಾಮಿ’ ಕೇಂದ್ರವನ್ನು ಭಾವಿ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥಶ್ರೀಪಾದರು ಗುರುವಾರ ಉದ್ಘಾಟಿಸಿದರು.

ಪರ್ಯಾಯದ ಪ್ರಮುಖ ಯೋಜನೆಯಾದ ಕೋಟಿ ಗೀತಾ ಲೇಖನ ಯಜ್ಞ ಅಭಿಯಾನಕ್ಕೂ ಶ್ರೀಪಾದರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ನಾಗರಾಜ ಆಚಾರ್ಯ, ರತೀಶ್ ತಂತ್ರಿ, ವಿಷ್ಣುಮೂರ್ತಿ ಉಪಾಧ್ಯಾಯ, ಪ್ರಮೋದ ಸಾಗರ್, ಆಸ್ಟ್ರೇಲಿಯಾದ ಪ್ರಸಿದ್ಧ ಯೋಗ ಗುರು ರಾಜೇಂದ್ರ ವೆಂಕನಮೂಲೆ, ಡಾ. ಸುಗುಣದಾಸ್. ಕೆ. ವಿ. ರಮಣ, ಸಂತೋಷ ಶೆಟ್ಟಿ ಮುಂತಾದವರಿದ್ದರು.

ವಿದ್ವಾನ್ ಬಿ. ಗೋಪಾಲಾಚಾರ್ ಸ್ವಾಗತಿಸಿ, ನಿರೂಪಿಸಿದರು. ಎಂ ಪ್ರಸನ್ನ ಆಚಾರ್ಯ ವಂದಿಸಿದರು.

Leave a Reply