Featured

ಪ್ರಮೋದ್‌ ಮಧ್ವರಾಜ್‌ಗೆ ಒಂದು ಅವಕಾಶ ಕೊಡಿ, ಕ್ಷೇತ್ರದ ಅಭಿವೃದ್ಧಿಯೊಂದಿಗೆ ಈ ಭಾಗದ ಸಮಸ್ಯೆಗಳನ್ನು ಪರಿಹರಿಸುತ್ತೇನೆ : ಎಚ್‌ಡಿಕೆ -Vishwanews24

ಕಾರ್ಕಳ:ಈ ಬಾರಿ ಪ್ರಮೋದ್‌ ಮಧ್ವರಾಜ್‌ಅವರಿಗೊಂದು ಅವಕಾಶ ಕೊಡಿ. ಕ್ಷೇತ್ರದ ಅಭಿವೃದ್ಧಿಯೊಂದಿಗೆ ಈ ಭಾಗದ ಸಮಸ್ಯೆಗಳನ್ನು ಪರಿಹರಿಸುತ್ತೇನೆ ಎಂದು ಮನವಿ ಮಾಡಿಕೊಂಡರು.

ನಾನು ಮುಖ್ಯ ಮಂತ್ರಿಯಾದ ಬಳಿಕ ಎಣ್ಣೆಹೊಳೆ ಕಿಂಡಿ ಅಣೆಕಟ್ಟು ಯೋಜನೆಗೆ ಬಜೆಟ್‌ನಲ್ಲಿ 40 ಕೋಟಿ ರೂ., ತಾಲೂಕಿನ 222 ಶಾಲಾ ಸಂಪರ್ಕ ಸೇತುವೆಗಳಿಗೆ 12 ಕೋಟಿ ರೂ., ಗ್ರಾಮೀಣಾಭಿವೃದ್ಧಿಗೆ 7 ಕೋಟಿ ರೂ. ಬಿಡುಗಡೆಗೊಳಿಸಿದ್ದು, ಕಾರ್ಕಳದ ಅಭಿವೃದ್ಧಿಗೆ 9 ತಿಂಗಳಲ್ಲಿ ಒಟ್ಟು 58 ಕೋಟಿ ರೂ. ಅನುದಾನ ಒದಗಿಸಿಕೊಟ್ಟಿದ್ದೇನೆ ಎಂದು ಮುಖ್ಯ ಮಂತ್ರಿ ಕುಮಾರಸ್ವಾಮಿ ಹೇಳಿದರು.

ಅವರು ರವಿವಾರ ಮಂಜುನಾಥ ಪೈ ಸ್ಮಾರಕ ಸಭಾಭವನದಲ್ಲಿ ಕಾಂಗ್ರೆಸ್‌ ಹಾಗೂ ಜನತಾದಳ ಜಂಟಿಯಾಗಿ ಏರ್ಪಡಿಸಿದ ಸಮಾವೇಶದಲ್ಲಿ ಮಾತನಾಡಿದರು.

2012-13ರಲ್ಲಿ ಬಿಜೆಪಿ ಸರಕಾರ ಕಾರ್ಕಳಕ್ಕೆ ನೀಡಿರುವುದು 5 ಕೋಟಿ, 2013-14ರಲ್ಲಿ 8 ಕೋಟಿ ರೂ. , ಅನಂತರ ಬಂದ ಸಿದ್ದರಾಮಯ್ಯ ಸರಕಾರ 48 ಕೋಟಿ ರೂ. ನೀಡಿದೆ ಎಂದರು.

ದೇಶ ರಕ್ಷಕರು ಸೈನಿಕರು. ಸೇನಾ ಪಡೆಗೆ ರಾಷ್ಟ್ರಪತಿ ಮುಖ್ಯಸ್ಥರೇ ಹೊರತು ಪ್ರಧಾನಿಯಲ್ಲ. ಸೈನಿಕರಸಾಧನೆಯನ್ನೂ ಮೋದಿ ತನ್ನದೆನ್ನುತ್ತಿ ದ್ದಾರೆ. ಇಂದಿರಾ ಗಾಂಧಿ, ಲಾಲ್‌ ಬಹದ್ದೂರ್‌ಶಾಸ್ತ್ರಿಯವರೂ ಸೈನಿಕರ ಸಾಹಸವನ್ನು ತಮ್ಮ ಸರಕಾರದ್ದೆಂದು ಹೇಳಿಕೊಂಡಿರಲಿಲ್ಲ. ದೇವೇಗೌಡರು ಪ್ರಧಾನಿಯಾಗಿದ್ದ ವೇಳೆ ಭಯೋ ತ್ಪಾದಕ ಚಟುವಟಿಕೆಗಳಾಗಲಿ, ಇನ್ನಿತರ ಯಾವುದೇ ಅಹಿತಕರ ಘಟನೆಗಳಾಗಲಿ ನಡೆ‌ದಿರಲಿಲ್ಲ. ಹಾಗೆಂದು ಅದು ನಮ್ಮ ಸಾಧನೆ ಎಂದು ಹೇಳಿಕೊಂಡು ಬಂದಿರಲಿಲ್ಲ ಎಂದರು.

