ಕಾರ್ಕಳ:ಈ ಬಾರಿ ಪ್ರಮೋದ್ ಮಧ್ವರಾಜ್‌ಅವರಿಗೊಂದು ಅವಕಾಶ ಕೊಡಿ. ಕ್ಷೇತ್ರದ ಅಭಿವೃದ್ಧಿಯೊಂದಿಗೆ ಈ ಭಾಗದ ಸಮಸ್ಯೆಗಳನ್ನು ಪರಿಹರಿಸುತ್ತೇನೆ ಎಂದು ಮನವಿ ಮಾಡಿಕೊಂಡರು.
ನಾನು ಮುಖ್ಯ ಮಂತ್ರಿಯಾದ ಬಳಿಕ ಎಣ್ಣೆಹೊಳೆ ಕಿಂಡಿ ಅಣೆಕಟ್ಟು ಯೋಜನೆಗೆ ಬಜೆಟ್‌ನಲ್ಲಿ 40 ಕೋಟಿ ರೂ., ತಾಲೂಕಿನ 222 ಶಾಲಾ ಸಂಪರ್ಕ ಸೇತುವೆಗಳಿಗೆ 12 ಕೋಟಿ ರೂ., ಗ್ರಾಮೀಣಾಭಿವೃದ್ಧಿಗೆ 7 ಕೋಟಿ ರೂ. ಬಿಡುಗಡೆಗೊಳಿಸಿದ್ದು, ಕಾರ್ಕಳದ ಅಭಿವೃದ್ಧಿಗೆ 9 ತಿಂಗಳಲ್ಲಿ ಒಟ್ಟು 58 ಕೋಟಿ ರೂ. ಅನುದಾನ ಒದಗಿಸಿಕೊಟ್ಟಿದ್ದೇನೆ ಎಂದು ಮುಖ್ಯ ಮಂತ್ರಿ ಕುಮಾರಸ್ವಾಮಿ ಹೇಳಿದರು.
ಅವರು ರವಿವಾರ ಮಂಜುನಾಥ ಪೈ ಸ್ಮಾರಕ ಸಭಾಭವನದಲ್ಲಿ ಕಾಂಗ್ರೆಸ್ ಹಾಗೂ ಜನತಾದಳ ಜಂಟಿಯಾಗಿ ಏರ್ಪಡಿಸಿದ ಸಮಾವೇಶದಲ್ಲಿ ಮಾತನಾಡಿದರು.
2012-13ರಲ್ಲಿ ಬಿಜೆಪಿ ಸರಕಾರ ಕಾರ್ಕಳಕ್ಕೆ ನೀಡಿರುವುದು 5 ಕೋಟಿ, 2013-14ರಲ್ಲಿ 8 ಕೋಟಿ ರೂ. , ಅನಂತರ ಬಂದ ಸಿದ್ದರಾಮಯ್ಯ ಸರಕಾರ 48 ಕೋಟಿ ರೂ. ನೀಡಿದೆ ಎಂದರು.
ದೇಶ ರಕ್ಷಕರು ಸೈನಿಕರು. ಸೇನಾ ಪಡೆಗೆ ರಾಷ್ಟ್ರಪತಿ ಮುಖ್ಯಸ್ಥರೇ ಹೊರತು ಪ್ರಧಾನಿಯಲ್ಲ. ಸೈನಿಕರಸಾಧನೆಯನ್ನೂ ಮೋದಿ ತನ್ನದೆನ್ನುತ್ತಿ ದ್ದಾರೆ. ಇಂದಿರಾ ಗಾಂಧಿ, ಲಾಲ್ ಬಹದ್ದೂರ್‌ಶಾಸ್ತ್ರಿಯವರೂ ಸೈನಿಕರ ಸಾಹಸವನ್ನು ತಮ್ಮ ಸರಕಾರದ್ದೆಂದು ಹೇಳಿಕೊಂಡಿರಲಿಲ್ಲ. ದೇವೇಗೌಡರು ಪ್ರಧಾನಿಯಾಗಿದ್ದ ವೇಳೆ ಭಯೋ ತ್ಪಾದಕ ಚಟುವಟಿಕೆಗಳಾಗಲಿ, ಇನ್ನಿತರ ಯಾವುದೇ ಅಹಿತಕರ ಘಟನೆಗಳಾಗಲಿ ನಡೆದಿರಲಿಲ್ಲ. ಹಾಗೆಂದು ಅದು ನಮ್ಮ ಸಾಧನೆ ಎಂದು ಹೇಳಿಕೊಂಡು ಬಂದಿರಲಿಲ್ಲ ಎಂದರು.
ರಾಜ್ಯ ಸರಕಾರವನ್ನು ಅಸ್ಥಿರಗೊಳಿ ಸುವ ತಂತ್ರ ರೂಪಿಸುತ್ತಿದ್ದ ಬಿಜೆಪಿಯವರು ನೆಮ್ಮದಿಯಾಗಿ ಆಡಳಿತ ನಡೆಸಲು ಬಿಡಲಿಲ್ಲ. ಸರಕಾರಕ್ಕೆ ಪದೇಪದೇ ಗಡುವು ನೀಡುವ ಮೂಲಕ ಅಧಿಕಾರಿಗಳು ಪರಿಣಾಮಕಾರಿ ಯಾಗಿ ಕೆಲಸ ನಿರ್ವಹಿಸದಂತೆ ತಡೆಯು ತ್ತಿದ್ದರು. ಇವೆಲ್ಲವುಗಳ ನಡುವೆ ನಾವು ಜನಪರ ಆಡಳಿತ ನೀಡಿದ್ದೇವೆ. ಅನೇಕ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತಂದಿದ್ದೇವೆ. ನಮ್ಮ ಕೆಲಸ ಕಾರ್ಯಗಳಿಗೆ ನಿರೀಕ್ಷಿತ ಪ್ರಚಾರ ಮಾತ್ರ ಸಿಗುತ್ತಿಲ್ಲ ಎಂದರು.
ಸಚಿವರಾದ ಡಾ| ಜಯಮಾಲಾ, ಯು.ಟಿ. ಖಾದರ್, ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್, ನಾಯಕರಾದ ಅಮರನಾಥ ಶೆಟ್ಟಿ, ಭೋಜೇಗೌಡ, ಬಿ.ಎಂ. ಫಾರೂಕ್, ಗೋಪಾಲ ಭಂಡಾರಿ, ಯು.ಆರ್. ಸಭಾಪತಿ, ಅಶೋಕ ಕುಮಾರ್ ಕೊಡವೂರು, ಉದಯ ಶೆಟ್ಟಿ ಮುನಿಯಾಲು, ಅಧ್ಯಕ್ಷ ಶೇಖರ್ ಮಡಿವಾಳ, ಯೋಗಿಶ್ ಶೆಟ್ಟಿ ವೇದಿಕೆ ಯಲ್ಲಿದ್ದರು. ಬಿಪಿನ್ ಚಂದ್ರಪಾಲ್ ಸಭೆ ನಿರ್ವಹಿಸಿದರು.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…