ಪುತ್ತೂರು: ರೈಲಿನಿಂದ ಬಿದ್ದು ಯುವಕ ಮೃತ್ಯು – vishwanews24

Featured, ದಕ್ಷಿಣ ಕನ್ನಡ

ಪುತ್ತೂರು: ರೈಲಿನಿಂದ ಬಿದ್ದು ಯುವಕ ಮೃತ್ಯು

ಪುತ್ತೂರು : ಪುಣಚ ನಿವಾಸಿ ಮಂಗಳವಾರ ರೈಲಿನಿಂದ ಬಿದ್ದು ಮೃತಪಟ್ಟಿರುವ ಘಟನೆ ಚೆನ್ನರಾಯಪಟ್ಟಣದಿಂದ ವರದಿಯಾಗಿದೆ.

ನಿಶಿತ್ ನಾಯ್ಕ್ (25 .) ಎಂದು ಗುರುತಿಸಲಾಗಿದೆ. ಬೆಂಗಳೂರಿನ ಕಲ್ಯಾಣ್ ಜ್ಯುವೆಲ್ಲರ್ಸ್’ನಲ್ಲಿ ಉದ್ಯೋಗಿಯಾಗಿರುವ ನಿಶಿತ್ ಅವರು ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯದ ಹಳೆ ವಿದ್ಯಾರ್ಥಿ. ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರನಾಗಿಯೂ ಗುರುತಿಸಿಕೊಂಡಿದ್ದರು.

ಮನೆಗೆ ಬರಲು ಸೋಮವಾರ ರಾತ್ರಿ ಬೆಂಗಳೂರಿನಿಂದ ಟ್ರೈನ್ ಹಿಡಿದಿದ್ದರು. ಜನರಲ್ ವಿಭಾಗದಲ್ಲಿ ಪ್ರಯಾಣಿಸುತ್ತಿದ್ದ ಅವರು, ಸುಮಾರು 2.30ರ ಹೊತ್ತಿಗೆ ರೈಲಿನಿಂದ ಎಸೆಯಲ್ಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೃತದೇಹ ಹಾಸನ ರೈಲ್ವೇ ಪೊಲೀಸರ ಸುಪರ್ಧಿಯಲ್ಲಿದೆ ಎಂದು ಹೇಳಲಾಗಿದೆ.ಮೃತರ ತಂದೆ ನಿವೃತ್ತ ಸೈನಿಕರಾಗಿದ್ದು, ತಂದೆ, ತಾಯಿ, ಸಹೋದರಿಯನ್ನು ಅಗಲಿದ್ದಾರೆ.

ಇದನ್ನೂ ಓದಿ : 

ಬೆಳ್ತಂಗಡಿ: ಕಾಲೇಜು ವಿದ್ಯಾರ್ಥಿನಿ ಕಿಡ್ನಾಪ್ ಪ್ರಕರಣಕ್ಕೆ ರೋಚಕ ತಿರುವು – vishwanews24

Leave a Reply