ಪುತ್ತೂರು : ಅಕ್ರಮ ಸ್ಫೋಟಕ ಸಾಮಗ್ರಿ ಬಳಸಿ ಸಿಡಿಮದ್ದು ತಯಾರಿಕೆ :ನಾಲ್ವರು ಆರೋಪಿಗಳ ಬಂಧನ -Vishwanews24

ಉಡುಪಿ

ಪುತ್ತೂರು : ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಪುತ್ತೂರು ತಾಲ್ಲೂಕು ನೆಟ್ಟಣಿಗೆ ಮುಡ್ನುರು ಗ್ರಾಮದ ಮಡ್ಯಲ ಮಜಲು ಎಂಬಲ್ಲಿ ಪುತ್ತೂರು ಗ್ರಾಮಾಂತರ ಠಾಣೆ ಪೊಲೀಸ್ ಉಪನಿರೀಕ್ಷಕರು ತಮ್ಮ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಅಕ್ರಮವಾಗಿ ಸ್ಫೋಟಕ ಸಾಮಗ್ರಿಗಳನ್ನು ಬಳಸಿ ಸಿಡಿಮದ್ದು ತಯಾರಿಸುತ್ತಿದ್ದುದನ್ನು ಪತ್ತೆಹಚ್ಚಿದ್ದಾರೆ.

ನರೇಂದ್ರ ಅಲಿಯಾಸ್ ಬಾಬು, ಟಿ ಬಾಬು, ಟಿ ಕಾಳಿ ರಾಜ್, ಎಂ ಕಮಲ ಕನ್ನನ್ ಬಂಧಿತ ಆರೋಪಿಗಳಾಗಿದ್ದಾರೆ. ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸ್ ಉಪನಿರೀಕ್ಷಕರು ತಮ್ಮ ಠಾಣಾ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕರಣದ ಆರೋಪಿಗಳಾದ ನರೇಂದ್ರ ಅಲಿಯಾಸ್ ಬಾಬು, ಟಿ ಬಾಬು, ಟಿ ಕಾಳಿ ರಾಜ್, ಎಂ ಕಮಲ ಕನ್ನನ್ ಎಂಬವರನ್ನು ವಶಕ್ಕೆ ಪಡೆದಿರುತ್ತಾರೆ.
ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.