ಪ್ರಕರಣ ದಾಖಲಾದ ತಕ್ಷಣ ದೋಷಿ, ನಿರ್ದೋಷಿ ಎಂದು ಹೇಳುವುದು ಸರಿಯಲ್ಲ: ಬಿಎಸ್ ವೈ ಬಗ್ಗೆ ದಿನೇಶ್ ಗುಂಡೂರಾವ್  – Vishwanews24

Featured, ರಾಜ್ಯ ನ್ಯೂಸ್

BSY ಪೋಕ್ಸೋ ಪ್ರಕರಣ : ಸರಿಯಾಗಿ ತನಿಖೆಯಾಗದೆ ವಿನಾಕಾರಣ ಯಾರನ್ನೂ ತೇಜೋವಧೆ ಮಾಡುವುದು ಸರಿಯಲ್ಲ‌ : ದಿನೇಶ ಗುಂಡೂರಾವ್ 

ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ದಾಖಲಾಗಿರುವ ಪೋಕ್ಸೋ ಪ್ರಕರಣದ ಬಗ್ಗೆ ಮಾತನಾಡುವುದು ಸರಿಯಲ್ಲ. ಪ್ರಕರಣ ದಾಖಲಾದ ತಕ್ಷಣ ದೋಷಿ, ನಿರ್ದೋಷಿ ಎಂದು ಹೇಳುವುದು ಸರಿಯಲ್ಲ ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣದ ಬಗ್ಗೆ ಹೆಚ್ಚಿಗೆ ಮಾತನಾಡುವುದಿಲ್ಲ. ಸರಿಯಾಗಿ ತನಿಖೆಯಾಗಬೇಕು. ವಿನಾಕಾರಣ ಯಾರನ್ನೂ ತೇಜೋವಧೆ ಮಾಡುವುದು ಸರಿಯಲ್ಲ‌ ಎಂದರು.

ಮೂಡುಬಿದ್ರೆ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ – ಶಿಕ್ಷಕನ ವಿರುದ್ದ ಪ್ರಕರಣ ದಾಖಲು – Vishwanews24

ರಾಜ್ಯದಲ್ಲಿ ನಾವು 20 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತೇವೆ. ಇದೀಗ ಸಿಎಎ ತೆಗೆದುಕೊಂಡು ಬಂದಿದ್ದಾರೆ. ಕಳೆದ 10 ವರ್ಷದಲ್ಲಿ ಇವರ ಅಭಿವೃದ್ಧಿ ಶೂನ್ಯ. ಹೀಗಾಗಿಯೇ ಚುನಾವಣೆ ಸಂದರ್ಭದಲ್ಲಿ ಇಂತಹ ವಿಷಯಗಳನ್ನು ತಂದು ಜನರ ಮನಸ್ಸನ್ನು ಬೇರೆಡೆಗೆ ಸೆಳೆಯುವ ಕೆಲಸ ಬಿಜೆಪಿ ನಾಯಕರು ಮಾಡುತ್ತಿದ್ದಾರೆ. ಮೋದಿ ಅವರು ಪ್ರಧಾನಿ ಆಗುವರೆಗೂ ದೇಶ ಇರಲಿಲ್ಲವೋ ಅಥವಾ ದೇಶದಲ್ಲಿ ಅಭಿವೃದ್ಧಿ ಆಗಿರಲಿಲ್ಲವೋ? ಇದೀಗ ಸ್ವರ್ಗ ಆಗಿದೆಯಾ? ಸುಮ್ಮನೆ ಜನರಿಗೆ ಮಂಕು ಬೂದಿ ಎರಚಿದ್ದಾರೆ. ಇದೀಗ ಬಹುತೇಕರಿಗೆ ಇವರ ನಿಜವಾದ ಬಣ್ಣ ಗೊತ್ತಾಗಿದೆ‌. ನಾವು ಹೇಳಿದಂತೆ ಮಾಡಿದ್ದೇವೆ. ನೀಡಿದ ಭರವಸೆಗಳನ್ನು ಈಡೇರಿಸಿದ್ದೇವೆ. ಬಿಜೆಪಿ ಸಂಸದರು ನಮ್ಮ ಪಕ್ಷದ ಅಧ್ಯಕ್ಷರ ಜೊತೆಗೆ ಸಂಪರ್ಕದಲ್ಲಿರಬಹುದು. ಈ ಬಗ್ಗೆ ನನಗೆ ಮಾಹಿತಿಯಿಲ್ಲ ಎಂದರು.

ನಾಳೆ ಲೋಕಸಭಾ ಚುನಾವಣೆ ದಿನಾಂಕ ಘೋಷಣೆ – Vishwanews24

 

Leave a Reply