ಪೇಜಾವರ ಶ್ರೀಗಳಿಂದ ಸತ್ಕಾರ್ ಕೂಟ ಹೆಸರಿನಲ್ಲಿ ಇಫ್ತಾರ್ ಕೂಟ
ಉಡುಪಿ: ಇಫ್ತಾರ್ ಕೂಟ ಉಡುಪಿಯಲ್ಲಿ ವಿವಾದಕ್ಕೊಳಗಾದ ಆಚರಣೆ ಎಂದರೆ ತಪ್ಪಾಗಲ್ಲ. ಹೌದು, ಕಳೆದ ಬಾರಿ ಶ್ರೀಕೃಷ್ಣಮಠದಲ್ಲಿ ಮಾಡಲಾಗಿದ್ದ ಇಫ್ತಾರ್ ಕೂಟ ಬಹಳಷ್ಟು ವಿವಾದ, ಪ್ರತಿಭಟನೆಗೆ ಕಾರಣವಾಗಿತ್ತು. ಆದರೆ ಈ ಬಾರಿ ಸತ್ಕಾರ್ ಕೂಟ ಹೆಸರಲ್ಲಿ ಇಫ್ತಾರ್ ಕೂಟ ಒಂದು ಕಲ್ಯಾಣಮಂಟಪದಲ್ಲಿ ನಡೆಯಲಿದೆ ಇದಕ್ಕೆ ಈಗಾಗಲೇ ಸಾಕಷ್ಟು ವಿರೋಧವೂ ಎದುರಾಗಿದೆ.
ಕಳೆದ ಬಾರಿ ಕೃಷ್ಣಮಠದಲ್ಲಿ ಪರ್ಯಾಯ ಪೀಠಾಧೀಶರಾಗಿದ್ದ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿಗಳ ನೇತೃತ್ವದಲ್ಲಿ ಕಳೆದ ವರ್ಷ ಜೂನ್ 24ರಂದು ಇಫ್ತಾರ್ ಕೂಟ ನಡೆದಿತ್ತು. ಕೃಷ್ಣಮಠದ ಅನ್ನಬ್ರಹ್ಮ ಸಭಾಂಗಣದಲ್ಲಿ ನಮಾಜ್ ಮಾಡಿದ ಮುಸಲ್ಮಾನರು ಸ್ವಾಮೀಜಿಗಳ ಸಮ್ಮುಖದಲ್ಲಿ ಭೋಜನ ಕೂಡ ಸ್ವೀಕರಿಸಿದ್ದರು. ಸ್ವತಃ ಸ್ವಾಮೀಜಿಯೇ ಬಡಿಸಿ, ಇಫ್ತಾರ್ ಶುಭಕೋರಿದ್ದರು. ಮರುದಿನ ಈ ಇಫ್ತಾರ್ ಕೂಟ ವಿವಾದಕ್ಕೆ ಕಾರಣವಾಗಿತ್ತು ಸ್ವತಃ ಶ್ರೀರಾಮ ಸೇನೆ ಸಂಸ್ತಾಪಕ ಪ್ರಮೋದ್ ಮುತಾಲಿಕ ಕೃಷ್ಣಮಠಕ್ಕೆ ಭೇಟಿ ನೀಡಿ ಶ್ರೀಗಳೆದುರು ಅಸಮಧಾನ ಹೊರಹಾಕಿದ್ದರು.
ಕಳೆದ ಇಫ್ತಾರ್ ಕೂಟ ನಡೆದ ಬಳಿಕ ಗೋಮೂತ್ರ ಸ್ವಚ್ಚತೆ, ಪ್ರತಿಭಟನೆ, ಆಕ್ರೋಶ ಹಿಂದೂ ಸಂಘಟನೆ ಮೂಲಕ ವ್ಯಕ್ತವಾಗಿದ್ರೂ ಪೇಜಾವರ ಶ್ರೀಗಳು ಮಾತ್ರ ಇಫ್ತಾರ್ ಕೂಟದ ಪರ ನಿಂತಿದ್ರು. ತಮ್ಮ ನಿರ್ಧಾರವನ್ನು ಸಮರ್ಥನೆ ಮಾಡುತ್ತಾ ಬಂದು ಇದೀಗ ಮತ್ತೆ ಇಫ್ತಾರ್ ಕೂಟವನ್ನು ಸತ್ಕಾರ್ ಕೂಟ ಹೆಸರಿನಡಿ ಕೃಷ್ಣಮಠದ ಬದಲು ಮಠದಿಂದ 3ಕಿಲೋಮೀಟರ್ ದೂರವಿರುವ ಗೋವಿಂದ ಕಲ್ಯಾಣ ಮಂಟಪದಲ್ಲಿ ಇದೇ 13ರಂದು ನಿಗದಿಪಡಿಸಿದ್ದಾರೆ. ಪೇಜಾವರ ಶ್ರೀಗಳು ಪರ್ಯಾಯ ಸ್ವಾಮೀಜಿಗಳಾಗಿರದ ಕಾರಣ ಹಾಗೂ ಮುಸಲ್ಮಾನರೇ ಕೃಷ್ಣಮಠದಲ್ಲಿ ಆವರಣದಲ್ಲಿ ಒಪ್ಪದಿರುವುದರಿಂದ ಕಲ್ಯಾಣ ಮಂದಿರದಲ್ಲಿ ನಿಗದಿಯಾಗಿದ್ದು ಒಂದೆಡೆಯಾದ್ರೆ ಸ್ವಾಮೀಜಿಗಳು ಇಫ್ತಾರ್ ಕೂಟ ನಡೆಸುವುದರ ಬಗ್ಗೆಯೂ ವಿರೋಧ ಈಗಲೇ ಹೊರಬಿದ್ದಿದೆ.
ಒಟ್ಟಾರೆ ಸೌಹಾರ್ದಕ್ಕಾಗಿ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಗಳು ನಡೆಸುವ ಇಫ್ತಾರ್ ಕೂಟ ಕಳೆದ ಬಾರಿಯಂತೆ ಈ ಬಾರಿಯೂ ವಿವಾದಕ್ಕೆ ಕಾರಣವಾಗುತ್ತೋ ಇಲ್ಲ ಮೂರ್ತಿ ಪೂಜೆಯಿಲ್ಲದ ಕಲ್ಯಾಣಮಂದಿರದಲ್ಲಿ ನಡೆಯುವ ಮೂಲಕ ಇಫ್ತಾರ್ ಕೂಟ ಸೌಹಾರ್ಧದಲ್ಲೇ ಅಂತ್ಯವಾಗುತ್ತೋ ಎಂಬುದು ಕಾದುನೋಡಬೇಕಿದೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…