ಪುತ್ತೂರು : ತಿಂಗಳಾಡಿ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪಿ ಬದ್ರುದ್ದೀನ್ ಪೊಲೀಸ್ ವಶಕ್ಕೆ – Vishwanews24
ಪುತ್ತೂರು : ತಿಂಗಳಾಡಿ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪಿ ಬದ್ರುದ್ದೀನ್ ಪೊಲೀಸ್ ವಶಕ್ಕೆ
ಪುತ್ತೂರು: ತಾಲ್ಲೂಕಿನ ತಿಂಗಳಾಡಿಯಲ್ಲಿ ಸೂಪರ್ ಬಜಾರ್ ಮಳಿಗೆಯಲ್ಲಿ ಮಹಿಳೆಗೆ ಬುಧವಾರ ಸಂಜೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು ರಾತ್ರಿಯೇ ವಶಕ್ಕೆ ಪಡೆದಿದ್ದಾರೆ.
ಆರೋಪಿಯನ್ನು ಸರ್ವೆ ಗ್ರಾಮದ ಸೊರಕೆಯ ಬದ್ರುದ್ದೀಬ್ ಎಂದು ಗುರುತಿಸಲಾಗಿದೆ. ಮಹಿಳೆಯೊಬ್ಬರು ತಿಂಗಳಾಡಿಯ ನ್ಯೂ ಸೂಪರ್ ಬಜಾರ್ ಜನರಲ್ ಸ್ಟೋರ್ ಸ್ಟೀಟ್ ಸ್ಟಾಲ್ ಗೆ ಬುಧವಾರ ಸಂಜೆ ತೆರಳಿದ್ದರು. ಸಂಜೆ ಸುಮಾರು 6.35 ಗಂಟೆಗೆ ಸ್ವೀಟ್ ಖರೀದಿಸಿ ಅಂಗಡಿಯ ಮಾಲಿಕರಿಗೆ ಹಣವನ್ನು ನೀಡುತ್ತಿರುವಾಗ ಅಂಗಡಿಯೊಳಗೆ ಬಂದ ಆರೋಪಿಯು ಏಕಾಏಕಿ ಫಿರ್ಯಾದುದಾರರ ಸೊಂಟದ ಹಿಂಬದಿಗೆ ಕೈ ಹಾಕಿ ಫಿರ್ಯಾದುದಾರರ ನಿತಂಬವನ್ನು ಹಿಚುಕಿದ್ದ.
ವಾದ ವಿವಾದಗಳಿಂದ ದೂರವಿರಿ..ನೋಡಿ ಇಂದಿನ ದಿನ ಭವಿಷ್ಯ..ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564
ಆ ವೇಳೆ ಮಹಿಳೆ ಬೊಬ್ಬೆ ಹಾಕಿ ಆರೋಪಿಯನ್ನು ದೂರ ತಳ್ಳಲು ಯತ್ನಿಸಿದಾಗ ಆತನು ಅಂಗಡಿಯಿಂದ ಹೊರಗೆ ಓಡಿ ಹೋಗಿದ್ದ. ಅಂಗಡಿಯ ಮಾಲೀಕರಲ್ಲಿ ವಿಚಾರಿಸಿದಾಗ ಆ ಯುವಕನು ಸೊರಕೆಯ ಬದ್ರುದ್ದೀನ್ ಎಂದು ಗೊತ್ತಾಗಿದೆ. ಆರೋಪಿ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಮಹಿಳೆ ದೂರಿನಲ್ಲಿ ಕೋರಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನೆಯ ಬಗ್ಗೆ ಮಾಹಿತಿ ತಿಳಿದು ಸ್ಥಳೀಯ ಮುಖಂಡರು ಹಾಗೂ ಸಂಘ ಪರಿವಾರದ ಸಂಘಟನೆಗಳ ಪ್ರಮುಖರು ಸೇರಿದಂತೆ ನೂರಾರು ಮಂದಿ ಮಳಿಗೆ ಬಳಿ ಸೇರಿದ್ದರು. ಆರೋಪಿಯನ್ನು ತಕ್ಷಣ ಬಂಧಿಸದಿದ್ದರೆ ಗುರುವಾರ, ತಿಂಗಳಾಡಿ ಬಂದ್ ಮಾಡಿಸಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು.
ಮಂಗಳೂರು: ಜಿಲ್ಲಾಧಿಕಾರಿ ಮೊಬೈಲ್ ನಂಬರ್ ಹ್ಯಾಕ್ ..ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಡಿಸಿ ಮನವಿ..
