ದಕ್ಷಿಣ ಕನ್ನಡ

ಪ್ರಥಮ ಬಾರಿ ಮಂಗಳಮುಖಿಯರಿಂದ ಮತದಾನ

ಮಂಗಳೂರು : ದ.ಕ. ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರದಲ್ಲಿ 100 ಮಂಗಳಮುಖಿಯರು ಮತದಾನಕ್ಕೆ ಅವಕಾಶ ಪಡೆದಿದ್ದು, ಆ ಪೈಕಿ ಸುಮಾರು 14 ಮಂದಿ ಶನಿವಾರ ಬೆಳಗ್ಗೆ ನಗರದ ಮಿಲಾಗ್ರಿಸ್ ಮತಗಟ್ಟೆಯಲ್ಲಿ ಮತದಾನಗೈದರು.

ಬಲು ಉತ್ಸಾಹದಿಂದ ಮತಗಟ್ಟೆಗೆ ಆಗಮಿಸಿದ ಮಂಗಳಮುಖಿಯರು ಸಾಲಿನಲ್ಲೇ ನಿಂತು ಮತ ಚಲಾಯಿಸಿದರು.

ಈ ಸಂದರ್ಭ ಮಂಗಳಮುಖಿ ಸಂಜನಾ ಎಂಬವರು  ಮಾತನಾಡಿ ‘ನಾವು ಮತದಾನ ಮಾಡಲು ಬೇಡಿಕೆ ಸಲ್ಲಿಸುತ್ತಲೇ ಇದ್ದೆವು. ಆದರೆ, ಅವಕಾಶ ಸಿಕ್ಕಿರಲಿಲ್ಲ. ಇದೇ ಮೊದಲ ಬಾರಿಗೆ ಈ ಒಂದು ಅವಕಾಶ ಸಿಕ್ಕಿದೆ. ಹಾಗಾಗಿ ನಮಗೆ ಇಂದು ಸ್ವಾತಂತ್ರ ಸಿಕ್ಕಿದೆ ಎನ್ನಬಹುದು. ಈ ಸಂತಸದ ಕ್ಷಣವನ್ನು ನಾವು ಎಂದೂ ಕೂಡಾ ಮರೆಯಲು ಸಾಧ್ಯವಿಲ್ಲ’ ಎಂದರು.

ಬೆಳ್ತಂಗಡಿ ಕ್ಷೇತ್ರದಲ್ಲಿ 1, ಮೂಡುಬಿದಿರೆಯಲ್ಲಿ 13, ಮಂಗಳೂರು ನಗರ ಉತ್ತರದಲ್ಲಿ 8, ಮಂಗಳೂರು ನಗರ ದಕ್ಷಿಣದಲ್ಲಿ 56, ಮಂಗಳೂರು ಕ್ಷೇತ್ರದಲ್ಲಿ 13, ಬಂಟ್ವಾಳದಲ್ಲಿ 6, ಪುತ್ತೂರಿನಲ್ಲಿ 3 ಮಂಗಳಮುಖಿಯರು ಮತದಾನಕ್ಕೆ ಅರ್ಹತೆ ಪಡೆದಿದ್ದಾರೆ. ಸುಳ್ಯದಲ್ಲಿ ಮಂಗಳಮುಖಿ ಮತದಾರರಿಲ್ಲ.

Vishwa News 24

Recent Posts

ಕುಂದಾಪುರ: ನಿಂತ ಲಾರಿಗಳಿಗೆ ಬಸ್ ಢಿಕ್ಕಿ: ಎರಡು ಸಾವು, ಹಲವರಿಗೆ ಗಾಯ – vishwanews24

ಕುಂದಾಪುರ: ನಿಂತ ಲಾರಿಗಳಿಗೆ ಬಸ್ ಢಿಕ್ಕಿ: ಎರಡು ಸಾವು, ಹಲವರಿಗೆ ಗಾಯ ಕುಂದಾಪುರ: ಮರವಂತೆ ಸಮುದ್ರ ಕಿನಾರೆಯ ಎದುರಿನ‌ ರಾಷ್ಟ್ರೀಯ…

