ಪುತ್ತೂರು : ʼಭಾರತ್‌ ಮಾತಾ ಮಂದಿರʼ ಉದ್ಘಾಟಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ  – Vishwanews24

Featured, ದಕ್ಷಿಣ ಕನ್ನಡ

ಪುತ್ತೂರು : ʼಭಾರತ್‌ ಮಾತಾ ಮಂದಿರʼ ಉದ್ಘಾಟಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ 

ದಕ್ಷಿಣ ಕನ್ನಡ: ಪುತ್ತೂರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಿ, ಈಶ್ವರಮಂಗಲದ ಹನುಮಗಿರಿಯ ಪಂಚಮುಖಿ ಆಂಜನೇಯ ದೇಗುಲದ ಬಳಿ ‘ ಅಮರಗಿರಿ ಭಾರತ್‌ ಮಾತಾ ಮಂದಿರ ‘ ಉದ್ಘಾಟನೆ ನಡೆಸಿದ್ದಾರೆ.

ಕೇರಳದ ಕಣ್ಣೂರಿನಿಂದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಹನುಮಗಿರಿ ಹೆಲಿಪ್ಯಾಡ್ ಗೆ ಆಗಮಿಸಿದಂತ ಅವರು, ಸಮೀಪದಲ್ಲಿನ ಹನುಮಗಿರಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡೋ ಸಂಬಂಧ ಇಂದು ದಕ್ಷಿಣ ಕನ್ನಡ ಜಿಲ್ಲೆಗೆ ಅಮಿತ್ ಶಾ ಆಗಮಿಸಿದ್ದಾರೆ.

ಪುತ್ತೂರಿನ ಅಮರಗಿರಿ ಭಾರತ್‌ ಮಾತೆಗೆ ಪುಷ್ಪರ್ಚನೆ ಮಾಡಿ, ದೀಪಬೆಳಗಿಸುವ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಮರಗಿರಿ ಭಾರತ್‌ ಮಾತ ಮಂದಿರ ಉದ್ಘಾಟನೆ ನಡೆಸಿದ್ದಾರೆ . ಮೂರು ಕೋಟಿ ವೆಚ್ಚದಲ್ಲಿ ಸುಮಾರು 2.5 ಎಕರೆ ಪ್ರದೇಶದಲ್ಲಿ ಅಮೃತ ಶಿಲೆಯ ವಿಗ್ರಹ ನಿರ್ಮಿಸಲಾಗಿದೆ.

ಉಡುಪಿ: ಯಕ್ಷಗಾನ ಸಮ್ಮೇಳನದ ಗೋಷ್ಟಿ ಉದ್ಘಾಟನೆಗೆ ರೋಹಿತ್ ಚಕ್ರತೀರ್ಥ : ಬಿಲ್ಲವ ಸಮುದಾಯದಿಂದ ಪ್ರತಿಭಟನೆ – Vishwanews24

ಅಮಿತ್‌ ಶಾ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ , ರಾಜ್ಯ ಬಿಜೆಪಿ ಘಟಕ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿದಂತೆ ಹಲವು ನಾಯಕರು ಸಾಥ್‌ ನೀಡಲಿದ್ದಾರೆ.

Leave a Reply