ಪ್ರಧಾನಿ ಮೋದಿಗೆ ಧಮ್ಮಿದ್ದರೆ ರಾಮಮಂದಿರಕ್ಕೆ ಪಾಯ ಹಾಕಲಿ: ಎಸ್.ಕೆ ಬೆಳ್ಳುಬ್ಬಿ
ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತೀಯ ಜನತಾ ಪಕ್ಷದ ಮುಖಂಡರಿಗೆ ಧಮ್ ಇದ್ದರೆ ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಅಡಿಪಾಯ ಹಾಕಿ ಬಳಿಕ ಲೋಕಸಭಾ ಚುನಾವಣೆಯ ಪ್ರಚಾರಕ್ಕೆ ಇಳಿಯಲಿ ಎಂದು ಜಾತ್ಯತೀತ ಜನತಾದಳದ ಮುಖಂಡ ಎಸ್.ಕೆ ಬೆಳ್ಳುಬ್ಬಿ ಚಾಲೆಂಜ್ ಹಾಕಿದ್ದಾರೆ. ಇಂದು ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಪಕ್ಷದ ವಿರುದ್ಧ ಕಿಡಿಕಾರಿದರು.
ಬಿಜೆಪಿಯವರು ಬಾಬ್ರಿ ಮಸೀದಿ ಧ್ವಂಸದ ವೇಳೆ ಯುವಕರನ್ನು ಬಲಿ ನೀಡಿದರು, ಉತ್ತರ ಪ್ರದೇಶದಲ್ಲಿ ಬ್ರಾಹ್ಮಣರನ್ನು ಬಲಿ ನೀಡಿದರು. ರಾಮ ಮಂದಿರದ ಹೆಸರಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು. ಬಿಜೆಪಿಯವರು ಮೋದಿ ಹೆಸರಿನಲ್ಲಿ ಕತ್ತೆ ನಿಲ್ಲಿಸಿದರೂ ಗೆಲ್ಲುತ್ತದೆ ಅಂದುಕೊಂಡಿದ್ದಾರೆ.ಟಿಕೆಟ್‌ಗಳನ್ನು ಮಾರಿಕೊಂಡಿದ್ದಾರೆ ಎಂದು ಕಿಡಿ ಕಾರಿದರು.
