Featured

ಪೇಜಾವರ ಶ್ರೀಗಳಿಂದ ಹಠಕ್ಕೆ ಬಿದ್ದು ಸತ್ಕಾರ್ ಕೂಟ ಹೆಸರಿನಲ್ಲಿ‌ಇಫ್ತಾರ್ ಕೂಟ..!

ಪೇಜಾವರ ಶ್ರೀಗಳಿಂದ ಸತ್ಕಾರ್ ಕೂಟ ಹೆಸರಿನಲ್ಲಿ ಇಫ್ತಾರ್ ಕೂಟ

ಉಡುಪಿ: ಇಫ್ತಾರ್ ಕೂಟ ಉಡುಪಿಯಲ್ಲಿ ವಿವಾದಕ್ಕೊಳಗಾದ ಆಚರಣೆ ಎಂದರೆ ತಪ್ಪಾಗಲ್ಲ. ಹೌದು, ಕಳೆದ ಬಾರಿ ಶ್ರೀಕೃಷ್ಣಮಠದಲ್ಲಿ ಮಾಡಲಾಗಿದ್ದ ಇಫ್ತಾರ್ ಕೂಟ ಬಹಳಷ್ಟು ವಿವಾದ, ಪ್ರತಿಭಟನೆಗೆ ಕಾರಣವಾಗಿತ್ತು. ಆದರೆ ಈ ಬಾರಿ ಸತ್ಕಾರ್ ಕೂಟ ಹೆಸರಲ್ಲಿ ಇಫ್ತಾರ್ ಕೂಟ ಒಂದು ಕಲ್ಯಾಣಮಂಟಪದಲ್ಲಿ ನಡೆಯಲಿದೆ ಇದಕ್ಕೆ ಈಗಾಗಲೇ ಸಾಕಷ್ಟು ವಿರೋಧವೂ ಎದುರಾಗಿದೆ.

ಕಳೆದ ಬಾರಿ ಕೃಷ್ಣಮಠದಲ್ಲಿ ಪರ್ಯಾಯ ಪೀಠಾಧೀಶರಾಗಿದ್ದ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿಗಳ ನೇತೃತ್ವದಲ್ಲಿ ಕಳೆದ ವರ್ಷ ಜೂನ್ 24ರಂದು ಇಫ್ತಾರ್ ಕೂಟ ನಡೆದಿತ್ತು. ಕೃಷ್ಣಮಠದ ಅನ್ನಬ್ರಹ್ಮ ಸಭಾಂಗಣದಲ್ಲಿ ನಮಾಜ್ ಮಾಡಿದ ಮುಸಲ್ಮಾನರು ಸ್ವಾಮೀಜಿಗಳ ಸಮ್ಮುಖದಲ್ಲಿ ಭೋಜನ ಕೂಡ ಸ್ವೀಕರಿಸಿದ್ದರು. ಸ್ವತಃ ಸ್ವಾಮೀಜಿಯೇ ಬಡಿಸಿ, ಇಫ್ತಾರ್ ಶುಭಕೋರಿದ್ದರು. ಮರುದಿನ ಈ ಇಫ್ತಾರ್ ಕೂಟ ವಿವಾದಕ್ಕೆ ಕಾರಣವಾಗಿತ್ತು ಸ್ವತಃ ಶ್ರೀರಾಮ ಸೇನೆ ಸಂಸ್ತಾಪಕ ಪ್ರಮೋದ್ ಮುತಾಲಿಕ ಕೃಷ್ಣಮಠಕ್ಕೆ ಭೇಟಿ ನೀಡಿ ಶ್ರೀಗಳೆದುರು ಅಸಮಧಾನ ಹೊರಹಾಕಿದ್ದರು.

ಕಳೆದ ಇಫ್ತಾರ್ ಕೂಟ ನಡೆದ ಬಳಿಕ ಗೋಮೂತ್ರ ಸ್ವಚ್ಚತೆ, ಪ್ರತಿಭಟನೆ, ಆಕ್ರೋಶ ಹಿಂದೂ ಸಂಘಟನೆ ಮೂಲಕ ವ್ಯಕ್ತವಾಗಿದ್ರೂ ಪೇಜಾವರ ಶ್ರೀಗಳು ಮಾತ್ರ ಇಫ್ತಾರ್ ಕೂಟದ ಪರ ನಿಂತಿದ್ರು. ತಮ್ಮ ನಿರ್ಧಾರವನ್ನು ಸಮರ್ಥನೆ ಮಾಡುತ್ತಾ ಬಂದು ಇದೀಗ ಮತ್ತೆ ಇಫ್ತಾರ್ ಕೂಟವನ್ನು ಸತ್ಕಾರ್ ಕೂಟ ಹೆಸರಿನಡಿ ಕೃಷ್ಣಮಠದ ಬದಲು ಮಠದಿಂದ 3ಕಿಲೋಮೀಟರ್ ದೂರವಿರುವ ಗೋವಿಂದ ಕಲ್ಯಾಣ ಮಂಟಪದಲ್ಲಿ ಇದೇ 13ರಂದು ನಿಗದಿಪಡಿಸಿದ್ದಾರೆ. ಪೇಜಾವರ ಶ್ರೀಗಳು ಪರ್ಯಾಯ ಸ್ವಾಮೀಜಿಗಳಾಗಿರದ ಕಾರಣ ಹಾಗೂ ಮುಸಲ್ಮಾನರೇ ಕೃಷ್ಣಮಠದಲ್ಲಿ ಆವರಣದಲ್ಲಿ ಒಪ್ಪದಿರುವುದರಿಂದ ಕಲ್ಯಾಣ ಮಂದಿರದಲ್ಲಿ ನಿಗದಿಯಾಗಿದ್ದು ಒಂದೆಡೆಯಾದ್ರೆ ಸ್ವಾಮೀಜಿಗಳು ಇಫ್ತಾರ್ ಕೂಟ ನಡೆಸುವುದರ ಬಗ್ಗೆಯೂ ವಿರೋಧ ಈಗಲೇ ಹೊರಬಿದ್ದಿದೆ.

