ಪುತ್ತೂರು: ಯುವತಿಯ ಕತ್ತು ಸೀಳಿ ಭೀಕರ ಕೊಲೆ ; ಪರಾರಿಯಾಗಿದ್ದ ಆರೋಪಿ ಪೊಲೀಸ್ ವಶಕ್ಕೆ- Vishwanews24
ಪುತ್ತೂರು: ಹಾಡಹಗಲೇ ಯುವತಿಯ ಕುತ್ತಿಗೆಗೆ ಚೂರಿ ಇರಿದ ಯುವಕ ..
ಚೂರಿ ಇರಿತಕ್ಕೊಳಗಾಗಿ ಗಂಭೀರ ಗಾಯಗೊಂಡಿದ್ದ ಯುವತಿ ಮೃತ್ಯು..
ಪೊಲೀಸ್ ಠಾಣೆಯ ಬಳಿಯೇ ಭೀಕರ ಕೃತ್ಯ..
ಪರಾರಿಯಾಗಿದ್ದ ಆರೋಪಿ ಪೊಲೀಸ್ ವಶಕ್ಕೆ..
ಪುತ್ತೂರು: ಚೂರಿ ಇರಿತಕ್ಕೊಳಗಾದ ಯುವತಿ ಮೃತ್ಯು-ಪರಾರಿಯಾಗಿದ್ದ ಆರೋಪಿ ಪೊಲೀಸ್ ವಶಕ್ಕೆ
ಪುತ್ತೂರು: ಪುತ್ತೂರು ಮಹಿಳಾ ಪೊಲೀಸ್ ಸ್ಟೇಷನ್ ಬಳಿ ಹಾಡು ಹಗಲೇ ಯುವಕನೊಬ್ಬನಿಂದ ಚೂರಿ ಇರಿತಕ್ಕೊಳಗಾಗಿ ಗಂಭೀರ ಗಾಯಗೊಂಡಿದ್ದ ಯುವತಿ ಮೃತಪಟ್ಟಿರುವ ಘಟನೆ ನಡೆದಿದೆ.
ವಿಟ್ಲ ಮೂಲದ ಗೌರಿ (18) ಕೊಲೆಯಾದ ಯುವತಿ.
ಬಂಟ್ವಾಳ ತಾಲೂಕಿನ ಮಣಿ ನಾಲ್ಕೂರು ಗ್ರಾಮದ ನೈಬೇಲು ನಿವಾಸಿ ಪದ್ಮರಾಜ್ ಬಂಧಿತ ಆರೋಪಿಗಳು. ಯುವತಿ ಗೌರಿ ಪುತ್ತೂರು ಬಸ್ ನಿಲ್ದಾಣ ಬಳಿಯ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಪದ್ಮರಾಜ್ ಜೆಸಿಬಿ ಆಪರೇಟರ್ ಕೆಲಸ ನಿರ್ವಹಿಸುತ್ತಿದ್ದನು.
ಇಂದು ಮಧ್ಯಾಹ್ನ ಯುವಕ ಪದ್ಮರಾಜ್ ತನ್ನ ಪಲ್ಸರ್ ಬೈಕ್ ನಲ್ಲಿ ಯುವತಿ ಕೆಲಸ ಮಾಡುತ್ತಿದ್ದ ಅಂಗಡಿ ಬಳಿ ತೆರಳಿದ್ದಾನೆ.
ಮೊದಲು ಪುತ್ತೂರಿನ ಬಸ್ ನಿಲ್ದಾಣದ ಬಳಿ ಯುವತಿ ಗೌರಿ ಹಾಗೂ ಯುವಕ ಪದ್ಮರಾಜ್ ನಡುವೆ ಯಾವುದೋ ವಿಷಯಕ್ಕಾಗಿ ಗಲಾಟೆ ನಡೆದಿದೆ.
ಬಳಿಕ ಪುತ್ತೂರು ಮಹಿಳಾ ಠಾಣೆ ಬಳಿ ಅವರಿಬ್ಬರ ಮಧ್ಯೆ ಗಲಾಟೆಯಾಗಿದೆ.ಈ ವೇಳೆ ಯುವತಿ ಗೌರಿ ತಾನು ಪೊಲೀಸ್ ಠಾಣೆಗೆ ದೂರು ನೀಡುವುದಾಗಿ ತಿಳಿಸಿದ್ದಾಳೆ.
ಡಿಕೆಶಿ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾದ ಆಯನೂರು ಮಂಜುನಾಥ್ – Vishwanews24
ಆಗ ಪದ್ಮರಾಜ್ ಕೋಪದಿಂದ ಆಕೆಯ ಕುತ್ತಿಗೆಗೆ ಚೂರಿಯಿಂದ ಇರಿದಿದ್ದು, ಆಕೆ ನೆಲಕ್ಕೆ ಬಿದ್ದ ಕೂಡಲೇ ಆತ ಅಲ್ಲಿಂದ ಬೈಕಿನಲ್ಲಿ ಪರಾರಿಯಾಗಿದ್ದಾನೆ.
ಯುವತಿಯ ಕುತ್ತಿಗೆಗೆ ಮೂರರಿಂದ ನಾಲ್ಕು ಬಾರಿ ಇರಿಯಲಾಗಿದ್ದು, ಆಕೆಗೆ ತೀವ್ರ ಸ್ವರೂಪದ ಗಾಯಗಳಾಗಿದ್ದವು.
ಚಿಂತಾಜನಕ ಸ್ಥಿತಿಯಲ್ಲಿದ್ದ ಆಕೆಯನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿತ್ತು.
ಆದರೆ ದಾರಿ ಮಧ್ಯೆ ಆಕೆ ಮೃತ ಪಟ್ಟಿದ್ದಾಳೆ.
ಪರಾರಿಯಾಗಿದ್ದ ಆರೋಪಿ ಪದ್ಮರಾಜ್ ನನ್ನು ಪುತ್ತೂರು ನಗರ ಪೋಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದು, ತನಿಖೆ ನಡೆಯುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸಿ.ಬಿ. ಅವರು ಮಾಹಿತಿ ನೀಡಿದ್ದಾರೆ.
ಡಿಕೆಶಿ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾದ ಆಯನೂರು ಮಂಜುನಾಥ್ – Vishwanews24
