ಉಡುಪಿ: ಬಿಜೆಪಿಯವರ ಪ್ರಚಾರಕ್ಕೆ ಮೋದಿಯೇ ಮುಖ. ಅವರು ಇಲ್ಲದಿದ್ದರೆ ದೇಶಕ್ಕೆ ರಕ್ಷಣೆಯೇ ಇಲ್ಲ ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ ಉಡುಪಿ ಮಂಗಳೂರಿನ ಜನರು ತುಂಬ ತಿಳಿವಳಿಕೆ ಇರುವವರು, ನೀವೇಕೆ ಮೋದಿಯನ್ನು ಬೆಂಬಲಿಸುತ್ತೀರಿ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಪ್ರಚಾರ ಸಭೆಯಲ್ಲಿ ಮಾತನಾಡಿ, ನಿಮಗೂ ಮೋದಿ ಮುಖವೇ ಇಷ್ಟವಾಗುತ್ತದೆ. ಮೋದಿಯವರು ಬೆಳಗ್ಗೆ ಹೊರಡುವಾಗ ವ್ಯಾಕ್ಸ್ ಮಾಡಿಸಿಕೊಳ್ಳುತ್ತಾರೆ. ಮುಖ ಪಳಪಳ ಹೊಳೆಯುವಂತೆ ಮಾಡಿಕೊಳ್ಳುತ್ತಾರೆ. ಆದರೆ ನಾವು ಬಿಸಿಲು, ಮಳೆಯಲ್ಲಿ ಓಡಾಡುತ್ತೇವೆ. ಇವತ್ತು ಮುಖ ತೊಳೆದರೆ ಮತ್ತೆ ನಾಳೆನೇ ತೊಳೆಯೋದು. ಹಾಗಾಗಿ ನಾನು ನಿಮಗೆ ಇಷ್ಟವಾಗೋದಿಲ್ಲ, ಮೋದಿಯವರೇ ಇಷ್ಟವಾಗುತ್ತಾರೆ ಎಂದು ವ್ಯಂಗ್ಯವಾಗಿ ಹೇಳಿದರು.
ಇತ್ತೀಚೆಗೆ ಒಂದು ಶೋಕಿ ಶುರುವಾಗಿದೆ. ನಾವೆಲ್ಲ ರಸ್ತೆಯಲ್ಲಿ ಹೋಗುತ್ತಿದ್ದರೆ ಯುವಕರು ಮೋದಿ, ಮೋದಿ ಎಂದು ಕೂಗುತ್ತಾರೆ. ಹಾಗೆ ಕೂಗುವವರಿಗೆ ಮೋದಿ ಏನು ಮಾಡಿದ್ದಾರೆ? ಕರಾವಳಿಯವರ ಬಗ್ಗೆ ನಾನು ಯಾವತ್ತೂ ಲಘುವಾಗಿ ಮಾತನಾಡಿಲ್ಲ. ಈ ಭಾಗದ ಮೂರು ಜಿಲ್ಲೆಗಳ ಜನರು ಉತ್ತಮ ತಿಳಿವಳಿಕೆ ಇರುವವರು. ಯಾಕೆ ಸುಮ್ಮನೆ ಬಿಜೆಪಿಯನ್ನು ಬೆಂಬಲಿಸುತ್ತೀರಿ ಎಂದು ಕೇಳಿದ್ದೇನೆ ಅಷ್ಟೇ ಎಂದರು.
ಊರಿಗೆ ಶಾಲೆ ಬೇಕೆಂದರೆ ಕುಮಾರಸ್ವಾಮಿ ಬೇಕು. ಆದರೆ ವೋಟು ಮೋದಿಗೆ ಹಾಕುತ್ತೇವೆ ಎನ್ನುತ್ತಾರೆ. ಮೋದಿ ಒಬ್ಬರೇನಾ ದೇಶ ರಕ್ಷಣೆ ಮಾಡುವವರು? ವಾಜಪೇಯಿ ಈ ರಾಷ್ಟ್ರಕ್ಕೆ ಭದ್ರತೆ ನೀಡಿಲ್ಲವಾ? ಮಂಗಳೂರು ಮೂಲದ ಸಂಸ್ಥೆಯನ್ನು ದಿವಾಳಿ ಎಬ್ಬಿಸಿದ್ದಾರೆ. ವಿಜಯ ಬ್ಯಾಂಕ್ನ್ನು ಗುಜರಾತ್ನ ಬರೋಡಾ ಬ್ಯಾಂಕ್ಗೆ ವಿಲೀನ ಮಾಡಿದ್ದಾರೆ. ಆದರೆ ವಿಜಯ ಬ್ಯಾಂಕ್ ಉಳಿವಿಗಾಗಿ ದೇವೇಗೌಡರು ಕೊಡುಗೆ ಕೊಟ್ಟಿದ್ದಾರೆ ಎಂದು ಹೇಳಿದರು.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…