ಉಡುಪಿ

ಪೆರ್ಡೂರು ಗೋ ದಳ್ಳಾಲಿ ಸಾವಿನ ಪ್ರಕರಣ …ಬಜರಂಗದಳದ ಮೂರು ಮಂದಿ ಅರೆಸ್ಟ್

ಉಡುಪಿ ಜಿಲ್ಲೆ ಪೆರ್ಡೂರು ಗ್ರಾಮದ ಕೊಟ್ಟಾರು ಹಾಡಿಯಲ್ಲಿ ಹುಸೈನಬ್ಬ ಅವರ ಶವ ನಿನ್ನೆ ಪತ್ತೆಯಾಗಿದೆ. ಸ್ಕಾರ್ಪಿಯೋ ವಾಹನದಲ್ಲಿ ಗೋವುಗಳನ್ನು ಸಾಗಿಸಲಾಗುತ್ತಿದ್ದನ್ನು ಬಜರಂಗ ದಳದ ಕಾರ್ಯಕರ್ತರು ದಾಳಿ ನಡೆಸಿದಾಗ ಈ ಹುಸೇನಬ್ಬ ತಪ್ಪಿಸಿಕೊಂಡಿದ್ದ. ಹುಸೈನಬ್ಬ ಅವರದು ಸಹಜ ಸಾವಲ್ಲ ಅವರನ್ನು ಬಜರಂಗ ದಳದ ಮುಖಂಡ ಸೂರಿ ಮತ್ತವರ ಬೆಂಬಲಿಗರು ಸೇರಿ ಹತ್ಯೆ ಮಾಡಿದ್ದಾರೆಂದು ಹುಸೈನಬ್ಬ ಅವರ ಸಂಬಂಧಿಗಳು ದೂರು ನೀಡಿದ್ದರು.ಮೃತ ವ್ಯಕ್ತಿ ಕಳೆದ 35 ವರ್ಷಗಳಿಂದ ಪೆರ್ಡೂರು ಸುತ್ತ ಮುತ್ತ ದಲ್ಲಾಳಿಗಳ ಮೂಲಕ ದನ ಖರೀದಿಸಿ ಸಾಗಿಸುತ್ತಿದ್ದ ಅದೇ ರೀತಿ ಮೇ.29ರಂದು ಬೆಳಗಿನ ಜಾವ ಎಂದಿನಂತೆ ಸ್ಕಾರ್ಪಿಯೋದಲ್ಲಿ ನಾಲ್ವರೊಂದಿಗೆ ದನ ಖರೀದಿಗೆ ಬೆಳಗ್ಗೆ ಹೊರಟಾಗ ಬಜರಂಗದಳ ಕಾರ್ಯಕರ್ತರು ಅಡ್ಡಗಟ್ಟಿದ್ದಾರೆ. ಈ ವೇಳೆ ಹೆದರಿದ ಹುಸೈನಬ್ಬ ವಾಹನ ಬಿಟ್ಟು ಓಡಿ ಹೋಗಿದ್ದರು.

ನಂತರ ಅಕ್ರಮ ಜಾನುವಾರು ಸಾಗಣೆ ಎಂದು ಹಿರಿಯಡ್ಕ ಠಾಣೆಯಲ್ಲಿ ಪಿಎಸ್‍ಐ ಡಿ.ಎನ್. ಕುಮಾರ್ ಪ್ರಕರಣ ದಾಖಲಿಸಿಕೊಂಡಿದ್ದರು. ಅಲ್ಲದೆ, ಈ ಪ್ರಕರಣವನ್ನು ಸರಿಯಾಗಿ ನಿಭಾಯಿಸಿಲ್ಲವೆಂದು ಪಿಎಸ್‍ಐ ಕುಮಾರ್ ಅವರನ್ನು ಅಮಾನತ್ತು ಕೂಡ ಮಾಡಲಾಗಿದೆ.

ತಲೆಮರೆಸಿಕೊಂಡಿದ್ದ ಆರೋಪಿಗಳು:
ಈ ಮಧ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಬಜರಂಗದಳದ ಕಾರ್ಯಕರ್ತರು ತಲೆ ಮರೆಸಿಕೊಂಡಿದ್ದರು. ಅವರು ಬಳ್ಳಾರಿ ನಗರಕ್ಕೆ.ಎ.20 ಎಂ.ಬಿ.7864 ಕಾರಿನಲ್ಲಿ ಬಂದು ಆಶ್ರಯ ಪಡೆದಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಉಡುಪಿ ಎಸ್.ಪಿ. ಅವರು ಬಳ್ಳಾರಿ ಎಸ್ಪಿ ಅವರಿಗೆ ಮಾಹಿತಿ ನೀಡಿ ಅವರನ್ನು ಬಂಧಿಸಲು ಸೂಚಿಸಿದ್ದರಂತೆ.

ಈ ಹಿನ್ನೆಲೆಯಲ್ಲಿ 3 ತಂಡಗಳಾಗಿ ಪೊಲೀಸರು ನಿನ್ನೆ ರಾತ್ರಿ ಪರಿಶೀಲನೆ ಮಾಡಿ ಹೆಚ್.ಪ್ರಸಾದ್, ದೀಪಕ್ ಅಲಿಯಾಸ್ ಶೆಟ್ಟಿ ಮತ್ತು ಸುರೇಶ್ ಮೆಂಡನ್ ಅಲಿಯಾಸ್ ಸೂರಿ ಎಂಬುವರನ್ನು ಬಂಧಿಸಿದ್ದಾರೆ.

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

2 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

2 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

2 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

2 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

2 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

2 days ago