ಪ್ರವೀಣ್ ನೆಟ್ಟಾರು ಕನಸಿನ ಮನೆ ನನಸು ಮಾಡಲು ಕುಟುಂಬಸ್ಥರ ಜತೆ ನಳಿನ್ ಕುಮಾರ್ ಮಾತುಕತೆ – Vishwanews24

Featured, ದಕ್ಷಿಣ ಕನ್ನಡ

ಪ್ರವೀಣ್ ನೆಟ್ಟಾರು ಕನಸಿನ ಮನೆ ನನಸು ಮಾಡಲು ಕುಟುಂಬಸ್ಥರ ಜತೆ ನಳಿನ್ ಕುಮಾರ್ ಮಾತುಕತೆ

ಸವಣೂರು : ದುಷ್ಕರ್ಮಿಗಳ ದಾಳಿಗೆ ಬಲಿಯಾದ ಬಿಜೆಪಿ ಯುವಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಕನಸಿನ ಮನೆಯನ್ನು ನನಸು ಮಾಡುವ ನಿಟ್ಟಿನಲ್ಲಿ ಸಂಸದ,ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಪ್ರವೀಣ್ ನೆಟ್ಟಾರು ಅವರ ಕುಟುಂಬಸ್ಥರ ಜತೆ ಕುಂಜಾಡಿಯಲ್ಲಿ ಮಾತುಕತೆ ನಡೆಸಿದರು.

ಮೊನ್ನೆ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರವೀಣ್ ನೆಟ್ಟಾರು ಅವರ ಪತ್ನಿಗೆ ಸರಕಾರಿ ಉದ್ಯೋಗ ನೀಡುವ ಆಜ್ಞೆ ಮಾಡಿದ್ದರು. ಇದೀಗ ಬಿಜೆಪಿ ರಾಜ್ಯಾಧ್ಯಕ್ಷರು ಪ್ರವೀಣ್ ಅವರ ಸ್ವಗೃಹ ನಿರ್ಮಾಣದ ಕನಸನ್ನು ನನಸಾಗಿಸಲು ಪ್ರವೀಣ್ ಅವರ ಕುಟುಂಬಸ್ಥರ ಜೊತೆ ಮಾತುಕತೆ ನಡೆಸಿದ್ದಾರೆ.

ಸಂಸದ ನಳಿನ್​ ಕುಮಾರ್ ಕಟೀಲ್​ಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ; ಅರವಿಂದ ಲಿಂಬಾವಳಿಗೆ  ಮತ್ತೆ ನಿರಾಸೆ | MP Nalin Kumar Kateel Appointed As BJP State President–  News18 Kannada

ನಳಿನ್ ತವರು ಮನೆಯಾದ ಸವಣೂರು ಸಮೀಪದ‌ ಕುಂಜಾಡಿ ಮನೆಯಲ್ಲಿ ಪ್ರವೀಣ್ ನೆಟ್ಟಾರು ಕುಟುಂಬಸ್ಥರನ್ನು ಭೇಟಿ ಯಾಗಿದ್ದಾರೆ. ಪ್ರವೀಣ್ ಪತ್ನಿಗೆ ಸರಕಾರಿ ಉದ್ಯೋಗ ನೀಡಲು ಸಹಕರಿಸಿದ ಸಂಸದರಿಗೆ ಪ್ರವೀಣ್ ಕುಟುಂಬ ಧನ್ಯವಾದ ಸಮರ್ಪಿಸಿದೆ.

Breaking: ಪ್ರವೀಣ್ ನೆಟ್ಟಾರು ಹತ್ಯೆ ಹಿಂದೆ ಹಲವು ಶಕ್ತಿಗಳ ಕೈವಾಡ: ಆರಗ ಜ್ಞಾನೇಂದ್ರ |  Home Minister Araga Jnanendra Condemn Praveen Nettar Murder, says culprits  will be arrested soon - Kannada Oneindia

ಈ ಸಂದರ್ಭದಲ್ಲಿ ಪ್ರವೀಣ್ ಅವರ ತಂದೆ ಶೇಖರ್ ಪೂಜಾರಿ,ರತ್ನಾವತಿ, ಪತ್ನಿ ನೂತನ,ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ,ಪ್ರಮುಖರಾದ ಆರ್.ಕೆ.ಭಟ್ ,ಸಹಜ್ ರೈ ಮೊದಲಾದವರಿದ್ದರು.

ಕುಂದಾಪುರ: ಬೆಂಗಳೂರಿನಲ್ಲಿ ಸ್ಕೂಟಿ ಹಾಗೂ ಟ್ಯಾಂಕರ್ ಅಪಘಾತ – ಬೈಂದೂರಿನ ಮಹಿಳೆ ಸಾವು – Vishwanews24

 

Leave a Reply