ರಾಜ್ಯ ಸರಕಾರವನ್ನು ಅಸ್ಥಿರಗೊಳಿ ಸುವ ತಂತ್ರ ರೂಪಿಸುತ್ತಿದ್ದ ಬಿಜೆಪಿಯವರು ನೆಮ್ಮದಿಯಾಗಿ ಆಡಳಿತ ನಡೆಸಲು ಬಿಡಲಿಲ್ಲ. ಸರಕಾರಕ್ಕೆ ಪದೇಪದೇ ಗಡುವು ನೀಡುವ ಮೂಲಕ ಅಧಿಕಾರಿಗಳು ಪರಿಣಾಮಕಾರಿ ಯಾಗಿ ಕೆಲಸ ನಿರ್ವಹಿಸದಂತೆ ತಡೆಯು ತ್ತಿದ್ದರು. ಇವೆಲ್ಲವುಗಳ ನಡುವೆ ನಾವು ಜನಪರ ಆಡಳಿತ ನೀಡಿದ್ದೇವೆ. ಅನೇಕ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತಂದಿದ್ದೇವೆ. ನಮ್ಮ ಕೆಲಸ ಕಾರ್ಯಗಳಿಗೆ ನಿರೀಕ್ಷಿತ ಪ್ರಚಾರ ಮಾತ್ರ ಸಿಗುತ್ತಿಲ್ಲ ಎಂದರು.

ಸಚಿವರಾದ ಡಾ| ಜಯಮಾಲಾ, ಯು.ಟಿ. ಖಾದರ್‌, ಮೈತ್ರಿ ಅಭ್ಯರ್ಥಿ ಪ್ರಮೋದ್‌ ಮಧ್ವರಾಜ್‌, ನಾಯಕರಾದ ಅಮರನಾಥ ಶೆಟ್ಟಿ, ಭೋಜೇಗೌಡ, ಬಿ.ಎಂ. ಫಾರೂಕ್‌, ಗೋಪಾಲ ಭಂಡಾರಿ, ಯು.ಆರ್‌. ಸಭಾಪತಿ, ಅಶೋಕ ಕುಮಾರ್‌ ಕೊಡವೂರು, ಉದಯ ಶೆಟ್ಟಿ ಮುನಿಯಾಲು, ಅಧ್ಯಕ್ಷ ಶೇಖರ್‌ ಮಡಿವಾಳ, ಯೋಗಿಶ್‌ ಶೆಟ್ಟಿ ವೇದಿಕೆ ಯಲ್ಲಿದ್ದರು. ಬಿಪಿನ್‌ ಚಂದ್ರಪಾಲ್‌ ಸಭೆ ನಿರ್ವಹಿಸಿದರು.

 

Vishwa News 24

Recent Posts

ಉಡುಪಿ : ಹೊಟೇಲ್ ಮುಚ್ಚುವ ಭೀತಿ ; ಜಿಲ್ಲೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ : ತಲ್ಲೂರು ಶಿವರಾಮ ಶೆಟ್ಟಿ – vishwanews24

ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…

5 days ago

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ – vishwanews24

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…

5 days ago

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ – vishwanews24

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…

5 days ago

ಉಡುಪಿ : ಗ್ಯಾಸ್ ಹೆಸರಿನಲ್ಲಿ ಸೈಬರ್ ವಂಚನೆ: ಅಪರಿಚಿತರಿಂದ ಬರುವ ಲಿಂಕ್‌, ಎಪಿಕೆ ಫೈಲ್‌ ಓಪನ್ ಮಾಡುವ ಮುನ್ನ ಎಚ್ಚರ : ಎಸ್ಪಿ ಮನವಿ – vishwanews24

ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…

5 days ago

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ ‘ಗೀತಾ’ – vishwanews24

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…

5 days ago

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿಯ ಬಂಧನ – vishwanews24

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…

5 days ago