ಪ್ರಧಾನಿ ನರೇಂದ್ರ ಮೋದಿಗಿಂತ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಉತ್ತಮ : ಅರವಿಂದ್ ಕೇಜ್ರಿವಾಲ್ -Vishwanews24
ನವದೆಹಲಿ,: ಪ್ರಧಾನಿ ನರೇಂದ್ರ ಮೋದಿ ಎಲ್ಲಾ ಕ್ಷೇತ್ರಗಳಲ್ಲಿಯೂ ವಿಫಲರಾಗಿದ್ದಾರೆ. ಹೀಗಾಗಿ ಅವರಿಗಿಂತ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸಾವಿರ ಬಾರಿ ಪ್ರಧಾನಿಯಾದರೂ ಉತ್ತಮ ಎಂದು ಎಎಪಿ ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಸಂದರ್ಶನದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನಕಲಿ ರಾಷ್ಟ್ರೀಯತೆಯೊಂದಿಗೆ ಮತ್ತೆ ಅಧಿಕಾರಕ್ಕೆ ಬರಲು ಯತ್ನಿಸುತ್ತಿದ್ದಾರೆ. ಮೋದಿಯದು ನಕಲಿ ರಾಷ್ಟ್ರೀಯತೆ, ಅದು ದೇಶಕ್ಕೆ ಅಪಾಯಕಾರಿಯಾದದ್ದು. ಎಲ್ಲಾ ಕ್ಷೇತ್ರಗಳಲ್ಲಿಯೂ ಮೋದಿ ವಿಫಲರಾಗಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಬಿಜೆಪಿ ಮೋದಿ ಹೆಸರಿನಲ್ಲಿ ವೋಟ್ ಕೇಳುತ್ತಿದೆ. ಯಾವುದೇ ಕೆಲಸ ಮಾಡದ ಮೋದಿ ಸಶಸ್ತ್ರ ಪಡೆಗಳನ್ನು ವೋಟಿಗಾಗಿ ಬಳಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಮೋದಿಗಿಂತಲೂ ಮನ್ ಮೋಹನ್ ಸಿಂಗ್ ಸಾವಿರ ಬಾರಿ ಪ್ರಧಾನಿಯಾದರೂ ಉತ್ತಮ ಎಂದು ಹೇಳಿದರು.
ದೇಶದಲ್ಲಿ ಅದೆನೇ ಮಾಡಿದರೂ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ. ಮೋದಿ ಹಾಗೂ ಅಮಿತ್ ಶಾ ಮತ್ತೆ ಅಧಿಕಾರಕ್ಕೆ ಬಾರದಂತೆ ತಡೆಗಟ್ಟುವುದೇ ನಮ್ಮ ಗುರಿಯಾಗಿದೆ. ಇವರಿಬ್ಬರನ್ನು ಬಿಟ್ಟು ಬೇರೆ ಯಾರನ್ನಾನಾದರೂ ನಾವು ಬೆಂಬಲಿಸುತ್ತೇವೆ. ಈ ಬಾರಿಯ ಚುನಾವಣೆಯಲ್ಲಿ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಉತ್ತಮ ಸಾಧನೆ ಮಾಡಲಿದೆ ಎಂದು ಕೇಜ್ರಿವಾಲ್ ಹೇಳಿದರು.
