ಪ್ರತಿ ವರ್ಷವೂ ಆಮಂತ್ರಣ ಪೋಸ್ಟರ್‍ಗಳಲ್ಲಿಯೇ ಸುದ್ದಿಯಾಗುತ್ತಾರೆ ಇವರು…ಯಾರು ಗೊತ್ತಾ…?
ಪ್ರಚಾರಕ್ಕೆ ಬಳಸುವ ವಿಷಯ ವಸ್ತುಗಳಿಂದಲೆ ಬಹಳಷ್ಟು ಸುದ್ದಿ ಮಾಡುವ ನಂದಳಿಕೆ ಸಿರಿಜಾತ್ರೆಯು ಈ ಬಾರಿ ಮತ್ತೆ ಸುದ್ದಿಯಲ್ಲಿದೆ. ಮೊನ್ನೆ ಮೊನ್ನೆಯಷ್ಟೆ ಕ್ಯಾಲೆಂಡರ್ ಮೂಲಕ ಮೂಡಿ ಬಂದಿದ್ದ ಸಿರಿಜಾತ್ರೆ ಆಮಂತ್ರಣ ಪೋಸ್ಟರ್‌ಗಳು ಎಲ್ಲರ ಪ್ರಶಂಸೆಗೆ ಪಾತ್ರವಾಗಿತ್ತು. ಈಗ ಮತ್ತೆ ಮಾವಿನ ಎಲೆಯ ಮೂಲಕ ಮೂಡಿಬಂದಿರುವ ಪೋಸ್ಟರ್‌ಗಳು ಜನಮನ ಗೆದ್ದಿವೆ.

ಕಾಡು ಬೆಳೆಸಿ, ನಾಡು ಉಳಿಸಿ ಎನ್ನುವ ಮೂಲ ವಿಷಯದೊಂದಿಗೆ ಮೂಡಿ ಬಂದಿರುವ ಪೋಸ್ಟರ್‌ಗಳನ್ನು ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಇತ್ತೀಚೆಗೆ ಬಿಡುಗಡೆ ಮಾಡಲಾಯಿತು.
ಶ್ರೀ ಸುಹಾಸ್ ಹೆಗ್ಡೆಯವರ ದಕ್ಷ ಮುಂದಾಳತ್ವದಲ್ಲಿ ವರ್ಷಂಪ್ರತಿ ಸಿರಿಜಾತ್ರ ಮಹೋತ್ಸವವು ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದ್ದು, ಇದೇ ಮಾರ್ಚ್ 31ನೇ ಶನಿವಾರ ಸಿರಿಜಾತ್ರ ಮಹೋತ್ಸವವು ಅದ್ಧೂರಿಯಾಗಿ ನಡೆಯಲಿ. ಈ ಜಾತ್ರೆಯಲ್ಲಿ ಲಕ್ಷಾಂತರ ಮಂದಿ ಸೇರುವ ನಿರೀಕ್ಷೆಯಲ್ಲಿದ್ದು, ಜಾತ್ರಾ ಸಿದ್ಧತೆಗಳು ಭರದಿಂದ ನಡೆಯುತ್ತಿವೆ.