Featured

ಪುರಸಭೆ ಎಲೆಕ್ಷನ್ ಎರಡೇ ದಿನದಲ್ಲಿ ಬದಲಾದ ಟ್ರೆಂಡ್- ಬಿಜೆಪಿ ಬೇಡ ಅಂದವರೂ ಜೈ ಅಂದರು…!!! vishwanews24

ಪುರಸಭೆ ಎಲೆಕ್ಷನ್ ಎರಡೇ ದಿನದಲ್ಲಿ ಬದಲಾದ ಟ್ರೆಂಡ್- ಬಿಜೆಪಿ ಬೇಡ ಅಂದವರೂ ಜೈ ಅಂದರು…!!!

ಕಾಪು: ಪುರಸಭೆ ಚುನಾವಣೆಗೆ ದಿನ ಘೋಷಣೆಯಾದ ಸಮಯದಲ್ಲಿ ಬಿಜೆಪಿಗೆ ಇದ್ದ ಬ್ಯಾಡ್ ಇಮೇಜ್ ಚುನಾವಣೆ ಹತ್ತಿರವಾಗುತ್ತಿದ್ದಂತೆ ಟ್ರೆಂಡ್ ಬದಲಾಗತೊಡಗಿದೆ.
9 ಕಡೆ ಎಸ್ ಡಿ ಪಿ ಐ ಸ್ಪರ್ದೆಗಿಳಿದಿರುವ ಕಾರಣ ಮತ್ತು  ಸ್ಥಳಿಯ ಜಿಜೆಪಿ ನಾಯಕರ ಮನೆಮನೆ ನಡಿಗೆ ಬಿಜೆಪಿ ಕಾರ್ಯಕರ್ತರಲ್ಲಿ ಹಾಗೂ ಮತದಾರರಲ್ಲಿ ಕಳೆದೆರಡು ದಿನದಿಂದ ಹೊಸ ಸಂಚಲನ ಉಂಟುಮಾಡಿದೆ.
ಪುರಸಭೆಯ ಸಮಸ್ಯೆಗಳು ಹಾಗೂ ಆಡಳಿತ ಕಾರ್ಯವೈಖರಿಗಳ ಬಗ್ಗೆ ಮನೆಬಾಗಿಲಿಗೆ ಮುಟ್ಟಿಸಿದ ಬಿಜೆಪಿ ನಾಯಕರು ಮತದಾರರ ಮನವರಿವರ್ತನೆ ಮಾಡಿದ ಪರಿಣಾಮ ಚುನಾವಣೆಗೆ ಹೊಸ ಆಯಾಮ ಬರೆದಿದೆ.
ದೇಶ ಸುಭದ್ರವಾಗಬೇಕಾದರೆ ಗ್ರಾಮಮಟ್ಟದಲ್ಲಿ ಬಿಜೆಪಿ ಬೆಳೆಯಬೇಕು ಇದು ಮೋದಿಜಿಯ ಕನಸು ಎಂದು ಮಾತು ಆರಂಭಿಸುವ ಚುನಾವಣೆ ಕಾರ್ಯ ಚಟುವಟಿಕೆ ಹಿಂದೂ ಮತಬ್ಯಾಂಕ್ ಮತ್ತಷ್ಟು ಭದ್ರಗೊಳಿಸುವಲ್ಲಿ ಬಿಜೆಪಿ ಯಶಸ್ವಿಯಾಗುತ್ತಿದೆ.

