ಪ್ರಧಾನಿ ಮೋದಿಯವರ ಆಡಳಿತದಿಂದ ಭಾರತ ಪ್ರಭಾವಿಶಾಲಿ ಎಂದು ಗುರುತಿಸಿಕೊಂಡಿದೆ : ಚಕ್ರವರ್ತಿ ಸೂಲಿಬೆಲೆ – Vishwanews24
ಕುಂದಾಪುರ: ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಿಂದ ಭಾರತ ಪ್ರಭಾವಿಶಾಲಿ ಎಂದು ಗುರುತಿಸಿಕೊಂಡಿದೆ. ಇತ್ತೀಚೆಗೆ ಜಮ್ಮು ಕಾಶ್ಮೀರದ ಪುಲ್ವಾಮ ಘಟನೆಯ ಬಳಿಕ ವಿಶ್ವಸಂಸ್ಥೆಯ 14 ರಾಷ್ಟ್ರಗಳ ಸೆಕ್ಯುರಿಟಿ ಕೌನ್ಸಿಲ್ ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ ನೀಡುವ ಮೂಲಕ ಮೋದಿಯ ಪ್ರಭಾವವನ್ನು ಜಗತ್ತು ಒಪ್ಪಿಕೊಂಡಂತಾಗಿದೆ ಎಂದು ಟೀಂ ಮೋದಿ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಅವರು ಕುಂದಾಪುರದಲ್ಲಿ ಟೀಮ್ ಮೋದಿ ಕುಂದಾಪುರ ಆಯೋಜಿಸಿದ ’ದೇಶಕ್ಕಾಗಿ ಮೋದಿ, ಮೋದಿಗಾಗಿ ನಾವು’ ಎನ್ನುವ ಕಾರ್ಯಕ್ರಮದಲ್ಲಿ ಮಾತನಾಡಿದರು.ಈ ದೇಶದ ಸಾರ್ವಭೌಮತೆಯನ್ನು ಉಳಿಸಿಕೊಳ್ಳಲು, ಜಾಗತಿಕ ಮಟ್ಟದಲ್ಲಿ ಭಾರತವನ್ನು ಶಕ್ತಿಶಾಲಿ ರಾಷ್ಟ್ರವನ್ನಾಗಿ ನಿರೂಪಿಸಲು ಮೋದಿಯಂಥಹ ದೇಶ ಭಕ್ತರು ಬೇಕು. ಈ ದೇಶದ ಜನತೆ ಮತ್ತೆ ಮೋದಿಯವರನ್ನು ಬೆಂಬಲಿಸಲಿದ್ದಾರೆ. ಮೋದಿಜಿಯವರ ಆಡಳಿತ ವ್ಯವಸ್ಥೆಯಲ್ಲಿ ಭಾರತ ಸಾಧಿಸಿರುವ ಮಹತ್ವದ ಮೈಲಿಗಲ್ಲು ಜನರ ಮುಂದಿದೆ ಎಂದು ಅವರು ಹೇಳಿದರು.
ಪಾಕಿಸ್ತಾನ ಬಿಟ್ಟು 56 ಮುಸ್ಲಿಂ ರಾಷ್ಟ್ರಗಳು ಇಂದು ಭಾರತದ ಬೆಂಬಲಕ್ಕೆ ನಿಂತಿದ್ದರೆ ಅದಕ್ಕೆ ಪ್ರಧಾನಿ ಮೋದಿಯವರ ವಿದೇಶ ಪ್ರವಾಸವೇ ಕಾರಣ. ಮೋದಿಯವರು ತಣ್ಣಗೆ ಇದ್ದು ಏಟು ಹೊಡೆಯುವವರು. ಜಮ್ಮು ಕಾಶ್ಮೀರದಲ್ಲಿನ ಘಟನೆಗೆ ಸೂಕ್ತ ದಿನಗಳಲ್ಲಿ ಉತ್ತರ ನೀಡಲಿದ್ದಾರೆ. ಅದಕ್ಕಾಗಿ ಭಾರತ ಕಾಯುತ್ತಿದೆ ಎಂದರು.
ಪ್ರಧಾನಿಯಾಗುತ್ತಿದ್ದಂತೆ ಮೋದಿಜಿಯವರು ಸೈನಿಕರ ಬಗ್ಗೆ ವಿಶೇಷ ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಸೈನಿಕರಿಗೂ ಕೂಡಾ ಇಂಥಹ ಪ್ರಧಾನಿಯೊಬ್ಬರ ಅವಶ್ಯಕತೆ ಇತ್ತು. ಅದನ್ನು ಭಾರತೀಯ ಸೈನಿಕರೇ ಹೇಳಿ ಕೊಂಡಿದ್ದಾರೆ. ಪ್ರತಿಯೊಂದು ದೇಶದಲ್ಲಿಯೂ ಇರುವ ಯುದ್ಧ ಸ್ಮಾರಕಗಳ ಬಗ್ಗೆ ಕನಸು ಕಂಡ ಮೋದಿಯವರು ವಾರ್ ಮೆಮೋರಿಯಲ್ ನಿರ್ಮಾಣ ಮಾಡಿ ಇಂದು ದೇಶಕ್ಕೆ ಸಮರ್ಪಿಸಿದ್ದಾರೆ. ಇಲ್ಲಿ ಹುತಾತ್ಮರಾದ 20 ಸಾವಿರ ಸೈನಿಕರ ಹೆಸರಿನಲ್ಲಿ ಪ್ರತ್ಯೇಕ ಕಲ್ಲುಗಳ ಸ್ಥಾಪನೆ ಮಾಡಲಾಗಿದೆ. ಕಳೆದ 70 ವರ್ಷದಲ್ಲಿ ಆಗಿರುವ ಕಾರ್ಯ ಇವತ್ತು ಮೋದಿಯವರಿಂದ ಆಗಿದೆ ಎನ್ನುವುದು ನಾವು ಸಂತೋಷ ಪಡಬೇಕಾಗಿದೆ.

ನಮ್ಮ ವೈರಿ ರಾಷ್ಟ್ರ ಪಾಕಿಸ್ತಾನ ಬೇಡುವ ಹಂತಕ್ಕೆ ಬಂದು ನಿಂತಿದೆ. ಹೀಗೆ ಆದರೆ ಮುಂದೆ ಭಿಕ್ಷೆ ಪಾತ್ರೆಯನ್ನೂ ಅದು ಕಳೆದುಕೊಳ್ಳಲಿದೆ. ಪಾಕಿಸ್ತಾನದ ಮೇಲೆ ಆಂತರಿಕ ಹೊಡೆತ ನೀಡಲಾಗುತ್ತಿದೆ. ಆಂತರಿಕವಾಗಿ ಪಾಕಿಸ್ತಾನದ ಹಣಕಾಸು ವ್ಯವಸ್ಥೆಯನ್ನು ಹಿಂಡುವ ಕಾರ್ಯ ಆಗುತ್ತಿದೆ. ಪಾಕಿಸ್ತಾನದ ಎಲ್ಲ ಕುಕೃತ್ಯಗಳಿಗೆ ತಕ್ಕ ಉತ್ತರ ನೀಡುವ ಕೆಲಸ ಆಗುತ್ತಿದೆ ಎಂದರು.