16 hours ago

ರೇಣುಕಾಸ್ವಾಮಿ ಹತ್ಯೆ ಪ್ರಕರಣ : ಜಾಮೀನಿಗಾಗಿ ಸುಪ್ರೀಂ ಕೋರ್ಟ್‌ ಮೊರೆ ಹೋದ ದರ್ಶನ್‌ – vishwanews24

ರೇಣುಕಾಸ್ವಾಮಿ ಹತ್ಯೆ ಪ್ರಕರಣ : ಜಾಮೀನಿಗಾಗಿ ಸುಪ್ರೀಂ ಕೋರ್ಟ್‌ ಮೊರೆ ಹೋದ ದರ್ಶನ್‌ ನವದೆಹಲಿ : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು…

16 hours ago

ದ. ಕ, ಉಡುಪಿ ಸೇರಿದಂತೆ  5 ದಿನಗಳ ಕಾಲ ಭಾರೀ ಮಳೆಯ ಮುನ್ಸೂಚನೆ ; 25 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ – vishwanews24

ದ. ಕ, ಉಡುಪಿ ಸೇರಿದಂತೆ  5 ದಿನಗಳ ಕಾಲ ಭಾರೀ ಮಳೆಯ ಮುನ್ಸೂಚನೆ ; 25 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ …

16 hours ago

ಉಡುಪಿ ಶ್ರೀಕೃಷ್ಣ ದರ್ಶನಕ್ಕೆ ನೂತನ ಸರತಿ ಸಾಲು ಹಾಗೂ ಐಡಿ ಆಧಾರಿತ ಪ್ರವೇಶ ವ್ಯವಸ್ಥೆ ಉದ್ಘಾಟನೆ – vishwanews24

ಉಡುಪಿ ಶ್ರೀಕೃಷ್ಣ ದರ್ಶನಕ್ಕೆ ನೂತನ ಸರತಿ ಸಾಲು ಹಾಗೂ ಐಡಿ ಆಧಾರಿತ ಪ್ರವೇಶ ವ್ಯವಸ್ಥೆ ಉದ್ಘಾಟನೆ ಉಡುಪಿ : ಶ್ರೀ…

19 hours ago

ಮಂಗಳೂರು: ಸ್ಕೂಟರ್‌ ಸವಾರನಿಗೆ ಖಾರದ ಪುಡಿ ಎರಚಿ ದರೋಡೆ; ಪ್ರಕರಣ ದಾಖಲು – vishwanews24

ಮಂಗಳೂರು: ಸ್ಕೂಟರ್‌ ಸವಾರನಿಗೆ ಖಾರದ ಪುಡಿ ಎರಚಿ ದರೋಡೆ; ಪ್ರಕರಣ ದಾಖಲು ಮಂಗಳೂರು: ಗುರುಪುರ ಬಂಗ್ಲಗುಡ್ಡೆ ಬಳಿ ಸ್ಕೂಟರ್ ಸವಾರರೊಬ್ಬರಿಗೆ…

19 hours ago

ಪಿಯು ವಿದ್ಯಾರ್ಥಿನಿಯರ ನಾಪತ್ತೆ ಪ್ರಕರಣ: ಸಿಐಡಿ ತನಿಖೆಗೆ ಆದೇಶ – vishwanews24

ಪಿಯು ವಿದ್ಯಾರ್ಥಿನಿಯರ ನಾಪತ್ತೆ ಪ್ರಕರಣ: ಸಿಐಡಿ ತನಿಖೆಗೆ ಆದೇಶ 8 ತಿಂಗಳ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿಗಳು ಬೆಂಗಳೂರು: ನಗರದ ವಿದ್ಯಾರಣ್ಯಪುರ…

19 hours ago