ಕಾಪು ಶಾಸಕ ಲಾಲಾಜಿ ಆರ್ ಮೆಂಡನ್-ಗುರ್ಮೆ ಸುರೇಶ್ ಶೆಟ್ಟಿ-ಯಶ್ಪಾಲ್ ಸುವರ್ಣ-ಕಿರಣ್ ಕೊಡ್ಗಿ-ಕುಯಿಲಾಡಿ ಸುರೇಶ್ ನಾಯಕ್-ಗೀತಾಂಜಲಿ ಸುವರ್ಣ-ಕಪ್ಪೆಟ್ಟು ಪ್ರವೀಣ್ ಶೆಟ್ಟಿ-ಶ್ರೀಕಾಂತ್ ನಾಯಕ್-ಗಂಗಾಧರ ಸುವರ್ಣ-ಶ್ರೀಶಾ ನಾಯಕ್-ಯುವಮೋರ್ಚ ನಾಯಕರು ನಿರಂತರ ಫೀಲ್ಡ್ನಲ್ಲಿದ್ದು ಪುರಸಭೆಯನ್ನು ಪೂರ್ಣ ಬಹುಮತದೊಂದಿಗೆ ವಶಪಡಿಸಿಕೊಳ್ಳಲು ನಡೆಸುತ್ತಿರುವ ಸರ್ಕಸ್ ವರ್ಕೌಟ್ ಆಗುವಂತಿದೆ.


ಕೋಸ್ಟಲ್ ವಾರ್ಡ್ಗಳು ಕ್ಲೀನ್ ಸ್ವೀಪ್

ಬಿಜೆಪಿಯ ಮತಬ್ಯಾಂಕ್ ತಲ-ತಲಾಂತರಗಳಿAದ ಕೋಸ್ಟಲ್ ಬೆಲ್ಟ್ ಇದು ಸಾಮಾನ್ಯವಾಗಿ ತಿಳಿದಿರುವ ವಿಚಾರ ಕಳೆದ ಪುರಸಭಾ ಚುನಾವಣೆಯಲ್ಲಿ ಕೂಡ ಕೋಸ್ಟಲ್ ಬೆಲ್ಟ್ ಬಿಜೆಪಿಗೆ ಅತೀ ಹೆಚ್ಚು ಸೀಟ್ ನೀಡಿ ಗೆಲ್ಲಿಸಿ ಕಳುಹಿಸಿದ ಕೀರ್ತಿ ಈ ಭಾಗದ ಮತದಾರರಿಗಿದೆ. ಕಾಂಗ್ರೇಸ್ ಪಾರ್ಟಿ ಒಂದು ಸಲ ಈ ಭಾಗದಲ್ಲಿ ಲಗ್ಗೆಯಿಟ್ಟರೆ ಮತ್ತೆ ಅದರ ಹಿಡಿತದಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಕಡಿಮೆ ಎಂಬುದು ಆ ಭಾಗದ ಮತದಾರರಿಗೂ ಗೊತ್ತಿದೆ ಹಾಗಾಗಿ ಶತಾಯ-ಗತಾಯ ಹಿಂದೂ ಭದ್ರಕೋಟೆ ಕಡಲುಕಾಯುವ ಯೋಧರು ಎಂದು ಕರೆಸಿಕೊಳ್ಳುವ ಈ ಭಾಗದ ಮತದಾರರು ಸುಲಭವಾಗಿ ಬಿಜೆಪಿಯನ್ನು ಬಿಟ್ಟುಕೊಡುವ ಪ್ರಶ್ನೆ ಕಡಿಮೆಯಿದೆ ಹಾಗಾಗಿ ಈ ಬಾರಿ ಕೂಡ ಅತೀ ಹೆಚ್ಚು ಸೀಟ್ ಗೆಲ್ಲಿಸಿ ಕರಾವಳಿ ಭಾಗದಿಂದ ಪುರಸಭೆ ಸದಸ್ಯರನ್ನು ಆಯ್ಕೆ ಮಾಡಿ ಕಳುಹಿಸುವ ಭರವಸೆ ಮತ್ತು ನಂಬಿಕೆ ಇದೆ ಅನ್ನುತ್ತಾರೆ.
ಒಟ್ಟಾರೆ ಕಳೆದ ವಾರ ಕೆಲವು ವಾರ್ಡಿನಲ್ಲಿದ್ದ ಬಿಜೆಪಿಯ ಅಭ್ಯರ್ಥಿಗಳ ಬ್ಯಾಡ್ ಇಂಪ್ರೇಷನ್ ಕಲೆದೆರಡು ದಿನಗಳಿಂದ ಮತದಾರನ ಕೋಪ ಸಿಟ್ಟು ಕಡಿಮೆ ಆಗಿದೆ. ಬಿಜೆಪಿಗೆ ನಾವು ಮತ ಹಾಕದೇ ಇದ್ದರೇ ಇನ್ನಾರೂ ಹಾಕುವರೆನ್ನುವ ಕ್ಷಮಾಗುಣ ಬಿಜೆಪಿಯ ಟ್ರೆಂಡ್ ಬದಲು ಮಾಡಿದೆ.
ಪೊಲಿಟಿಕಲ್ ಬ್ಯುರೋ ವಿಶ್ವನ್ಯೂಸ್24

