ಉಡುಪಿ: ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಅವರಿಗೆ ದೇವರು, ಮಠ, ಎಷ್ಟು ಇಷ್ಟವೋ ಮಕ್ಕಳೆಂದರೂ ಅಷ್ಟೇ ಅಕ್ಕರೆ. ಸ್ವಾಮೀಜಿ ಮಣಿಪಾಲದ ಕೆಎಂಸಿ ಆಸ್ಪತ್ರೆ ಸೇರುವ ಕೆಲ ಗಂಟೆಗಳ ಹಿಂದೆ ತಮ್ಮದೇ ಮಠದ ಆನಂದ ತೀರ್ಥ ಶಾಲೆಯ ವಾರ್ಷಿಕೋತ್ಸವದಲ್ಲಿ ಭಾಗಿಯಾಗಿ ಖುಷಿಪಟ್ಟಿದ್ದರು.
ಕಾರ್ಯಕ್ರಮದಲ್ಲಿ ಮಕ್ಕಳ ಡಾನ್ಸ್ ನೋಡಿ ಆನಂದಿಸಿದ್ದರು. ಪ್ರಶಸ್ತಿ ಕೊಡುವಾಗ ಪ್ರತಿಯೊಂದು ಮಗುವಿನ ಹೆಸರು ಮತ್ತು ಸಾಧನೆಯ ಬಗ್ಗೆ ಕೇಳುತ್ತಿದ್ದರು. ಸದಾ ನಗು ನಗುತ್ತಲೇ ಇರುವ, ಓಡಾಡುವ ಹಾಗೂ ಟೀಕೆಗಳಿಗೆ ನಕ್ಕು ಉತ್ತರ ಕೊಡುವ ಪೇಜಾವರ ಶ್ರೀಗಳು ಮಕ್ಕಳ ಜೊತೆ ಮಕ್ಕಳಾದ ವೀಡಿಯೋ ಆಗಿದೆ.
ವಿಶೇಷ ಅಂದರೆ ಪೇಜಾವರ ಶ್ರೀಗಳು ಕೊನೆಯದಾಗಿ ನೋಡಿದ್ದ ಮಕ್ಕಳ ಡಾನ್ಸ್ ನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಅರಮನೆ’ ಚಿತ್ರದ ‘ನಗು ನಗು’ ಹಾಡು ಎಂಬುದು ಮತ್ತೊಂದು ವಿಶೇಷವಾಗಿತ್ತು.
ಮಹಾಸಂತ ಪೇಜಾವರ ವಿಶ್ವೇಶತೀರ್ಥ ಶ್ರೀಪಾದರು ಭಾನುವಾರ ಕೃಷ್ಣನಲ್ಲಿ ಲೀನರಾಗಿದ್ದಾರೆ. ಬೆಂಗಳೂರಿನ ವಿದ್ಯಾಪೀಠದಲ್ಲಿ ಪೇಜಾವರ ಶ್ರೀಗಳ ಅಂತಿಮ ವಿಧಿವಿಧಾನಗಳು ಮಾಧ್ವ ಪರಂಪರೆಗೆ ಅನುಗುಣವಾಗಿ ಮಾಡಲಾಗಿತ್ತು.
ಕುಂದಾಪುರ: ಹೋಂ ಸ್ಟೇ ಎನ್ ಒಸಿ ನೀಡಲು ಲಂಚ ಪಡೆದ ಆರೋಪ ; ಗ್ರಾಮ ಲೆಕ್ಕಿಗ ಲೋಕಾಯುಕ್ತ ಬಲೆಗೆ ಕುಂದಾಪುರ…
ಉಡುಪಿ ಉಚ್ಚಿಲ ದಸರಾದಲ್ಲಿ ಮಹಿಳಾ ದಸರಾ ಉದ್ಘಾಟಿಸಿದ ಸಿಎಂ ಕರಾವಳಿ ಕರ್ನಾಟಕ ‘ಜಾಗತಿಕ ಟೂರಿಸಂ ಹಬ್’ ಆಗಿ ಅಭಿವೃದ್ಧಿ :…
ಮಂಗಳೂರು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ : ಚರ್ಚ್ ಫಾದರ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲು ಮಂಗಳೂರು: ಮಂಗಳೂರು…
ಉಡುಪಿ: ಪಡಿತರ ಚೀಟಿಯ ಫಲಾನುಭವಿಗಳಿಗೆ ಇ-ಕೆವೈಸಿ ಮಾಡಿಸಲು ಅ. 20 ರ ವರೆಗೆ ಅವಕಾಶ ಉಡುಪಿ: ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ…
ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ ಆನೆ ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು…
ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ ಬೆಳ್ತಂಗಡಿ: ನಾವೂರು ಗ್ರಾಮದ ಸ್ವಾತಿ…