ಪುತ್ತೂರು: ನೀರಿನಲ್ಲಿ ಮುಳುಗಿ ಪುತ್ತೂರಿನ ಯುವಕ ಕೇರಳದಲ್ಲಿ ಸಾವು – Vishwanews24
ಪುತ್ತೂರು: ನೀರಿನಲ್ಲಿ ಮುಳುಗಿ ಪುತ್ತೂರಿನ ಯುವಕ ಕೇರಳದಲ್ಲಿ ಸಾವು
ಪುತ್ತೂರು: ನೀರಿನಲ್ಲಿ ಮುಳುಗಿ ಪುತ್ತೂರಿನ ಯುವಕ ಕೇರಳದಲ್ಲಿ ಸಾವನ್ನಪ್ಪಿದ ಘಟನೆ ಕಣ್ಣೂರಿನ ಕಡಂಬೆರಿಯಲ್ಲಿ ನಡೆದಿದೆ.
ಪುತ್ತೂರಿನ ಹಿರೇಬಂಡಾಡಿಯ ನಿವಾಸಿ ಮಹಮ್ಮದ್ ಅಝೀಮ್ (21) ಮೃತ ಯುವಕ ಎಂದು ಗುರುತಿಸಲಾಗಿದೆ.
ಕಣ್ಣೂರಿನ ಕಡಂಬೆರಿಯಲ್ಲಿ ಈಜಲೆಂದು ತೆರಳಿದ್ದ ವೇಳೆ ಈ ದುರಂತ ನಡೆದಿದೆ. ಪುತ್ತೂರಿನಿಂದ ಐವರು ಸ್ನೇಹಿತರು ಕೇರಳಕ್ಕೆ ಪ್ರವಾಸಕ್ಕೆ ತೆರಳಿದ್ದರು.
ಈ ವೇಳೆ ಈಜಲೆಂದು ನೀರಿಗಿಳಿದ ಮಹಮ್ಮದ್ ಅಝೀಮ್ ನೀರಿನ ಆಳ ತಿಳಿಯದೆ ಈಜಲು ಆಗದೆ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ.
ಮಹಮ್ಮದ್ ಅಝೀಮ್ ಗೆ ಸರಿಯಾಗಿ ಈಜು ಬಾರದೇ ಸಾವನ್ನಪ್ಪಿದ್ದರೆ, ಇನ್ನೊಬ್ಬನನ್ನು ಡಡಂಬೆರಿಯ ಸ್ಥಳೀಯ ನಿವಾಸಿಗಳು ರಕ್ಷಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