ಒಟ್ಟಾರೆ ಸೌಹಾರ್ದಕ್ಕಾಗಿ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಗಳು ನಡೆಸುವ ಇಫ್ತಾರ್ ಕೂಟ ಕಳೆದ ಬಾರಿಯಂತೆ ಈ ಬಾರಿಯೂ ವಿವಾದಕ್ಕೆ ಕಾರಣವಾಗುತ್ತೋ ಇಲ್ಲ ಮೂರ್ತಿ ಪೂಜೆಯಿಲ್ಲದ ಕಲ್ಯಾಣಮಂದಿರದಲ್ಲಿ ನಡೆಯುವ ಮೂಲಕ ಇಫ್ತಾರ್ ಕೂಟ ಸೌಹಾರ್ಧದಲ್ಲೇ ಅಂತ್ಯವಾಗುತ್ತೋ ಎಂಬುದು ಕಾದುನೋಡಬೇಕಿದೆ.

Vishwa News 24

Recent Posts

ಉಡುಪಿ: ಮಹಾವೀರ ಜಯಂತಿ – ಸಾರ್ವತ್ರಿಕ ರಜೆಯಲ್ಲಿ ಬದಲಾವಣೆ  – vishwanews24

ಉಡುಪಿ: ಮಹಾವೀರ ಜಯಂತಿ ಸಾರ್ವತ್ರಿಕ ರಜೆಯಲ್ಲಿ ಬದಲಾವಣೆ  ಮಾ.31ರ ಮಂಗಳವಾರ ಬದಲಾಗಿ ಮಾ. 30ರ ಸೋಮವಾರ ರಜೆ ಘೋಷಣೆ ಉಡುಪಿ:…

9 hours ago

ಮಾ.30ಕ್ಕೆ ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ಮಾ.31ಕ್ಕೆ ಮುಂದೂಡಿಕೆ – vishwanews24

ಮಾ.30ಕ್ಕೆ ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ಮಾ.31ಕ್ಕೆ ಮುಂದೂಡಿಕೆ ಬೆಂಗಳೂರು: ಮಾ.30ಕ್ಕೆ ನಡೆಯಬೇಕಿದ್ದ ಎಸ್‌ಎಸ್‌ಎಲ್‌ಸಿ ಹಿಂದಿ ಪರೀಕ್ಷೆ  ಮಾ.31ಕ್ಕೆ ಮುಂದೂಡಿಕೆ…

9 hours ago

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ ನಿಯಮದಲ್ಲಿಈ ವರ್ಷವೂ 60 ದಿನಗಳ ವಿನಾಯಿತಿ : ಮಧು ಬಂಗಾರಪ್ಪ – vishwanews24

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ ನಿಯಮದಲ್ಲಿಈ ವರ್ಷವೂ 60 ದಿನಗಳ ವಿನಾಯಿತಿ : ಮಧು ಬಂಗಾರಪ್ಪ ಬೆಂಗಳೂರು:…

10 hours ago

ಉಡುಪಿ: ಬನ್ನಂಜೆ ಶ್ರೀ ಮಹಾಲಿಂಗೇಶ್ವರ ಬ್ರಹ್ಮಕಲಶೋತ್ಸವಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಆಹ್ವಾನ – vishwanews24

ಉಡುಪಿ: ಬನ್ನಂಜೆ ಶ್ರೀ ಮಹಾಲಿಂಗೇಶ್ವರ ಬ್ರಹ್ಮಕಲಶೋತ್ಸವಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಆಹ್ವಾನ ಉಡುಪಿ: ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ…

10 hours ago

ಬಂಟ್ವಾಳ: ಯುವತಿ ನಾಪತ್ತೆ ; ಪ್ರಕರಣ ದಾಖಲು – vishwanews24

ಬಂಟ್ವಾಳ: ಯುವತಿ ನಾಪತ್ತೆ; ಪ್ರಕರಣ ದಾಖಲು ಬಂಟ್ವಾಳ: ಕೆಲಸಕ್ಕೆಂದು ಹೊರಟ ಯುವತಿ ಮನೆಗೆ ಮರಳದೇ ನಾಪತ್ತೆಯಾಗಿರುವ ಘಟನೆ ಬಂಟ್ವಾಳ ತಾಲೂಕಿನ…

11 hours ago

ಉಡುಪಿ : ಗ್ಯಾರಂಟಿ ಯೋಜನೆಗಳಿಂದ ಜನ ಸಾಮಾನ್ಯರಿಗೆ ಸಾಕಷ್ಟು ಅನುಕೂಲ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ – vishwanews24

 ಎರಡು ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಜಯ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಉಡುಪಿ: ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಎರಡೂ…

11 hours ago