ಪ್ರಧಾನಿ ಮೋದಿ ಹತ್ಯೆ ಸಂಚುಕೋರರ ನಾಶಕ್ಕಾಗಿ ಕಾಲಭೈರವೇಶ್ವರನಿಗೆ ಪೂಜೆ

Featured, ರಾಜ್ಯ ನ್ಯೂಸ್

ಮೈಸೂರು: ಪ್ರಧಾನಿ ಮೋದಿ ಹತ್ಯೆಗೆ ಸಂಚು ನಡೆಸಿದವರು ಸರ್ವನಾಶವಾಗಲಿ ಎಂದು ಸಂಸದ ಪ್ರತಾಪ್​ ಸಿಂಹ ನೇತೃತ್ವದಲ್ಲಿ ಪೂಜೆ ನಡೆಯುತ್ತಿದೆ.

ಕೆ.ಟಿ.ಸ್ಟ್ರೀಟ್​ನಲ್ಲಿರುವ ಕಾಲ ಭೈರವೇಶ್ವರ ದೇವಾಲಯದಲ್ಲಿ ಬಿಜೆಪಿ ಹಲವು ಮುಖಂಡರು ಸೇರಿ, ಮಾಜಿ ಪ್ರಧಾನಿ ವಾಜಪೇಯಿ ಆರೋಗ್ಯ ಸುಧಾರಣೆಯಾಗಲಿ ಹಾಗೂ ಪ್ರಧಾನಿ ಮೋದಿ ಹತ್ಯೆಗೆ ಸಂಚುನಡೆಸಿದವರು ಸರ್ವನಾಶವಾಗಲಿ ಎಂದು ಪೂಜೆ ನಡೆಸುತ್ತಿದ್ದಾರೆ. ಸಂಸದ ಪ್ರತಾಪ್​ ಸಿಂಹ, ಶಾಸಕ ನಾಗೇಂದ್ರ ಮತ್ತಿತರ ಮುಖಂಡರು ನೇತೃತ್ವ ವಹಿಸಿದ್ದಾರೆ.