ಪುತ್ತೂರು: ಮತಾಂತರ ಆರೋಪ – ಧ್ಯಾನ ಕೇಂದ್ರದ ಮೇಲೆ ಪೊಲೀಸ್ ದಾಳಿ – Vishwanews24
ನೆಲ್ಯಾಡಿ ಮೋರಿಯಾ ಧ್ಯಾನ ಕೇಂದ್ರದಲ್ಲಿ ಯಾವುದೇ ಮತಾಂತರ ನಡೆದಿಲ್ಲ: ಪೊಲೀಸರ ಸ್ಪಷ್ಟನೆ..
ಪುತ್ತೂರು : ಶಿವಮೊಗ್ಗ ಮೂಲದ 27 ಮಂದಿಯನ್ನು ಮತಾಂತರ ಮಾಡಲು ಕರೆಸಿಕೊಂಡಿದ್ದಾರೆ ಎಂಬ ಆರೋಪದ ಮೇಲೆ ಉಪ್ಪಿನಂಗಡಿ ಪೊಲೀಸರು ನೆಲ್ಯಾಡಿಯ ಕೋಣಾಲು ಸಮೀಪದ ಆರ್ಲದಲ್ಲಿರುವ ಮೊರಿಯಾ ಧ್ಯಾನ ಕೇಂದ್ರದ ಮೇಲೆ ದಾಳಿ ನಡೆಸಿದ್ದಾರೆ.
ಧ್ಯಾನ ಕೇಂದ್ರದ ಮೇಲೆ ಪೊಲೀಸರು ದಾಳಿ ನಡೆಸಿದಾಗ 27 ಮಂದಿ ಪತ್ತೆಯಾಗಿದ್ದು, ಅವರಲ್ಲಿ 18 ಮಹಿಳೆಯರು, ಎಂಟು ಪುರುಷರು ಮತ್ತು ಒಬ್ಬರು ಆರು ವರ್ಷದ ಬಾಲಕ. ಪೊಲೀಸರು ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಅವರು ಶಿವಮೊಗ್ಗ ಮೂಲದವರಾಗಿದ್ದು, ಕೆಲವರು ಮದ್ಯ ವ್ಯಸನಿಗಳಾಗಿದ್ದು, ಇನ್ನು ಕೆಲವರು ಮಾನಸಿಕ ಅಸ್ವಸ್ಥರು ಎಂದು ತಿಳಿಸಿದ್ದಾರೆ.

ಇನ್ನು ಪ್ರಾರ್ಥನೆಯಿಂದ ಆರೋಗ್ಯ ಸುಧಾರಿಸುತ್ತದೆ ಎಂದು ಯೂಟ್ಯೂಬ್‌ನಲ್ಲಿ ನೋಡಿದ ಅವರು ಸ್ವಂತ ಖರ್ಚಿನಲ್ಲಿ ಬಸ್‌ನಲ್ಲಿ ಪ್ರಾರ್ಥನಾ ಕೇಂದ್ರಕ್ಕೆ ಬಂದಿದ್ದು, ಪ್ರಾರ್ಥನೆಗೆ ಹಾಜರಾಗುವಂತೆ ಯಾರೂ ಒತ್ತಾಯಿಸಿಲ್ಲ, ಧರ್ಮ ಪರಿವರ್ತನೆಗೆ ಬಂದಿಲ್ಲ, ತಮ್ಮ ಅಸ್ವಸ್ಥತೆಯಿಂದ ಗುಣಮುಖರಾಗಲು ಬಂದಿದ್ದೇವೆ ಎಂದು ಸ್ಪಷ್ಟಪಡಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ರಾಯಚೂರು ಕಲುಷಿತ ನೀರು ಕುಡಿದು ಮೃತಪಟ್ಟರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ : ಸಿಎಂ ಬೊಮ್ಮಾಯಿ – Vishwnaews24