 

Vishwa News 24

Recent Posts

ಉಡುಪಿ : ಅಕ್ಕ ಕೆಫೆ ನಿರ್ವಹಣೆ ;  ಏ. 13 ರಂದು ನೇರ ಸಂದರ್ಶನ – vishwanews24

ಉಡುಪಿ : ಅಕ್ಕ ಕೆಫೆ ನಿರ್ವಹಣೆ ;  ಏ. 13 ರಂದು ನೇರ ಸಂದರ್ಶನ ಉಡುಪಿ : ರಾಷ್ಟ್ರೀಯ ಗ್ರಾಮೀಣ…

3 days ago

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ : ಉಡುಪಿ ಜಿಲ್ಲೆ ಪ್ರಥಮ,  ದ.ಕ ಜಿಲ್ಲೆ ದ್ವೀತಿಯ – vishwanews24

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ : ಉಡುಪಿ ಜಿಲ್ಲೆ ಪ್ರಥಮ,  ದ.ಕ ಜಿಲ್ಲೆ ದ್ವೀತಿಯ ಬೆಂಗಳೂರು: 2025-26ನೇ ಸಾಲಿನ ದ್ವೀತಿಯ…

3 days ago

ಗುಜರಾತಿಗಳು ಅನಕ್ಷರಸ್ಥರು ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಖರ್ಗೆ – vishwanews24

ಗುಜರಾತ್ ಜನರ ಭಾವನೆಗಳನ್ನು ನೋಯಿಸುವುದು ನನ್ನ ಉದ್ದೇಶವಾಗಿರಲಿಲ್ಲ .. ಗುಜರಾತಿಗಳು ಅನಕ್ಷರಸ್ಥರು ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಖರ್ಗೆ ಬೆಂಗಳೂರು: ಕೇರಳ…

4 days ago

ಮಂಗಳೂರು : ಗುರುಪುರ ಬಳಿ ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ ; ಬಸ್ ಚಾಲಕನಿಗೆ ಗಂಭೀರ ಗಾಯ – vishwanews24

ಮಂಗಳೂರು : ಗುರುಪುರ ಬಳಿ ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ ; ಬಸ್ ಚಾಲಕನಿಗೆ ಗಂಭೀರ ಗಾಯ ಮಂಗಳೂರು:…

4 days ago

ಬಾಗಲಕೋಟೆ: ಕ್ಷುಲ್ಲಕ ಕಾರಣಕ್ಕೆ ಯುವ ಪ್ರೇಮಿಗಳು ಸಾವಿಗೆ ಶರಣು – vishwanews24

ಬಾಗಲಕೋಟೆ: ಕ್ಷುಲ್ಲಕ ಕಾರಣಕ್ಕೆ ಯುವ ಪ್ರೇಮಿಗಳು ಸಾವಿಗೆ ಶರಣು ಬಾಗಲಕೋಟೆ: ಯುವ ಪ್ರೇಮಿಗಳಿಬ್ಬರು ನೇಣು ಹಾಕಿಕೊಂಡು ಸಾವಿಗೆ ಶರಣಾದಂತಹ ಆಘಾತಕಾರಿ…

4 days ago

ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ – vishwanews24

ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ ಬೆಂಗಳೂರು: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬಹುದಿನಗಳ ನಿರೀಕ್ಷೆ ಕೊನೆಗೂ ಅಂತ್ಯಗೊಳ್ಳಲಿದೆ. ನಾಳೆ (ಏಪ್ರಿಲ್…

4 days ago