ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತಮಿಳು ಸಂಸ್ಕೃತಿಯನ್ನು ಗೌರವಿಸುವುದಿಲ್ಲ : ರಾಹುಲ್ ಗಾಂಧಿ -Vishwanews24

Featured, ರಾಷ್ಟ್ರ ನ್ಯೂಸ್

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತಮಿಳು ಸಂಸ್ಕೃತಿಯನ್ನು ಗೌರವಿಸುವುದಿಲ್ಲ : ರಾಹುಲ್ ಗಾಂಧಿ -Vishwanews24

ಕನ್ಯಾಕುಮಾರಿ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತಮಿಳು ಸಂಸ್ಕೃತಿಯನ್ನು ಗೌರವಿಸುವುದಿಲ್ಲ. ತಮಿಳುನಾಡಿನ ಪ್ರತ್ಯೇಕ ಸಾಂಸ್ಕೃತಿಕ ಗುರುತನ್ನು ನಾಶ ಮಾಡುವ ಹುನ್ನಾರ ನಡೆದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ .

ಕನ್ಯಾಕುಮಾರಿಯಲ್ಲಿ ಕಾಂಗ್ರೆಸ್ ರೋಡ್ ಶೋ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ತಮಿಳು ಸಂಸ್ಕೃತಿಯ ರಕ್ಷಣೆಯ ಜವಾಬ್ದಾರಿ ಹೊರಬೇಕಿದ್ದ ಮುಖ್ಯಮಂತ್ರಿ ಇಕೆ ಪಳನಿಸ್ವಾಮಿ, ಪ್ರಧಾನಿ ಮೋದಿ ಬಯಸಿದ್ದನ್ನೇ ಮಾಡುತ್ತಾ ತಮಿಳು ಸಹೋದರರಿಗೆ ದ್ರೋಹ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

ಕಾಂಗ್ರೆಸ್‌ ಪಕ್ಷವು ‍ಇಡೀ ದೇಶದಲ್ಲಿ ಕುಸಿಯುತ್ತಿದೆ : ಅಮಿತ್‌ ಶಾ -Vishwanews24

ಪಳನಿಸ್ವಾಮಿ ಆರ್‌ಎಸ್‌ಎಸ್‌ಗೆ ತಮಿಳು ಸಂಸ್ಕೃತಿಯನ್ಜು ಅವಮಾನಿಸಲು ಯಾವುದೇ ಕಾರಣಕ್ಕೂ ಬಿಡಬಾರದು. ಆರ್‌ಎಸ್‌ಎಸ್‌ ಮೊದಲಿನಿಂದಲೂ ದ್ರಾವಿಡ ಸಂಸ್ಕೃತಿಯನ್ನು ತಿರಸ್ಕರಿಸುತ್ತಲೇ ಬಂದಿದ್ದು, ಎಐಎಡಿಎಂಕೆ ಹಾಗೂ ಬಿಜೆಪಿ ಮೈತ್ರಿಕೂಟದಿಂದ ತಮಿಳು ಸಂಸ್ಕೃತಿಗೆ ಮತ್ತಷ್ಟು ಹಾನಿಯಾಗಲಿರುವುದುಯ ಖಚಿತ ಎಂದು ರಾಹುಲ್ ಎಚ್ಚರಿಸಿದರು.

ಬದುಕಿನ‌ ಕೊನೆ ಉಸಿರಿರುವವರೆಗೆ ರಾಜ್ಯದ ಹಾಗೂ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶಕ್ತಿಮೀರಿ ದುಡಿಯುತ್ತೇನೆ : ಸಿಎಂ BSY -Vishwanews24

ಪ್ರಧಾನಿ ಮೋದಿ ಒಂದು ದೇಶ, ಒಂದು ಸಂಸ್ಕೃತಿ ಹಾಗೂ ಒಂದು ಇತಿಹಾಸದ ಕುರಿತು ಮಾತನಾಡುತ್ತಾರೆ. ಹಾಗಾದರೆ ತಮಿಳುನಾಡಿನ ಸಂಸ್ಕೃತಿ ಹಾಗೂ ಇತಿಹಾಸ ಭಾರತದ ಅವಿಭಾಜ್ಯ ಅಂಗವಲ್ಲವೇ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು.

ತಮಿಳುನಾಡು ತನ್ನದೇ ಆದ ವಿಶಿಷ್ಟ ಸಾಂಸ್ಕೃತಿಕ ಇತಿಹಾಸವನ್ನು ಹೊಂದಿದ್ದು, ಓರ್ವ ಭಾರತೀಯನಾಗಿ ಈ ಭವ್ಯ ಇತಿಹಾಸವನ್ನು ಕಾಪಾಡುವುದು ತಮ್ಮ ಜವಾಬ್ದಾರಿ ಎಂದು ರಾಹುಲ್ ಗಾಂಧಿ ಹೇಳಿದರು.

ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರವು ಎಲ್ಲ ವರ್ಗದವರಿಗೂ ನ್ಯಾಯ ಕಲ್ಪಿಸುವ ಕೆಲಸ ಮಾಡಲಿ : ವಿನಯ್‌ ಗುರೂಜಿ -Vishwanews24