ಪ್ರಧಾನಿ ಮೋದಿಯವರಿಂದಾಗಿ ಚುನಾವಣೆ ಗೆದ್ದ ಬಿಜೆಪಿ ಸಂಸದರು : ಚಕ್ರವರ್ತಿ ಸೂಲಿಬೆಲೆ -Vishwanews24

Featured, ರಾಜ್ಯ ನ್ಯೂಸ್
ಬೆಂಗಳೂರುನಾಲ್ಕು ಲಕ್ಷ ಮತಗಳ ಅಂತರದಿಂದ ಗೆದ್ದವರೂ ನಲವತ್ತೇ ಸಾವಿರ ಮತಗಳ ಅಂತರದಿಂದ ಗೆದ್ದವರು ಎಲ್ಲರೂ ಮೋದಿ ಮತಭಿಕ್ಷೆಯ ಫಲಾನುಭವಿಗಳೇ ಇದನ್ನು ಅರಿತುಕೊಂಡು ಸಂಸದರು ಕೆಲಸ ಮಾಡಬೇಕು ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಬಿಜೆಪಿ ಸಂಸದರ ವಿರುದ್ಧ ಚಾಟಿ ಬೀಸಿದ್ದಾರೆ.
ಈ ಸಂಬಂಧ ತಮ್ಮ ಫೇಸ್ ಬುಕ್ ಪೋಸ್ಚ್ ನಲ್ಲಿ ಬರೆದುಕೊಂಡಿರುವ ಚಕ್ರವರ್ತಿ ಸೂಲಿಬೆಲೆ ಮೋದಿ ಒಬ್ಬರು ಇಲ್ಲದೇ ಹೋಗಿದ್ದರೆ ಕರ್ನಾಟಕದ ಬಹುತೇಕ ಸಂಸದರ ಪರಿಸ್ಥಿತಿ ಮಲ್ಲಿಕಾರ್ಜುನ ಖರ್ಗೆ ಮತ್ತು ಕೆ.ಎಚ್ ಮುನಿಯಪ್ಪನವರಿಗಿಂತಲೂ ಭಿನ್ನವಾಗಿರುತ್ತಿರಲಿಲ್ಲ. ಸೋಲು ಹೀನಾಯವಾಗಿರುತ್ತಿತ್ತು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಗೆಲುವು ಮೋದಿಯ ಹೆಸರಿಗೆ ಮಾತ್ರವಲ್ಲ, ಅವರು ಮಾಡಿದ ಕೆಲಸಕ್ಕೆ, ತೆಗೆದುಕೊಂಡ ನಿರ್ಣಯಗಳಿಗೆ ಹಾಗೂ ರಾಷ್ಟ್ರಹಿತಕ್ಕೆ ಬದ್ಧವಾದ ಅವರ ಬದುಕಿನ ರೀತಿ ನೀತಿಗಳಿಂದಾಗಿ ಕರ್ನಾಟಕದ ಸಂಸದರಿಗೆ ಗೆಲುವು ಸಿಕ್ಕಿತು. ಹೀಗಾಗಿ ತಮ್ಮದಲ್ಲದ ಗೆಲುವಿಗೆ ಧಿಮಾಕಿನಿಂದ ಸಂಭ್ರಮಿಸುವ ಬದಲು ಮಾಡಬೇಕಾಗಿರುವ ಕೆಸಲವನ್ನು ಮಾಡಬೇಕು.
ತಮ್ಮ ಕ್ಷೇತ್ರದ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಬೇಕು, ಮೈಗಳ್ಳತನ ಬಿಟ್ಟು ಕೆಲಸ ಮಾಡಬೇಕು,. ಇತ್ತೀಚೆಗೆ ಸದಾನಂದಗೌಡ ಜಾತಿ ಹೆಸರು ಹೇಳಿಕೊಂಡು ಸಾಂಪ್ರದಾಯಿಕ ರಾಜಕಾರಣಕ್ಕೆ ಮತ್ತೆ ಅಡಿ ಇಡುತ್ತಿದ್ದಾರೆ ಹಾಗೆಯೇ ಎಮರ್ಜೆನ್ಸಿ ಆಸ್ಪತ್ರೆಗಾಗಿ ಉತ್ತರ ಕನ್ನಡದ ಜನ ಹೋರಾಟ ನಡೆಸುತ್ದಿದ್ದಾರೆ, ಅದಕ್ಕಾಗಿ ಅನಂತ್ ಕುಮಾರ್ ಹೆಗಡೆ ಭೇಟಿ ಮಾಡಿ ಮನವಿ ಸಲ್ಲಿಸಿದರು, ಈ ವೇಳೆ ಪ್ರತಿಕ್ರಿಯಿಸಿರುವ ಅನಂತ್ ಕುಮಾರ್ ಹೆಗಡೆ ರಾಜ್ಯಕ್ಕೆ ಸೇರಿರುವ ಕೆಲಸ ತಾನು ಮಾಡುವುದಿಲ್ಲ ಎಂದು ಹೇಳಿದ್ದಾರೆ,

ಮೋದಿ ಮುಖ ನೋಡಿ ಜನರು ರಾಜ್ಯದಲ್ಲಿ 25 ಸ್ಥಾನಗಳನ್ನು ಬಿಜೆಪಿಗೆ ನೀಡಿದ್ದಾರೆ. ಹೀಗಾಗಿ ಬಿಜೆಪಿ ಸಂಸದರು ಜನರಿಗೆ ಪೂರಕವಾಗಿ ಕೆಲಸ ಮಾಡಬೇಕು. ಯಾರೂ ಸ್ಪಷ್ಟವಾಗಿ ಸ್ವಂತ ವರ್ಚಸ್ಸಿನಿಂದ ಗೆದ್ದಿದ್ದೇನೆಂದು ಹೇಳಲು ಅರ್ಹರಿಲ್ಲ. ಜಾತಿ ಬೆಂಬಲದಿಂದ ಗೆದ್ದಿದ್ದೇನೆಂದರೆ ಮತದಾರರು ಒಪ್ಪುವುದಿಲ್ಲ ಎಂದು ಕೇಂದ್ರ ಸಚಿವ ಸದಾನಂದ ಗೌಡರಿಗೆ ಸೂಲಿಬೆಲೆ ತಿರುಗೇಟು ನೀಡಿದರು.