ಪ್ರಧಾನಿ ಮೋದಿ ಪದಗ್ರಹಣ ಸಮಾರಂಭಕ್ಕೆ ಪೇಜಾವರ ಶ್ರೀಗಳಿಗೂ ಆಹ್ವಾನ -Vishwanews24

Featured, ಉಡುಪಿ

ಉಡುಪಿ : ಎರಡನೇ ಅವಧಿಗೆ ಪ್ರಧಾನಿಯಾಗಿ ಇಂದು ಸಂಜೆ ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕರಿಸಲಿದ್ದು, ಪದಗ್ರಹಣ ಸಮಾರಂಭಕ್ಕೆ ಪೇಜಾವರ ಶ್ರೀಗಳಿಗೂ ಆಹ್ವಾನ ಬಂದಿದೆ.

ಇಂದು ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಪೇಜಾವರ ಶ್ರೀಗಳು ಭಾಗವಹಿಸಲಿದ್ದಾರೆ. ಮಂಗಳೂರಿನಿಂದ ವಿಮಾನದ ಮೂಲಕ ಪೇಜಾವರ ಶ್ರೀಗಳು ದೆಹಲಿಗೆ ತೆರಳಿದ್ದಾರೆ.

ಈ ಹಿನ್ನೆಲೆಯಲ್ಲಿ ಮೋದಿ ಪ್ರಮಾಣ ವಚನ ಸಮಾರಂಭಕ್ಕೆ ಪೇಜಾವರ ಶ್ರೀಗಳು ದೆಹಲಿಗೆ ತೆರಳಿದ್ದಾರೆ. 2014 ರಲ್ಲಿ ಮೋದಿ ಪ್ರಧಾನಿ, ಶಿಷ್ಯೆ ಉಮಾಭಾರತಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ಶ್ರೀಗಳು ತೆರಳಿದ್ದರು.

ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ 2003 ರಲ್ಲಿ ಉಮಾಭಾರತಿ ಅಧಿಕಾರ ಸ್ವೀಕರಿಸುವ ಮೊದಲು ಪೇಜಾವರ ಶ್ರೀ ವಿಶ್ವೇತೀರ್ಥ ಶ್ರೀಪಾದರ ಪಾದ ಪೂಜೆ ನೆರವೇರಿಸಿದ್ದರು. 2003, 2013 ರಲ್ಲಿ ವಸುಂಧರಾ ರಾಜೆ ರಾಜಸ್ಥಾನದ ಸಿಎಂ ಆದಗಲೂ ಪೇಜಾವರ ಶ್ರೀಗಳು ಹರಿಸಿದ್ದರು.