ಬಳ್ಳಾರಿ: ಪ್ರಸ್ತುತ ವರ್ಷದಲ್ಲಿ ವಿಶ್ವದಾದ್ಯಂತ ನೋಡಲೇಬೇಕಾದ 52 ಪ್ರೇಕ್ಷಣೀಯ ಸ್ಥಳಗಳ ಪಟ್ಟಿಯನ್ನು ಅಮೆರಿಕದ ಪ್ರಸಿದ್ಧ ‘ನ್ಯೂಯಾರ್ಕ್ ಟೈಮ್ಸ್’ ಬಿಡುಗಡೆ ಮಾಡಿದ್ದು, ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿರುವ ಪ್ರಮುಖ ಪ್ರೇಕ್ಷಣೀಯ ತಾಣ ಹಂಪಿಗೆ 2 ನೇ ಸ್ಥಾನ ನೀಡಲಾಗಿದೆ.
ಭಾರತದಿಂದ ಈ ಪಟ್ಟಿಯನ್ನು ಸೇರಿದ ಏಕೈಕ ತಾಣವಾಗಿ ಹಂಪಿ ಹೊರಹೊಮ್ಮಿದ್ದು, ವಿಜಯನಗರ ಅರಸರು ಆಳ್ವಿಕೆ ನಡೆಸಿದ ನೆಲ ಮತ್ತೆ ವಿಶ್ವದ ಗಮನ ಸೆಳೆದಿದೆ. ಮೊದಲನೇ ಸ್ಥಾನವನ್ನು ಕೆರಿಬಿಯನ್ ದ್ವೀಪವಾದ ಪೋರ್ಟೋ ರಿಕೊ ಪಡೆದಿದ್ದರೆ, ಪ್ರವಾಸಿಗರು ನೋಡಬಹುದಾದ ವಿಶ್ವದ 2ನೇ ಸ್ಥಳವಾಗಿ ಹಂಪಿಯನ್ನು ಗುರುತಿಸಲಾಗಿದೆ. ಕ್ಯಾಲಿಪೋರ್ನಿಯಾದ ಸಾಂತಾ ಬಾರ್ಬರಾಗೆ 3 ಸ್ಥಾನ ನೀಡಲಾಗಿದೆ. 2016-17 ನೇ ಸಾಲಿನಲ್ಲಿ 5.35 ಲಕ್ಷ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿದ್ದರೆ, 38 ಸಾವಿರ ವಿದೇಶಿ ಪ್ರವಾಸಿಗರು ಎಂಬುದು ಗಮನಾರ್ಹ. ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿಗರನ್ನು ಆಕರ್ಷಿಸುತ್ತಿರುವ ಹಂಪಿಗೆ ಈ ಪಟ್ಟ ಸಿಕ್ಕಿರುವುದು, ರಾಜ್ಯದ ಪಾಲಿಗೆ ಹೆಮ್ಮೆಯ ಸಂಗತಿಯೆನಿಸಿದೆ.
ಕೆರಿಬಿಯನ್ ದ್ವೀಪ ಸಮೂಹದಲ್ಲಿರುವ ಪೋರ್ಟೋ ರಿಕೋಗೆ ಮೊದಲ ಸ್ಥಾನ, ಕ್ಯಾಲಿಫೋರ್ನಿಯಾದ ಸಾಂತಾ ಬಾರ್ಬರಾಗೆ 3ನೇ ಸ್ಥಾನ ಲಭಿಸಿದೆ. ಇನ್ನುಳಿದಂತೆ ಪನಾಮಾ, ಮ್ಯೂನಿಕ್‌ಗಳು ನಂತರದ ಸ್ಥಾನದಲ್ಲಿವೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…